ಫೋಟೋ - 25ಎಂವೈಎಸ್ 45ಕನ್ನಡಪ್ರಭ ವಾರ್ತೆ ಮೈಸೂರುಕಲೆ ಮಾನವನ ಉನ್ನತಿಗೆ ಮತ್ತು ಸಂತೋಷಕ್ಕೆ ಕಾರಣ ಎಂದು ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ ಅಭಿಪ್ರಾಯಪಟ್ಟರು.ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಕಲಾ ಸಂಭ್ರಮ 2026 ರಾಜ್ಯಮಟ್ಟದ ’ವರ್ಧಿನಿ’ ಫೆಸ್ಟ್ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಕಲೆ ಮಾನವನ ಉನ್ನತಿಗೆ ಮತ್ತು ಸಂತೋಷಕ್ಕೆ ಕಾರಣ. ಕಲೆ ಇಲ್ಲದೆ ಜೀವನವಿಲ್ಲ. ಜಾನಪದ ಜೀವನದ ನಿಜವಾದ ಬೇರು. ಮನುಷ್ಯ ಹುಟ್ಟಿನಿಂದ ಸಾಯುವ ತನಕ ಕ್ರಿಯಾಶೀಲತೆ ಮತ್ತು ಕಲಾತ್ಮಕತೆಯಲ್ಲಿ ತೊಡಗಿರುತ್ತಾನೆ. ಜನಪದ ಕಲಾವಿದರು ಪರಂಪರೆಯನ್ನು ರೂಢಿಸಿಕೊಂಡು ಬೆಳೆಸಿದ್ದಾರೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ಮಾತನಾಡಿ, ಕಲಾ ಸಂಭ್ರಮದಲ್ಲಿ ವಿಜೇತರನ್ನು ಅಭಿನಂದಿಸಿ, ವಿದ್ಯಾರ್ಥಿಗಳು ಸೋಲು ಗೆಲುವಿಗೆ ಮೆಟ್ಟಿಲಾಗುತ್ತದೆ ಎಂಬುದನ್ನು ತಿಳಿಯಬೇಕು ಎಂದರು.ಪ್ರಾಂಶುಪಾಲ ಡಾ. ರೇಚಣ್ಣ ಅವರು ಸಂಚಾಲಕಿ ಹೊನ್ನಶೆಟ್ಟಿ ಇದ್ದರು. ಅಮೂಲ್ಯ ವರ್ಧಿನಿ 2026 ಫೆಸ್ಟ್‌ನ ವರದಿ ಮಂಡಿಸಿದರು.ಚಂದನ ಮತ್ತು ತಂಡದವರು ಪ್ರಾರ್ಥಿಸಿದರು. ಡಿ.ಎಸ್. ಸಹನಾ ಸ್ವಾಗತಿಸಿದರು. ಎಂ. ಚಂದನಾ ವಂದಿಸಿದರು. ಎಂ.ಎಲ್. ಅಮೂಲ್ಯ ನಿರೂಪಿಸಿದರು. ಮಹಾರಾಜ ಕಾಲೇಜಿಗೆ ಸಮಗ್ರ ಪ್ರಶಸ್ತಿಮೈಸೂರಿನ ಮಹಾರಾಜ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು. ಹೆಜ್ಜೆ ಗೆಜ್ಜೆ ಏಕವ್ಯಕ್ತಿ ಸ್ಪರ್ಧೆಯಲ್ಲಿ ಮೈಕಾಸ್ ಕಾಲೇಜಿನ ಎಸ್. ಹರ್ಷಿತಾ ಪ್ರಥಮ, ಸಂತ ಜೋಸೆಫ್‌ಕಾಲೇಜಿನ ಧೀರಜ್ ಸಿಂಗ್ ದ್ವಿತೀಯ. ಸಮೂಹ ನೃತ್ಯದಲ್ಲಿ ಮಹಾರಾಜ ಕಾಲೇಜು ಲೇಖನ ಮತ್ತು ತಂಡ ಪ್ರಥಮ, ಜೆಎಸ್‌ಎಸ್ ಸ್ಕೂಲ್‌ಆಫ್‌ಲೈಫ್‌ಸೈನ್ಸ್ ನ ಜಾನು ಮತ್ತು ತಂಡ ದ್ವಿತೀಯ. ರಾಗನಿನಾದ ಏಕವ್ಯಕ್ತಿ ಪ್ರದರ್ಶನದಲ್ಲಿ ಮಹಾರಾಜ ಕಾಲೇಜಿನ ಸಿ. ಯೋಗಶ್ರೀ ಪ್ರಥಮ, ಜೆಎಸ್‌ಎಸ್ ದಂತ ವೈದ್ಯ ಕಾಲೇಜಿನ ಕವನ ಎಸ್. ಆರಾಧ್ಯಾ ದ್ವಿತೀಯ. ಸಮೂಹ ಗಾಯನದಲ್ಲಿ ಶೇಷಾದ್ರಿಪುರಂ ಕಾಲೇಜಿನ ರುಚಿತ ಮತ್ತು ತಂಡ ಪ್ರಥಮ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಆಕಲೇಜಿನ ಭೂಮಿಕಾ ಮತ್ತು ತಂಡ ದ್ವಿತೀಯ ಸ್ಥಾನ ಗಳಿಸಿತು.ವರ್ಣ ಚಿತ್ತಾರ ರಂಗೋಲಿ ಸ್ಪರ್ಧೆಯಲ್ಲಿ ಎಸ್.ಡಿಎಂ ಕಾಲೇಜಿನ ಎಸ್. ಸಂಜನಾ ಪ್ರಥಮ, ಶೇಷಾದ್ರಿಪುರಂ ಪದವಿ ಕಾಲೇಜಿನ ಆರ್. ಭಾವನಾ ದ್ವಿತೀಯ, ಭಾವನವೀನ ಸ್ವರಚಿತ ಕವನ ವಾಚನದಲ್ಲಿ ಎಸ್.ಡಿ.ಎಂ ಕಾಲೇಜಿನ ಕೆ. ನಿಸರ್ಗ ಪ್ರಥಮ, ಸಂತ ಫಿಲೋಮಿನಾ ಕಾಲೇಜಿನ ಲಾವಣ್ಯ ದ್ವಿತೀಯ. ವಾಗ್ವಿಲಾಸದಲ್ಲಿ ಮಹಾರಾಜ ಕಾಲೇಜಿನ ಎ.ಎಸ್. ನಂದೀಶ ಪ್ರಥಮ, ಎಸ್.ಡಿ.ಎಂ ಕಾಲೇಜಿನ ಎಂ.ಆರ್. ವರ್ಷ ದ್ವಿತೀಯ ಸ್ಥಾನ ಗಳಿಸಿದರು.ರಸಪಾಕ ಇಂಧನ ರಹಿತ ಅಡುಗೆ ಸ್ಪರ್ಧೆಯಲ್ಲಿ ಮಹಾರಾಜ ಕಾಲೇಜಿನ ಎಂ.ಆರ್. ದೀಪಿಕಾ ಪ್ರಥಮ, ಮಹಾರಾಜ ಕಾಲೇಜಿನ ಕೆ.ಎಂ. ಯೋಗೇಶ್ವರಿ ದ್ವಿತೀಯ ಸ್ಥಾನ ಗಳಿಸಿದರು.