ಅನಾವರಣಗೊಳ್ಳದೆ ಅಸಡ್ಡೆಗೆ ಒಳಗಾದ ಸಂವಿಧಾನ ಶಿಲ್ಪಿ ಪ್ರತಿಮೆ

KannadaprabhaNewsNetwork |  
Published : Aug 24, 2026, 01:45 AM IST
23ಎಚ್ಎಸ್ಎನ್14 : ಅನಾವರಣಗೊದೆ ಅಸಡ್ಡೆಗೆ ಒಳಗಾಗಿರುವ ಅಂಬೆಡ್ಕರ್‌ ಪ್ರತಿಮೆ. | Kannada Prabha

ಸಾರಾಂಶ

ಸಂವಿಧಾನ ಶಿಲ್ಪಿ ಸಮಾನತೆ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಚನ್ನರಾಯಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಕಚೇರಿ (ಮಿನಿವಿಧಾನಸೌಧ) ಆವರಣದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಜನಮಾನಸದೊಂದಿಗೆ ಭವ್ಯ ಮೆರವಣಿಗೆ ಮೂಲಕ ಅದ್ಧೂರಿಯಾಗಿ ರಾಜಕಾರಣಿಗಳು, ದಲಿತ ಸಂಘಟನೆಗಳು ಹಾಗೂ ಅಧಿಕಾರಿಗಳು ಬರಮಾಡಿಕೊಂಡರು, ನಂತರ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಪ್ರತಿಮೆಗೆ ಟಾರ್ಪಲ್ ಗಳ ಮೂಲಕ ಸುತ್ತಿ ನಿಲ್ಲಿಸಲಾಯಿತು. ಆದರೆ ಪ್ರತಿಮೆಯನ್ನು ತಂದು ನಿಲ್ಲಿಸಿ ೧೦ ತಿಂಗಳು ಕಳೆದರೂ ಅದನ್ನು ಸಾರ್ವಜನಿಕ ದರ್ಶನಕ್ಕೆ ಅನಾವರಣಗೊಳಿಸಿ ಅವಕಾಶ ಕಲ್ಪಿಸದಿರುವುದು ನಿಜಕ್ಕೂ ಅಸಡ್ಡೆತನದ ವಿಚಾರವಾಗಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಭಾರತ ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವದ ತಳಹದಿಯ ಮೇಲೆ ಭಾರತ ಸಂವಿಧಾನವನ್ನು ರಚಿಸಿ ಭಾರತದಲ್ಲಿ ವಾಸಿಸುವ ಕಟ್ಟ ಕಡೆಯ ವ್ಯಕ್ತಿಯು ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ ಸಂವಿಧಾನ ಶಿಲ್ಪಿ ಸಮಾನತೆ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಚನ್ನರಾಯಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಕಚೇರಿ (ಮಿನಿವಿಧಾನಸೌಧ) ಆವರಣದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಜನಮಾನಸದೊಂದಿಗೆ ಭವ್ಯ ಮೆರವಣಿಗೆ ಮೂಲಕ ಅದ್ಧೂರಿಯಾಗಿ ರಾಜಕಾರಣಿಗಳು, ದಲಿತ ಸಂಘಟನೆಗಳು ಹಾಗೂ ಅಧಿಕಾರಿಗಳು ಬರಮಾಡಿಕೊಂಡರು, ನಂತರ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಪ್ರತಿಮೆಗೆ ಟಾರ್ಪಲ್ ಗಳ ಮೂಲಕ ಸುತ್ತಿ ನಿಲ್ಲಿಸಲಾಯಿತು. ಆದರೆ ಪ್ರತಿಮೆಯನ್ನು ತಂದು ನಿಲ್ಲಿಸಿ ೧೦ ತಿಂಗಳು ಕಳೆದರೂ ಅದನ್ನು ಸಾರ್ವಜನಿಕ ದರ್ಶನಕ್ಕೆ ಅನಾವರಣಗೊಳಿಸಿ ಅವಕಾಶ ಕಲ್ಪಿಸದಿರುವುದು ನಿಜಕ್ಕೂ ಅಸಡ್ಡೆತನದ ವಿಚಾರವಾಗಿದೆ.

ಪ್ರತಿಮೆಯನ್ನು ಈಗಾಗಲೇ ಅಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಸಿ. ಮಹದೇವಪ್ಪ ಹಾಗೂ ಕ್ಷೇತ್ರದ ಶಾಸಕ ಸಿ. ಎನ್. ಬಾಲಕೃಷ್ಣ ವೀಕ್ಷಿಸಿ ಶೀಘ್ರದಲ್ಲೇ ಅರ್ಥಪೂರ್ಣವಾಗಿ ಉದ್ಘಾಟನೆಯನ್ನು ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ ಇನ್ನೂ ಉದ್ಘಾಟನೆಯಾಗಿಲ್ಲ

ಹೋರಾಟಗಾರರ ಒತ್ತಾಯ:

ಚನ್ನರಾಯಪಟ್ಟಣ ತಾಲೂಕಿನ ದಲಿತ ಪರ ಸಂಘಟನೆಗಳ ಹೋರಾಟಗಾರರ ಒತ್ತಾಯ ಹಾಗೂ ತಾಲೂಕಿನ ಸರ್ವ ಜನಾಂಗದ ಮಹದಾಸೆಯು ಸಂವಿಧಾನದ ನಿರ್ಮಾತೃ ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ತಾಲೂಕು ಕಚೇರಿ ಆವರಣದಲ್ಲಿ ಅದ್ಧೂರಿಯಾಗಿ ಸಮಾರಂಭವನ್ನು ಸಂಘಟಿಸಿ ಅನಾವರಣಗೊಳಿಸುವ ಮೂಲಕ ಮಹಾ ನಾಯಕನ ಪ್ರತಿಭೆಯನ್ನು ಸಮಾನತೆಯ ದ್ಯೋತಕವಾಗಿ ಸಾರ್ವಜನಿಕರಿಗೆ ತೆರೆದಿಡಬೇಕು ಎಂಬುದಾಗಿತ್ತು. ಪ್ರಾರಂಭದಲ್ಲಿ ಇದಕ್ಕೆ ಪೂರಕವಾಗಿ ಸ್ಪಂದಿಸಿದ ತಾಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕ ಸಿ. ಎನ್. ಬಾಲಕೃಷ್ಣ ಪ್ರತಿಮೆಯನ್ನು ಮಾಡಿಸಲು ತೋರಿದಷ್ಟು ಆಸಕ್ತಿಯನ್ನು ಪ್ರತಿಮೆಯನ್ನು ಅನಾವರಣಗೊಳಿಸಲು ತೋರಿಸದಿರುವುದು ನಿಜಕ್ಕೂ ಆಶ್ಚರ್ಯಕರ ಹಾಗೂ ದುಃಖಕರ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರಾರಂಭದಲ್ಲಿ ಬಾಬಾ ಸಾಹೇಬ್ ಪ್ರತಿಮೆಯನ್ನು ಸ್ಥಾಪನೆಗೊಳ್ಳಬೇಕು ಎಂದು ದಶಕಗಳ ಕಾಲ ಹೋರಾಡಿದ ವಿವಿಧ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳ ನಾಯಕರುಗಳು ಒಂದೊಂದು ರಾಜಕೀಯ ಪಕ್ಷದ ಓಲೈಕೆಗೆ ಒಳಗಾಗಿ ಚಮಚ ರಾಜಕಾರಣದ ರುಚಿ ಹತ್ತಿಸಿಕೊಂಡಿರುವ ಪರಿಣಾಮ ಹಾಗೂ ಅವರ ನೆಚ್ಚಿನ ರಾಜಕೀಯ ಪಕ್ಷದ ನಾಯಕರನ್ನೇ ಈ ಪ್ರತಿಮೆಯ ಉದ್ಘಾಟನೆಗೆ ಕರೆಯಲೇಬೇಕೆಂಬ ಹಠ ಮತ್ತು ಹುಂಬತನಕ್ಕೆ ಬಿದ್ದಿರುವ ಪರಿಣಾಮ ಈ ದೇಶಕ್ಕೆ ಸಂವಿಧಾನವನ್ನು ರಚಿಸುವ ಮೂಲಕ ಶೋಷಿತರನ್ನು ಮತ್ತು ಅವಕಾಶ ವಂಚಿತರನ್ನು ಜಾತಿಯ ಸಂಕೋಲೆಗಳಿಂದ ಬಿಡುಗಡೆಗೊಳಿಸಿದಂತಹ ವಿಶ್ವ ಜ್ಞಾನಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಗ್ರಹಣ ಹಿಡಿದಂತೆ ಮಾಡಿ ಅನಾವರಣಗೊಳಿಸದೆ ಪ್ರಕೃತಿ ದತ್ತವಾಗಿ ಗಾಳಿ ಮಳೆ ಬಿಸಿಲಿಗೆ ಪ್ರತಿಮೆಗೆ ಹೊಚ್ಚಿದ್ದ ಟಾರ್ಪಲ್‌ಗಳು ಕಿತ್ತು ಹೋಗಿ ತಾನೇ ತಾನಾಗಿ ಅನಾವರಣಗೊಳ್ಳುವಂತೆ ಮಾಡುತ್ತಿರುವುದು ಈ ತಾಲೂಕಿನ ಪ್ರಗತಿಪರ, ರೈತಪರ, ದಲಿತ ಸಂಘಟನೆಗಳ ಮುಖಂಡರುಗಳು ತಲೆತಗ್ಗಿಸಬೇಕಾದ ಘಟನೆಯಲ್ಲವೇ? ಯಾವುದೇ ಹೋರಾಟ ಮಾಡುವಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಹಿಡಿದು ಪ್ರತಿಭಟನೆ ಮಾಡುವ ಈ ಸಂಘಟನೆಗಳ ಮುಖಂಡರುಗಳು ಅಂಬೇಡ್ಕರ್ ಅವರ ಪ್ರತಿಮೆಯ ಅನಾವರಣಕ್ಕೆ ಹಕ್ಕುತ್ತಾಯ ಮಾಡದಿರುವುದು ಚಳುವಳಿಗಳು ಎತ್ತಸಾಗಿವೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಎಲ್ಲಾ ರಾಜಕೀಯ ಪಕ್ಷದ ರಾಜಕಾರಣಿಗಳು ಮುಂದಿನ ಚುನಾವಣೆ ಬಗ್ಗೆ ಚಿಂತಿಸಿದರೆ, ರಾಷ್ಟ್ರೀಯವಾದಿ ವ್ಯಕ್ತಿ ಮುಂದಿನ ಪೀಳಿಗೆ ಮತ್ತು ಅವರ ಭವಿಷ್ಯದ ಬಗ್ಗೆ ಚಿಂತಿಸುತ್ತಾನಂತೆ ಎಂಬ ಮಾತಿದೆ ಅದರಂತೆ ಈ ದೇಶದ ಭವಿ?ದ ಬಗ್ಗೆ ಚಿಂತಿಸಿ ಅದಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಭೋದಿಸತ್ವ ಅಂಬೇಡ್ಕರ್ ಅವರಂತಹ ರಾಷ್ಟ್ರ ಪ್ರೇಮಿಯ ಪ್ರತಿಮೆಯನ್ನು ಅನಾವರಣಗೊಳಿಸಲು ರಾಜಕಾರಣ ಮೇಳವಿಸುತ್ತಿರುವುದು ನಿಜಕ್ಕೂ ಶೋಚನೀಯ ವಿಚಾರವಾಗಿದೆ.

====

* ಹೇಳಿಕೆ

ರಾಜಕೀಯದವರ ದೊಂಬರಾಟಕ್ಕೆ ಬಡವಾದ ಅಂಬೇಡ್ಕರ್ ಪುತ್ಥಳಿಗೆ ಉದ್ಘಾಟನೆ ಭಾಗ್ಯ ಕಾಣಲು ಆಗದೆ ಇದ್ದು, ತಾಲೂಕು ಆಡಳಿತ ಈ ಬಗ್ಗೆ ಗಮನಹರಿಸದೆ ಇದ್ದರೆ ರಾಜ್ಯಾದ್ಯಂತ ದಲಿತ ಸಂಘಟನೆಗಳು ಮುತ್ತಿಗೆ ಹಾಕಿ ಮುಂದಿನ ದಿನಗಳಲ್ಲಿ ನಾವೇ ಉದ್ಘಾಟನೆ ಮಾಡಬೇಕಾಗುತ್ತದೆ.

ಲಕ್ಷ್ಮಣ್ ಬಡಕನಹಳ್ಳಿ, ಪ್ರಜಾ ವಿಮೋಚನಾ ಚಳವಳಿ ಜಿಲ್ಲಾಧ್ಯಕ್ಷ* ಹೇಳಿಕೆ2

ಭಾರತ ರತ್ನ ಅಂಬೇಡ್ಕರ್‌ ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ ಎಲ್ಲರಿಗೂ ಸೇರಿದ ವಿಶ್ವನಾಯಕ ಅಂತಹ ವ್ಯಕ್ತಿಯ ಪ್ರತಿಮೆಯನ್ನು ಅನಾವರಣ ಮಾಡದೆ ಇರುವ ಬೇಜವಾಬ್ದಾರಿ ಅಧಿಕಾರಿಗಳಿಗೆ ದಿಕ್ಕಾರ.

ನಂಜುಂಡಮೈಮ್, ಬಿಜೆಪಿ ಮುಖಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮಾವತಿ ಜಲಾಶಯದಿಂದ ಕೆರೆಕಟ್ಟೆಗಳಿಗೆ ನೀರು: ಶಾಸಕ ಎಚ್.ಟಿ.ಮಂಜು ಪರಿಶೀಲನೆ
ಎಚ್ಡಿಕೆಯಿಂದ ಶ್ರೀಅಭಯ ಆಂಜನೇಯಸ್ವಾಮಿ ದೇಗುಲ ಲೋಕಾರ್ಪಣೆ