ರಾಜ್ಯಮಟ್ಟದ ವಾಲಿಬಾಲ್‌: ಮಂಗಳೂರು ಚಾಂಪಿಯನ್‌

KannadaprabhaNewsNetwork |  
Published : Mar 19, 2024, 12:47 AM IST
ಫೋಟೋ ಮಾ.೧೮ ವೈ.ಎಲ್.ಪಿ. ೦೩ | Kannada Prabha

ಸಾರಾಂಶ

ಮಾ. ೧೫ರಂದು ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ವರಸಿದ್ಧಿವಿನಾಯಕ ವಾರಿಯರ್ಸ್ ಗೋರ್ಸಗದ್ದೆ ಫ್ರಾಂಚೈಸಿಯ ಮಂಗಳೂರು ತಂಡ ಚಾಂಪಿಯನ್ ಆಗಿ ಆಯ್ಕೆಗೊಂಡಿತು.

ಯಲ್ಲಾಪುರ: ಗೋರ್ಸಗದ್ದೆಯ ವರಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್, ಹಾಸಣಗಿ ಮತ್ತು ಕಂಪ್ಲಿಯ ಗ್ರಾಪಂ, ಉಮ್ಮಚಗಿಯ ಶ್ರೀಮಾತಾ ವಿ.ಸೌ.ಸ. ಸಂಘ, ವಿವಿಧ ದಾನಿಗಳ ಹಾಗೂ ಪ್ರಾಯೋಜಕರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಹಾಸಣಗಿ ಬಳಿಯ ಒಳ್ಳೇಸರದ ಕ್ರೀಡಾಂಗಣದಲ್ಲಿ ಮಾ. ೧೫ರಂದು ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ವರಸಿದ್ಧಿವಿನಾಯಕ ವಾರಿಯರ್ಸ್ ಗೋರ್ಸಗದ್ದೆ ಫ್ರಾಂಚೈಸಿಯ ಮಂಗಳೂರು ತಂಡ ಚಾಂಪಿಯನ್ ಆಗಿ ಆಯ್ಕೆಗೊಂಡಿತು. ಮಂಚೀಕೇರಿಯ ಶ್ರೀಸಾಯಿ ಪ್ರಾಂಚೈಸಿಯ ರೈಲ್ವೇಸ್ ತಂಡ ದ್ವಿತೀಯ, ಒಳ್ಳೇಸರದ ಶ್ರೀನಾಗ ಸ್ವರ್ಣಯಕ್ಷಿ ಪ್ರಾಂಚೈಸಿಯ ಕುಮಟಾದ ಬರ್ಗಿ ತಂಡ ತೃತೀಯ, ಮಂಚೀಕೇರಿಯ ಶ್ರೀ ಮಹಿಷಾಸುರಮರ್ದಿನಿ ಪ್ರಾಂಚೈಸಿಯ ಆಳ್ವಾಸ್ ತಂಡ ಚತುರ್ಥ ಸ್ಥಾನ ಪಡೆದವು.

ಪಂದ್ಯಾವಳಿಯನ್ನು ಹಿರಿಯ ಸಹಕಾರಿ ಆರ್.ಎನ್. ಹೆಗಡೆ ಗೋರ್ಸಗದ್ದೆ ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ ವಿದ್ಯುತ್ ದೀಪಾಲಂಕೃತ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಹಾಸಣಗಿ ಗ್ರಾಪಂ ಅಧ್ಯಕ್ಷೆ ವಿನೋದಾ ಬಿಲ್ಲವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಿಗ್ವಿ ಶೆಟ್ಟಿ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಎಂ.ಕೆ. ಭಟ್ಟ ಯಡಳ್ಳಿ ಸ್ವಾಗತಿಸಿದರು. ಶಿಕ್ಷಕ ಸತೀಶ ಶೆಟ್ಟಿ ನಿರ್ವಹಿಸಿದರು. ಮಂಗಳೂರು, ಮಹಾರಾಷ್ಟ್ರ, ಚಿಕ್ಕಮಗಳೂರು, ಹುಬ್ಬಳ್ಳಿ ರೈಲ್ವೇಸ್, ಕುಮಟಾದ ಬರ್ಗಿ, ಶಿವಮೊಗ್ಗ ಹಾಗೂ ಮೂಡಬಿದ್ರೆಯ ಆಳ್ವಾಸ್ ಸೇರಿದಂತೆ ಒಟ್ಟೂ ೭ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!