ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದಲ್ಲಿ ಕುರುಬ ಸಂಘದ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.3ರಂದು ಹೊನ್ನಾಳಿಯಲ್ಲಿ ಕನಕದಾಸರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಕುರುಬ ಸಮಾಜದ ಮತ್ತೊಂದು ಸಂಘಟನೆಯಾದ ತಾಲೂಕು ಕುರುಬ ಸಮಾಜದಿಂದ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಹ್ವಾನಿಸಿರುವುದು ಸಂತೋಷದ ವಿಷಯ. ಆದರೆ, ಈ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಕುರುಬ ಸಮಾಜದ ಮುಖಂಡ ಎಚ್.ಬಿ.ಮಂಜಪ್ಪ ಹೆಸರು ಕೈಬಿಟ್ಟಿರುವುದು ಸರಿಯಲ್ಲ, ಅವರ ಹೆಸರು ಏಕೆ ಕೈ ಬಿಡಲಾಗಿದೆ ಎಂದು ಸಂಬಂಧಪಟ್ಟವರು ಉತ್ತರಿಸಬೇಕು ಎಂದರು.
ಏಳಿಗೆ ಸಹಿಸದೇ ಷಡ್ಯಂತ್ರ:ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಕಳೆದ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡವರು, ಇದೀಗ ಲೋಕಸಭೆ ಚುನಾವಣೆ ಪ್ರಬಲ ಆಕಾಂಕ್ಷಿಯಾದ ಅವರ ಏಳಿಗೆ ಸಹಿಸದೇ ರೂಪಿಸಿರುವ ಷಡ್ಯಂತ್ರ. ಕನಕದಾಸರ ಪ್ರತಿಮೆ ಅನಾವರಣ ಸಮಾರಂಭಕ್ಕೆ ಕುರುಬ ಸಮಾಜದ ಮುಖಂಡರು ಸೇರಿ ಕನಕ ಯುವವೇದಿಕೆ ಪದಾಧಿಕಾರಿಗಳ ಹೆಸರುಗಳ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸದೇ ಕನಕದಾಸರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಆರುಂಡಿ ಪ್ರಕಾಶ್ ಮಾತನಾಡಿ, ಎಚ್.ಬಿ.ಮಂಜಪ್ಪ ಜಿಲ್ಲಾಮಟ್ಟ ಹಾಗೂ ರಾಜಕೀಯವಾಗಿ ಪಕ್ಷದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆಯುತ್ತಿದ್ದಾರೆ. ಇದನ್ನು ಸಹಿಸದ ನಮ್ಮವರೇ ಕೆಲವರು ಎಚ್.ಬಿ. ಮಂಜಪ್ಪರನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಆದ್ದರಿಂದ ತಕ್ಷಣವೇ ಎಚ್.ಬಿ. ಮಂಜಪ್ಪ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಬೇಕು. ಕನಕದಾಸರಂತಹ ಶ್ರೇಷ್ಠ ವ್ಯಕ್ತಿಯ ಪ್ರತಿಮೆ ಅನಾವರಣ ಕುರುಬ ಸಮಾಜ ಸೇರಿ ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ಆಚರಿಸೋಣ ಇಂತಹ ಕೆಲಸಗಳಲ್ಲಿ ಭೇದಭಾವ ತೋರುವುದು ಸರಿಯಲ್ಲ ಎಂದರು.
ಕುರುಬ ಸಮಾಜ ಒಡೆದು ಎರಡು ಬಣಗಳಾಗಿ ಮಾಡಿ ಲಾಭ ತೆಗೆದುಕೊಳ್ಳಲು ಹೊರಟಿರುವ ಕೆಲವರು ಎಚ್.ಬಿ.ಮಂಜಪ್ಪ ವಿರುದ್ಧ ಸಂಚು ಮಾಡುತ್ತಿರುವುದು ಸರಿಯಲ್ಲ. ಆದ್ದರಿಂದ ಫೆ. 2ರೊಳಗೆ ಎಚ್.ಬಿ.ಮಂಜಪ್ಪ ಹೆಸರು ಕೈ ಬಿಟ್ಟಿರುವುದಕ್ಕೆ ಸೂಕ್ತ ಕಾರಣ ನೀಡಬೇಕು. ಇಲ್ಲವಾದರೆ ಅವಳಿ ತಾಲೂಕು ಕುರುಬ ಸಂಘದ ವತಿಯಿಂದ ಕನಕದಾಸರ ಪ್ರತಿಮೆ ಫೆ 2ರಂದು ನಾವೇ ಅನಾವರಣಗೊಳಿಸಿ ಮಾಲಾರ್ಪಣೆ ಮಾಡುತ್ತೇವೆ.
----------------------