ರಾಜ್ಯ, ಮಾತೃಭಾಷೆಗೆ ಆದ್ಯತೆ ಸಿಗಲಿ: ಗೋವಿಂದ ನಾಯ್ಕ

KannadaprabhaNewsNetwork | Published : Nov 26, 2024 12:45 AM

ಸಾರಾಂಶ

ದೇಶ ಹೇಗೆ ಮುಖ್ಯವೋ ಹಾಗೆ ನಮ್ಮ ರಾಜ್ಯ, ನಮ್ಮ ಭಾಷೆ ಅಷ್ಟೇ ಶ್ರೇಷ್ಠ ಹಾಗೂ ಮುಖ್ಯ.

ಹೊನ್ನಾವರ: ಕನ್ನಡಪರ ರಾಜ್ಯ ಸಂಘಟನೆ ಕದಂಬ ಸೈನ್ಯ ಮಾಡುವ ಕನ್ನಡದ ಕೆಲಸ ಅತ್ಯಂತ ಶ್ಲಾಘನೀಯ ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ತಿಳಿಸಿದರು.ತಾಲೂಕಿನ ಸರಳಗಿ ಗ್ರಾಮದಲ್ಲಿ ಕದಂಬ ಸೈನ್ಯ ಸಂಘಟನೆ ಶಾಖೆಯ 13ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶ ಹೇಗೆ ಮುಖ್ಯವೋ ಹಾಗೆ ನಮ್ಮ ರಾಜ್ಯ, ನಮ್ಮ ಭಾಷೆ ಅಷ್ಟೇ ಶ್ರೇಷ್ಠ ಹಾಗೂ ಮುಖ್ಯ ಎಂದರು. ಈ ಸಂಘಟನೆ ಕನ್ನಡ ಅಭಿವೃದ್ಧಿ ಜತೆಗೆ ಗ್ರಾಮ ಗ್ರಾಮಗಳ ಅಭಿವೃದ್ಧಿ ಕೂಡ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.

ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ, ಕನ್ನಡ ಉಳಿಸುವ ನಿಟ್ಟಿನಲ್ಲಿ ಕನ್ನಡಿಗರು ಅಭಿಮಾನ ತೋರಿಸಬೇಕು. ನಿರಭಿಮಾನ ಕನ್ನಡಿಗ ಆಗಬಾರದು. ವ್ಯವಹಾರಕ್ಕಾಗಿ ರಾಜ್ಯಕ್ಕೆ ಬರುವ ಯಾರೇ ಆದರೂ ಕನ್ನಡ ಮಾತನಾಡಬೇಕು. ನಾವು ಅವರೊಂದಿಗೆ ಅವರ ಭಾಷೆ ಮಾತನಾಡುವ ಹವ್ಯಾಸ ಬಿಡಬೇಕು ಎಂದರು.ಪತ್ರಕರ್ತ ಉದಯಕುಮಾರ ಕಾನಳ್ಳಿ, ಉಪ್ಪೊಣಿ ಗ್ರಾಪಂ ಅಧ್ಯಕ್ಷ ಗಣೇಶ ಟಿ. ನಾಯ್ಕ್, ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಎಂ. ನಾಯ್ಕ್, ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ಟಿ. ನಾಯ್ಕ್ ಮಾತನಾಡಿದರು.

ಪಂಚಾಯಿತಿ ಸದಸ್ಯರಾದ ವಿನೋದ್ ಜಿ. ನಾಯ್ಕ್, ತಬರೇಜ್ ಏಸ್ ಖಾನ್, ಮಹೇಶ್ ಎಂ. ನಾಯ್ಕ್, ಶರಣಪ್ಪ ಎಂ. ನಾಯ್ಕ್, ಗುತ್ತಿಗೆದಾರರಾದ ಪ್ರಶಾಂತ್ ಜಿ. ನಾಯ್ಕ್, ಮುಸ್ಲಿಂ ಸಮಾಜದ ಅಧ್ಯಕ್ಷ ಮುಜಾಪರ್ ಇಸುಪ್ ಸಾಬ್, ಜೈ ಸಂತೋಷಿ ಮಾ ದೇವಸ್ಥಾನ ಧರ್ಮದರ್ಶಿ ಗಜಾನನ ಆರ್., ಜಾಪರ್ ಸಾಬ್ ಸರಳಗಿ, ಉಪ್ಪಾರ್ ಸಮಿತಿ ಅಧ್ಯಕ್ಷ ಸುಬ್ರಾಯ ಟಿ., ಲಕ್ಷಣ ಟಿ. ನಾಯ್ಕ್ ಮಾತನಾಡಿದರು.

ಸರಳಗಿ ಘಟಕ ಅಧ್ಯಕ್ಷ ನಾರಾಯಣ ಎಂ. ಉಪ್ಪಾರ ಉಪಸ್ಥಿತರಿದ್ದರು. ವಿನಾಯಕ ಏನ್ ನಾಯ್ಕ್, ರಾಮಚಂದ್ರ ಎಂ. ಭಟ್, ಮಹೇಂದ್ರ ಗಣಪತಿ ಗೌಡ, ಸಂಘಟನೆ ಹಿರಿಯ ಸದಸ್ಯರಾದ ಹನುಮಂತ ಉಪ್ಪಾರ, ಮಾದೇವ ಉಪ್ಪಾರ, ಮುಕುಂದ ಉಪ್ಪಾರ ಅವರನ್ನು ಸನ್ಮಾನಿಸಲಾಯಿತು.

ಕದಂಬ ಸೈನ್ಯ ಜಿಲ್ಲಾ ಸಂಚಾಲಕ ಪುರಂದರ ಜಿ. ನಾಯ್ಕ್ ಸ್ವಾಗತಿಸಿದರು. ಘಟಕ ಕಾರ್ಯದರ್ಶಿ ಲೋಕೇಶ್ ಎಸ್. ಉಪ್ಪಾರ ವಂದಿಸಿದರು. ಶಿಕ್ಷಕ ಆರ್.ಬಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Share this article