ಬಸವೇಶ್ವರ ಆಸ್ಪತ್ರೆಗೆ ಅತ್ಯಾಧುನಿಕ ಐಸಿಯು ಘಟಕ ನಾಳೆ ಲೋಕಾರ್ಪಣೆ

KannadaprabhaNewsNetwork |  
Published : Sep 04, 2025, 01:00 AM IST
ಫೋಟೋ- ಬಸವ 1ಹೈಕಶಿ ಂಸಸ್ಥೆ ಅಧ್ಯಕ್ಷ ಶಶಿಲ್‌ ನಮೋಶಿ ಹಾಗೂ ತಂಡದವರು ಬಸವೇಶ್ವರ ಆಸ್ಪತ್ರೆಯಲ್ಲಿಂದು ಸುದ್ದಿಗೋಷ್ಠಿ ನಡೆಸಿದರು | Kannada Prabha

ಸಾರಾಂಶ

ಹೈಕ ಶಿ ಸಂಸ್ಥೆಯ ಅಡಿ ಬಸವೇಶ್ವರ ಆಸ್ಪತ್ರೆಗೆ ಕಾಯಕಲ್ಪ ನೀಡಲು ಅಧ್ಯಕ್ಷ ಶಶಿಲ್ ನಮೋಶಿ, ರಾಜಾ ಭೀಮಳ್ಳಿ, ಉದಯ ಚಿಂಚೋಳಿ, ಸಂಚಾಲಕರು ಡಾ. ಕಿರಣ್ ದೇಶಮುಖ್ ಸೇರಿದಂತೆ ಆಡಳಿತ ಮಂಡಳಿಯ ತಂಡ ಸಂಕಲ್ಪ ಮಾಡಿ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಹೈಕ ಶಿ ಸಂಸ್ಥೆಯ ಅಡಿ ಬಸವೇಶ್ವರ ಆಸ್ಪತ್ರೆಗೆ ಕಾಯಕಲ್ಪ ನೀಡಲು ಅಧ್ಯಕ್ಷ ಶಶಿಲ್ ನಮೋಶಿ, ರಾಜಾ ಭೀಮಳ್ಳಿ, ಉದಯ ಚಿಂಚೋಳಿ, ಸಂಚಾಲಕರು ಡಾ. ಕಿರಣ್ ದೇಶಮುಖ್ ಸೇರಿದಂತೆ ಆಡಳಿತ ಮಂಡಳಿಯ ತಂಡ ಸಂಕಲ್ಪ ಮಾಡಿ ಮುಂದುವರೆದಿದೆ.

ಈ ತಂಡದ ಸಂಕಲ್ಪದ ಫಲವಾಗಿ ಈಗಾಗಲೇ 7ಕೋಟಿ ರು. ವೆಚ್ಚದಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ 32 ಹಾಸಿಗೆ ಸಾಮರ್ಥ್ಯದ ತುರ್ತು ವೈದ್ಯಕೀಯ ವಿಭಾಗವನ್ನು ಸ್ಥಾಪಿಸಲಾಗಿದ್ದು ಸೆ.5ರಂದು ಇದನ್ನು ಜನತೆಗೆ ಲೋಕಾರ್ಪಣೆ ಮಾಡಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿರುವ ಅಧ್ಯಕ್ಷ ಸಶಿಲ್‌ ನಮೋಶಿ, ಉಪಾಧ್ಯಕ್ಷ ರಾಜಾ ಭೀಮಳ್ಳಿ, ಅಂದಾಜು 6 ರಿಂದ 7ಕೋಟಿ ರು. ವೆಚ್ಚ ಮಾಡಿ ಈ ಕೆಲಸವಾಗಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ಬಸವೇಶ್ವರ ಆಸ್ಪತ್ರೆ ಆಧುನೀಕರಣಕ್ಕೆ ಹೆಚ್ಚಿನ ನಿಗಾ ವಹಿಸಲಾಗುವುದು. ಸಂಗಮೇಶ್ವರ ಆಸ್ಪತ್ರೆ ಕೆಡವಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ತುರ್ತು ವೈದ್ಯಕೀಯ ವಿಭಾಗವು 32 ಹಾಸಿಗೆಗಳೊಂದಿಗೆ ಟ್ರಯಾಜ್ ವಿಭಾಗ, 6 ಹಾಸಿಗೆಗಳ ಶ್ವಾಸಕೋಶ ಪುನರುಜ್ಜೀವನ (Resuscitation) ವಿಭಾಗ, 6 ಹಾಸಿಗೆಗಳ ಐಸಿಯು (ICU), 14 ಹಾಸಿಗೆಗಳ ಮಾನಿಟರಿಂಗ್ ವಿಭಾಗ, 6 ಹಾಸಿಗೆಗಳ ಐಸೋಲೇಷನ್ ಐಸಿಯು, ವಿಶೇಷ ತುರ್ತು ಶಸ್ತ್ರಚಿಕಿತ್ಸಾ ವಲಯ, ಹಾಸಿಗೆ ಪಕ್ಕದ ತಪಾಸಣಾ ಸಾಧನಗಳು, 2ಡಿ ಇಕೋ, ಹಾಸಿಗೆ ಪಕ್ಕದ ಎಕ್ಸ್-ರೇ ಇವುಗಳೊಂದಿಗೆ ಸುಸಜ್ಜಿತವಾಗಿದೆ.

ಆಸ್ಪತ್ರೆಯನ್ನು ತುರ್ತು ಚಿಕಿತ್ಸೆಗೆ ಅಣಿಗೊಳಿಸಲಾಗಿದೆ. ಹೈದ್ರಾಬಾದ್‌ನ ಸ್ಟಾರ್‌ ಆಸ್ಪತ್ರೆಯ ಸಹಯೋಗದಲ್ಲಿ ಅಂಬುಲನ್ಸ್‌ ಸೇವೆ, ತುರ್ತು ಚಿಕಿತ್ಸೆ ತರಬೇತಿ ಪಡೆದ ವೈದ್ಯರು ಮತ್ತು ನರ್ಸ್ ತಂಡವು 24/7 ಕೆಲಸಕ್ಕೆ ಸಿದ್ಧವಿದೆ ಎಂದರು.

ಸುಸಜ್ಜಿತ ಅಂಬುನಲನ್ಸ್‌ ಸೇವೆ

ಇಂಟ್ಯೂಬೇಷನ್, ವೆಂಟಿಲೇಟರ್ ಹಾಗೂ ಇತರ ಅಗತ್ಯ ವೈದ್ಯಕೀಯ ಉಪಕರಣಗಳಿಂದ 24 ಗಂಟೆಗಳ ಆಂಬ್ಯುಲೆನ್ಸ್ ಸೇವೆ ಸಜ್ಜಾಗಿದೆ. ಪ್ರತಿ ಆಂಬ್ಯುಲೆನ್ಸ್‌ನಲ್ಲೂ ತರಬೇತಿ ಪಡೆದ ತುರ್ತು ವೈದ್ಯಕೀಯ ತಾಂತ್ರಿಕ ಸಿಬ್ಬಂದಿ ಲಭ್ಯ. ರೋಗಿಯು ಅಂಬುಲೆನ್ಸ್ ನಲ್ಲಿ ಬಂದ ಕ್ಷಣದಿಂದಲೇ ತುರ್ತು ವೈದ್ಯಕೀಯ ವಿಭಾಗದ ವೈದ್ಯರೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಆಧುನಿಕರಣಗೊಂಡ ಐಸಿಯೂ ಘಟಕವು ಸೆ.5ರಂದು ಲೋಕಾರ್ಪಣೆಗೊಳ್ಳಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಉದ್ಘಾಟಿಸಲಿದ್ದಾರೆ. ಶಾಸಕರು, ಸಂಸದರು ಪಾಲ್ಗೊಳ್ಳುತ್ತಿದ್ದಾರೆ. ಜಂಟಿ ಕಾರ್ಯದರ್ಶಿ ಡಾ. ಕೈಲಾಸ ಪಾಟೀಲ್, ಸಂಚಾಲಕ ಡಾ. ಕಿರಣ್ ದೇಶಮುಖ್, ಡೀನ್ ಡಾ.ಶರಣಗೌಡ ಪಾಟೀಲ್, ವೈಸ್ ಡೀನ್ ಡಾ. ವಿಜಯಕುಮಾರ್ ಕಪ್ಪಿಕೇರಿ, ವೈದ್ಯಕೀಯ ಅಧೀಕ್ಷಕ ಡಾ. ಮಲ್ಲಿಕಾರ್ಜುನ ತೇಗನೂರ, ಡಾ. ಗುರುಲಿಂಗಪ್ಪ ಪಾಟೀಲ್, ವೈದ್ಯಕೀಯ ನಿರ್ದೇಶಕ ಡಾ. ಮಲ್ಲಿಕಾರ್ಜುನ ಭಂಡಾರ, ಮಾಧ್ಯಮ ಸಂಯೋಜಕ ಐ.ಕೆ.ಪಾಟೀಲ್ ಉಪಸ್ಥಿತರಿರಲಿದ್ದಾರೆ.

------------------

ಕಡಿಮೆ ದರದಲ್ಲಿ ಉತ್ತಮ ಸೌಲಭ್ಯಗಳನ್ನೊಳಗೊಂಡ ಆರೋಗ್ಯ ಸೇವೆ ನೀಡಬೇಕೆಂಬ ಆಶಯದಲ್ಲಿ ಈಗಲೂ ಉಚಿತ ಹೊರರೋಗಿ ವಿಭಾಗವನ್ನು ಹೊಂದಿರುವ ಈ ಭಾಗದ ಏಕೈಕ ಆಸ್ಪತ್ರೆ ಇದಾಗಿದೆ. ಇಲ್ಲಿ ಒಳ ರೋಗಿಗಳಿಗೆ ಬಸವ ಪ್ರಸಾದ ಹೆಸರಲ್ಲಿ ಊಟ, ಉಪಹಾರ ನೀಡಲಾಗುತ್ತಿದೆ. ಬಸವೇಶ್ವರ ಆಸ್ಪತ್ರೆಯಲ್ಲಿ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೋಗಿಗಳ ಸ್ನೇಹಿಯಾಗಿಸುವ ಯೋಜನೆ ನಮ್ಮದಾಗಿದೆ.

ಡಾ. ಕಿರಣ ದೇಶಮುಖ, ಹೈಕಶಿ ಸಂಸ್ಥೆ ಆಡಳಿತ ಮಂಡಲಿ ಸದಸ್ಯರು,

ಸಂಯೋಜಕರು, ಬಸವೇಶ್ವರ ಆಸ್ಪತ್ರೆ, ಕಲಬುರಗಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು