ಮಾದಕ ವಸ್ತು ಸೇವನೆಯಿಂದ ದೂರವಿರಿ

KannadaprabhaNewsNetwork |  
Published : Jun 27, 2025, 12:48 AM IST
ತಾಳಿಕೋಟೆ 7 | Kannada Prabha

ಸಾರಾಂಶ

ತಾಳಿಕೋಟೆ: ಇಂದು ಯುವಕರು ದುಶ್ಚಟಗಳತ್ತ ವಾಲುತ್ತಾ ಸಿಗರೇಟ್, ಗುಟಕಾ, ತಂಬಾಕು, ಗಾಂಜಾ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಾ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರದೃಷ್ಠಕರ ಎಂದು ಪಿಎಸ್‌ಐ ರಾಮನಗೌಡ ಸಂಕನಾಳ ಹೇಳಿದರು.

ತಾಳಿಕೋಟೆ: ಇಂದು ಯುವಕರು ದುಶ್ಚಟಗಳತ್ತ ವಾಲುತ್ತಾ ಸಿಗರೇಟ್, ಗುಟಕಾ, ತಂಬಾಕು, ಗಾಂಜಾ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಾ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರದೃಷ್ಠಕರ ಎಂದು ಪಿಎಸ್‌ಐ ರಾಮನಗೌಡ ಸಂಕನಾಳ ಹೇಳಿದರು.ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಏರ್ಪಡಿಸಲಾದ ಮಾದಕ ವಸ್ತು ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳಿಂದ ಜೀವನವೇ ನಾಶವಾಗಲಿದೆ. ಈ ಚಟಕ್ಕೆ ಒಮ್ಮೆ ದಾಸರಾದರೆ ಹೊರಬರಲು ಕಷ್ಟವಾಗುತ್ತದೆ. ವಿದ್ಯಾರ್ಥಿ ಜೀವನವೆಂಬುದು ಸುಂದರ ಜೀವನ. ಜೀವನವನ್ನು ರೂಪಿಸಿಕೊಳ್ಳುವ ಸಮಯದಲ್ಲಿ ಜೀವನ ಹಾಳು ಮಾಡಿಕೊಳ್ಳುವುದು ಸಲ್ಲದು ಎಂದರು.ಅಪರಾಧ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ ಮಾತನಾಡಿ, ಇಂದಿನ ದಿನಮಾನದಲ್ಲಿ ಸೈಬರ್ ಕ್ರೈಂ ಪೆಡಂಭೂತಕ್ಕೆ ಸಾಕಷ್ಟು ಜನರು ವಂಚನೆಗೊಳಗಾಗುತ್ತಿದ್ದಾರೆ. ಸಂಪರ್ಕಕ್ಕೆ ಸಿಗದೆ ಕರೆಗಳ ಮೂಲಕ ಒಟಿಪಿ ಪಡೆದು ಹಣವನ್ನು ವಂಚಿಸಿರುವ ಪ್ರಕರಣಗಳು ಕಂಡುಬರುತ್ತಿವೆ. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗಲೂ ಎಚ್ಚರವಹಿಸಬೇಕು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮೊದಲು ರಸ್ತೆ ನಿಯಮಗಳನ್ನು ತಿಳಿದುಕೊಳ್ಳಬೇಕು. ರಸ್ತೆಯ ಮೇಲೆ ಸಂಚರಿಸುವಾಗ ಎಚ್ಚರವಹಿಸಬೇಕು. ಲೈಂಗಿಕ ಕಿರುಕುಳ, ಮತ್ತು ಪೋಕ್ಸೋ ಕಾಯ್ದೆ, ಮಹಿಳೆಯರ ರಕ್ಷಣೆ, ಮಾದಕ ವಸ್ತುಗಳ ವೆಸನ ಕುರಿತು ಮಾಹಿತಿ ನೀಡಿದರು.ಈ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರು, ಮುಖ್ಯೋಪಾಧ್ಯರಾದ ಸಂತೋಷ ಪವಾರ, ರಾಜು ಜವಳಗೇರಿ, ಭೀಮನಗೌಡ ಸಾಸನೂರ, ರಸೂಲಸಾ ತುರ್ಕನಗೇರಿ, ರವಿಕುಮಾರ ಮಲ್ಲಾಬಾದಿ, ಬಸವರಾಜ ಸವದತ್ತಿ, ಸಿದ್ದನಗೌಡ ಮೂದನೂರು, ಸಂಗಮೇಶ ಬಿರಾದಾರ, ಶರಣಗೌಡ ಕಾಚಾಪುರ, ಸಂಜೀವಕುಮಾರ ರಾಠೋಡ. ರೂಪಾ ಪಾಟೀಲ, ಶಿವಲೀಲಾ ಚುಂಚನೂರ, ದೇವಿಂದ್ರ ಗುಳೆದ, ಅನಿತಾ ಚೌದ್ರಿ, ಸಂಗೀತ ಬಿರಾದಾರ, ಶಿವಕುಮಾರ ಕುಂಬಾರ, ಮೇಘಾ ಪಾಟೀಲ, ರಾಜಬಿ ಬಿದರಿ, ತನುಶ್ರೀ ಮಹೇಂದ್ರಕರ್, ಮಾರುತಿ ಕಾರ್ಬಾರಿ, ದೇವರಾಜ್ ದೇಸಾಯಿ, ಶಂಕ್ರಮ್ಮ ಕಿರ್ದಹಳ್ಳಿ, ನಾಗರತ್ನ ಮೈಲೇಶ್ವರ, ಮುಬಿನ ಮುರಾಳ, ಬೋರಮ್ಮ ಜ್ಯೋತಿ ಪೊಲೀಸ ಪಾಟೀಲ, ಶೃತಿ ಚೌದರಿ, ರವಿಕುಮಾರ ಅನದಿನ್ನಿ, ಕುಮಾರ ಮೊಕಾಶಿ, ಹೀನಾಕೌಸರ ಸನದಿ, ಮುಬಾರಕ ಬನಹಟ್ಟಿ, ವಿಶ್ವನಾಥ್ ಭಜಂತ್ರಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ