-ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ತಹಸೀಲ್ದಾರರಿಗೆ ಮನವಿ
ಕನ್ನಡಪ್ರಭ ವಾರ್ತೆ ಶಹಾಪುರ
ಅಂಬೇಡ್ಕರ್ ಕುರಿತು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಸಮಿತಿಯ ಮುಖಂಡರು, ದೇಶದ ಕೋಟ್ಯಂತರ ದಲಿತರು ಮತ್ತು ವಂಚಿತ ವರ್ಗಗಳಿಗೆ ಅಂಬೇಡ್ಕರ್ ದೇವರಿಗಿಂತ ಕಡಿಮೆಯಿಲ್ಲ. ಅಂಬೇಡ್ಕರ್ ಅವರಿಗೆ ಹಕ್ಕುಗಳನ್ನು ನೀಡಿದ್ದರಿಂದ ಇಂದು ಕೋಟಿಗಟ್ಟಲೆ ವಂಚಿತರು ನೆಮ್ಮದಿಯಿಂದ ಕಾನೂನು ರಕ್ಷಣೆಯಲ್ಲಿ ಬದುಕಿದ್ದಾರೆ. ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಪ್ರತಿನಿತ್ಯವು ಸ್ಮರಿಸುತ್ತದೆ. ಅವರು ನೀಡಿರುವ ಸಂವಿಧಾನವನ್ನು ಎಲ್ಲರೂ ಸ್ಮರಿಸುತ್ತಾರೆ. ಆದರೆ, ದೇಶದ ಆಡಳಿತ ನಡೆಸುತ್ತಿರುವ ಕೋಮುವಾದಿಗಳು ಅವರನ್ನೇ ಅಪಮಾನ ಮಾಡುತ್ತಿದ್ದಾರೆ. ದೇವರ ಹೆಸರು ಹೇಳಿದರೆ ಮುಕ್ತಿ ಸಿಗುತ್ತದೆ. ಅಂಬೇಡ್ಕರ್ ಹೆಸರು ಹೇಳಿದರೆ ಮುಕ್ತಿ ಸಿಗಲ್ಲ ಎಂದರೆ, ಇದು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯರ ಪಾಲಿಗೆ ಸಂವಿಧಾನವೇ ಸ್ವರ್ಗ. ಅಂಬೇಡ್ಕರ್ ಅವರಿಂದಲೇ ಸತತವಾಗಿ ಮೂರು ಬಾರಿ ದೇಶದ ಗೃಹ ಮಂತ್ರಿಗಳಾಗಿದ್ದೀರಿ ಎಂಬುದನ್ನು ಮರೆತಂತಿದೆ. ಕೂಡಲೇ ಪ್ರಧಾನಿಯವರು ಶಾ ರನ್ನು ಸಂಪುಟದಿಂದ ವಜಾಗೊಳಿಸಬೇಕು. ರಾಷ್ಟ್ರಪತಿ ಮಧ್ಯ ಪ್ರವೇಶಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಬಗ್ಗೆ ಮಾತಾಡಿದರೆ ಸಹಿಸಲ್ಲ. ತಕ್ಷಣ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಕೊಂಡು ಈ ದೇಶದಿಂದ ಗಡಿಪಾರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕು ಸಂಚಾಲಕ ಮರೆಪ್ಪ ಕ್ರಾಂತಿ, ಸಂತೋಷ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ನಾಗರಾಜ ಕೊಡಮನಳ್ಳಿ, ಶ್ರೀಮಂತ ಸಿಂಗನಹಳ್ಳಿ, ಸಂಘಟನೆ ಸಂಚಾಲಕ ಪುರಷೋತ್ತಮ ಬಬಲಾದ, ನಗರ ಸಂಚಾಲಕ ಮಲ್ಲಿಕಾರ್ಜುನ ಹುರಸಗುಂಡಗಿ, ಜಿ.ವಿ.ಒ. ಸಂಚಾಲಕ ಬಲಭೀಮ ಬೇವಿನಹಳ್ಳಿ, ವಸಂತ ಕೋಗಿಲ್‌ಕರ್, ಜಿ.ವಿ.ಒ.ಸಂಘಟನಾ ಸಂಚಾಲಕ ದೊಡ್ಡಪ್ಪ ಕಾಡಂಗೇರಾ, ಚನ್ನಬಸ್ಸು ಗುರಸಣಗಿ, ಶರಣಪ್ಪ ಮಾಳಳ್ಳಿ, ತಾಯಪ್ಪ ಭಂಡಾರಿ, ಚಂದಪ್ಪ ಮುನಮುಟಗಿ, ಕುರಕಂದಾ, ಹೊನ್ನಯ್ಯ ಕುರುಕುಂದಿ, ಶರಣಪ್ಪ ಕುರಕುಂದಾ, ಸಿದ್ದಪ್ಪ ಕೊಡಮನಳ್ಳಿ, ನಾಗು ಹಳಿಸಗರ, ಚಂದ್ರು ಬುದ್ಧನಗರ, ಸುಭಾಷ ಹುರಸಗುಂಡಗಿ, ಜೈಭೀಮ ಸಿಂಗನಹಳ್ಳಿ, ಬಸಲಿಂಗ ಹಾಲಭಾವಿ, ನಾಗರಾಜ ರಸ್ತಾಪೂರ, ದೇವಪ್ಪ ಕೊಂಬಿನ್, ಹಣಮಂತ ಹುಲುಸೂರ, ಯಲ್ಲಪ್ಪ, ರಾಮಣ್ಣ, ಮಲ್ಲಪ್ಪ, ಸಾಯಬಣ್ಣ, ಅಯ್ಯಪ್ಪ, ಯಂಕಪ್ಪ ಪರಶುರಾಮ ಅಳಿಗೇರಿ, ಸಾಬಣ್ಣ ಬಳ್ಳಕ್ಕಿ ಇದ್ದರು.-----
ಫೋಟೊ:ಶಹಾಪುರ ನಗರದಲ್ಲಿ ಡಾ. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.20ವೈಡಿಆರ್10 :