ಪುತ್ಥಳಿ ನಿರ್ಮಾಣ ಪ್ರಕರಣ: ಶಾಂತಿ ಸಮಿತಿ ಸಭೆ ಯಶಸ್ವಿ

KannadaprabhaNewsNetwork |  
Published : Dec 20, 2025, 01:30 AM IST
19ಕೆಎಂಎನ್‌ಡಿ-13ಮದ್ದೂರು ತಾಲೂಕು ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸ್ಥಳ ಗ್ರಾಮ ಠಾಣಾ ವ್ಯಾಪ್ತಿಯ ಶ್ರೀಬೊಮ್ಮಲಿಂಗೇಶ್ವರ ಟ್ರಸ್ಟ್ ಹೆಸರಿನಲ್ಲಿ ಖಾತೆ ಇದ್ದು, ಗ್ರಾಪಂ ಈ ಬಗ್ಗೆ ಕ್ರಮ ಬದ್ಧವಾಗಿ ಖಾತೆ ಮಾಡದ ಕಾರಣ ವಿವಾದ ಉಂಟಾಗಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ಸಭೆಯಲ್ಲಿ ವಾದ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀಬೊಮ್ಮಲಿಂಗೇಶ್ವರ ಟ್ರಸ್ಟ್ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಂಬಂಧ ದಲಿತರು ಮತ್ತು ಸವರ್ಣೀಯರ ನಡುವೆ ವಿವಾದ ಉಂಟಾಗಿದ್ದ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿ ಸಭೆ ನಡೆಯಿತು.

ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಗೆ ಟ್ರಸ್ಟ್ ಪದಾಧಿಕಾರಿಗಳು, ಉಭಯ ಗುಂಪುಗಳ ಮುಖಂಡರನ್ನು ಹೊರತುಪಡಿಸಿದರೆ ದಲಿತ ಮುಖಂಡರು ಹಾಗೂ ಮಾಧ್ಯಮದವರನ್ನು ಸಭೆಯಿಂದ ಹೊರಗಿಟ್ಟು ಅಧಿಕಾರಿಗಳು ಸಭೆ ನಡೆಸಿದರು.

ಶಾಂತಿ ಸಮಿತಿ ಸಭೆಯಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸ್ಥಳ ಗ್ರಾಮ ಠಾಣಾ ವ್ಯಾಪ್ತಿಯ ಶ್ರೀಬೊಮ್ಮಲಿಂಗೇಶ್ವರ ಟ್ರಸ್ಟ್ ಹೆಸರಿನಲ್ಲಿ ಖಾತೆ ಇದ್ದು, ಗ್ರಾಪಂ ಈ ಬಗ್ಗೆ ಕ್ರಮ ಬದ್ಧವಾಗಿ ಖಾತೆ ಮಾಡದ ಕಾರಣ ವಿವಾದ ಉಂಟಾಗಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ಸಭೆಯಲ್ಲಿ ವಾದ ಮಂಡಿಸಿದರು.

ನಂತರ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಟ್ರಸ್ಟ್ ಪದಾಧಿಕಾರಿಗಳು ಗ್ರಾಪಂಗೆ ಹೊಸದಾಗಿ ಅರ್ಜಿ ಸಲ್ಲಿಸಿ. ಗ್ರಾಮ ಸಭೆಯಲ್ಲಿ ಅದನ್ನು ಇಟ್ಟು ಚರ್ಚೆ ನಡೆಸಿದ ನಂತರ ಮದ್ದೂರು ತಾಲೂಕು ಪಂಚಾಯ್ತಿ ಖಾತೆ ಬದಲಾವಣೆ ವಿಚಾರದಲ್ಲಿ ಮುಂದಿನ ಕ್ರಮ ವಹಿಸುವಂತೆ ನೀಡಿದ ಸಲಹೆಗೆ ಉಭಯ ಗುಂಪುಗಳ ಮುಖಂಡರು ಸಮ್ಮತಿ ನೀಡಿದರು.

ಅಲ್ಲಿವರೆಗೆ ಟ್ರಸ್ಟ್ ಪದಾಧಿಕಾರಿಗಳು, ಗ್ರಾಮದ ಸವರ್ಣೀಯರು ಮತ್ತು ದಲಿತರು ಶಾಂತಿ ಸೌಹಾರ್ದತೆ ಕಾಪಾಡುವಂತೆ ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ಯಶವಂತ ಕುಮಾರ್ ಮನವಿ ಮಾಡಿದರು.

ಸಭೆಯಲ್ಲಿ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ಗ್ರೇಡ್‌- 2 ತಹಸೀಲ್ದಾರ್ ಸೋಮಶೇಖರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಯೋಜನಾಧಿಕಾರಿ ಸುರೇಶ, ಕೆ.ಎಂ.ದೊಡ್ಡಿ ಠಾಣೆ ಸಿಪಿಐ ಅನಿಲ್ ಕುಮಾರ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ನಾಗರಾಜು, ಶಿರಸ್ತೇದಾರ್ ಲಕ್ಷ್ಮೀ ನರಸಿಂಹ ಮತ್ತಿತರ ಅಧಿಕಾರಿಗಳು ಶಾಂತಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.

೨೧ರಂದು ಸರ್ವ ಸದಸ್ಯರ ಸಭೆ

ಮಂಡ್ಯ: ಕರ್ನಾಟಕ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಡಿ.೨೧ರಂದು ಬೆಳಗ್ಗೆ ೧೧.೩೦ಕ್ಕೆ ಸಂಘದ ಆವರಣದಲ್ಲಿ ನಡೆಸಲಾಗುವುದು. ಸಂಘದಲ್ಲಿ ೬ ಸಾವಿರ ಆಜೀವ ಸದಸ್ಯರಿದ್ದಾರೆ ಎಂದು ಸಂಘದ ನಿರ್ದೇಶಕ ಎಚ್.ಎನ್.ನಾಗಪ್ಪ ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರೇವಕ್ಕ, ನಿವೃತ್ತ ಡಿಡಿಪಿಐ ಆರ್.ಮಹದೇವಪ್ಪ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!