ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತರಾಗಿ ಬಾಳಿ: ಶ್ರೀಕಾಂತ್‌ ಸಲಹೆ

KannadaprabhaNewsNetwork |  
Published : Jun 27, 2024, 01:05 AM IST
ಯಳಂದೂರು ವಿಭಾಗದ  | Kannada Prabha

ಸಾರಾಂಶ

ಕೊಳ್ಳೇಗಾಲ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಸೂರಾಪುರದಲ್ಲಿ ಮಾದಕ ದ್ರವ್ಯ ವ್ಯಸನ ವಿರೋಧಿ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಾದಕ ವ್ಯಸನದಿಂದ ವಿದ್ಯಾರ್ಥಿಗಳು ದೂರವಿರುವ ಮೂಲಕ ಮಾದರಿ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಯಳಂದೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶ್ರೀಕಾಂತ್ ಹೇಳಿದರು.

ತಾಲೂಕಿನ ಸರ್ಕಾರಿ ಪ್ರೌಢಶಾಲೆ ಸೂರಾಪುರದಲ್ಲಿ ಆಯೋಜಿಸಿದ ಮಾದಕ ದ್ರವ್ಯ ವ್ಯಸನ ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರದಲ್ಲಿ ಬೀಡಿ ಸಿಗರೇಟು ಸೇವನೆ ಪ್ರತಿಷ್ಠೆಯೆಂದು ಯಾರು ಸಹಾ ಭಾವಿಸಬಾರದು. ಅವರು ತಮ್ಮನ್ನು ಮನರಂಜಿಸಲು ಮತ್ತು ತಿಳುವಳಿಕೆ ಇಲ್ಲದೆ ಮದ್ಯವ್ಯಸನಿಗಳಾಗಿರುತ್ತಾರೆ. ಅದರ ಸೇವನೆ ಹಾನಿಕಾರಕವೆಂಬುದನ್ನುಉಲ್ಲೇಖಿಸಿದ್ದರು ಸಹಾ ಅದನ್ನೆ ವಿದ್ಯಾರ್ಥಿಗಳು ಗಮನಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ಮಕ್ಕಳು ತಾವು ಓದಿ ವಿದ್ಯಾವಂತರಾಗಿ ದೇಶದ ಸತ್ಪ್ರಜೆಗಳಾಗುವ ನಿಟ್ಟಿನಲ್ಲಿ ಆರೋಗ್ಯವಂತರಾಗಿ ಬದುಕಬೇಕು. ಮಾದಕ ದ್ರವ್ಯಕ್ಕೆ ದಾಸನಾದರೆ ಅನಾರೋಗ್ಯದ ಜೊತೆ ಬಡತನವನ್ನು ತಂದೊಡ್ಡಿ ಕಳ್ಳತನಕ್ಕೂ ದಾರಿಮಾಡಿಕೊಟ್ಟು ಅಪರಾಧಿಗಳಾಗುವ ಸಂಭವ ಹೆಚ್ಚಿದೆ. ಈಹಿನ್ನೆಲೆ ವಿದ್ಯಾರ್ಥಿಗಳು ತಾವು ಮಾದಕ ವಸ್ತುಗಳಿಂದ ದೂರವಿದ್ದು ಇತರರನ್ನು ಜಾಗೃತಿ ಮೂಡಿಸಿ ಎಂದರು.

ಅಗರ ಮಾಂಬಳ್ಳಿ ಠಾಣೆಯ ಎಸ್‌ಐ ಕರಿಬಸಪ್ಪ ಮಾತನಾಡಿ, ಮಾದಕ ದ್ಯವ್ಯವಸನವು ಮನುಷ್ಯನ ಅಂಗಾಂಗಗಳನ್ನು ಒಂದೊಂದಾಗಿ ಕಳೆದುಕೊಳ್ಳುವಂತೆ ಮಾಡುತ್ತದೆ. ಕಣ್ಣಿನ ದೃಷ್ಟಿ, ಶ್ವಾಸಕೋಶದ ಕ್ಯಾನ್ಸರ್, ಹೃದಯಘಾತ, ರಕ್ತದೊತ್ತಡದಂತಹ ಕಾಯಿಲೆ ನಿಮ್ಮ ಜೀವನವನ್ನು ನರಕಯಾತನೆಗೆ ದೂಡುತ್ತದೆ, ಮುನ್ನೆಚ್ಚರಿಕೆಯಿಂದ ಆರೋಗ್ಯಕರವಾದ ಜೀವನ ಶೈಲಿಯನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ನೀವೆಲ್ಲರೂ ಮುಂದಾಗಿ ಎಂದರಲ್ಲದೆ ಯಾರದ್ದೊ ಮಾತಿಗೆ ಕಟ್ಟುಬಿದ್ದು ದುಶ್ಚಟಗಳಿಗೆ ವಿದ್ಯಾಥಿ೯ಗಳು ಮಾರುಹೋಗಿ ಜೀವನ ಹಾಳುಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು. ಈ ವೇಳೆ ಪ್ರಭಾರ ಮುಖ್ಯ ಶಿಕ್ಷಕ ಗೋವಿಂದರಾಜು, ದೈಹಿಕ ಶಿಕ್ಷಣ ಶಿಕ್ಷಕ ಪಳನಿಸ್ವಾಮಿ ಜಾಗೇರಿ, ಶಿಕ್ಷಕರಾದ ಪಿ.ಲಿಂಗರಾಜ್, ದೇವಿಕಾ ಮತ್ತಿತರರಿದ್ದರು.

ಮಾದಕ ದ್ರವ್ಯಗಳ ಸೇವನೆಯ ಗೀಳು ಬೆಳೆಸಿಕೊಂಡ ಹಲವರು ಮೊದಲು ಸಂತೋಷಕ್ಕಾಗಿ, ಬಳಿಕ ದುಃಖಕ್ಕಾಗಿ ಸೇವೆನೆ ಗೀಳು ಬೆಳೆಸಿಕೊಂಡು ಕೊನೆಗೆ ಸಮಾಜದಲ್ಲಿ ಅಪರಾಧಿಗಳಾಗುವ ಸನ್ನಿವೇಶಗಳಿವೆ. ಯುವ ಪೀಳಿಗೆ ಹಾಗೂ ವಿದ್ಯಾರ್ಥಿ ಸಮೂಹ ಇದನ್ನ ಎಚ್ಚೆತ್ತು ತಾವೆಲ್ಲರೂ ದೂರವಿದ್ದು ಸಮಾಜದಲ್ಲೂ ಈ ಬಗ್ಗೆ ಜಾಗೃತಿಗೆ ಮುಂದಾಗಿ. ಮೋಜಿಗಾಗಿ ಸಿಗರೇಟ್ ಸೇವನೆ ಚಟ ಬೆಳೆಸಿಕೊಂಡವರು ನಂತರ ಅವುಗಳಿಲ್ಲದೆ ನನ್ನಿಂದ ಸಾದ್ಯವಿಲ್ಲ ಎಂಬ ಮಟ್ಟಿಗೆ ಸೀಗರೇಟ್ ಇನ್ನಿತರೆ ಚಟಗಳಿಗೆ ದಾಸರಾಗಿರುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ.

ಶ್ರೀಕಾಂತ್, ವೃತ್ತ ನಿರೀಕ್ಷಕರು, ಯಳಂದೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ