ವಿದ್ಯುತ್‌ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ಕ್ರಮ

KannadaprabhaNewsNetwork |  
Published : Nov 19, 2024, 12:45 AM IST
ಪಟ್ಟಣದ ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌ ಆವರಣದಲ್ಲಿ  3.65 ಕೋಟಿ ರೂ ವೆಚ್ಚದ ಬೆಸ್ಕಾಂ ಉಪ ವಿಭಾಗ ಕಛೇರಿ ಹಾಗೂ ಘಟಕ 1,2 ರ ಕಛೇರಿ ಕಟ್ಟಡದ ನಿರ್ಮಾಣ ಕಾಮಗಾರಿಗೆ ಶಾಸಕ ಬಿಜಿ ಗೋವಿಂದಪ್ಪ  ಭೂಮಿಪೂಜೆಯನ್ನು ನೆರವೇರಿಸಿ ದರು. | Kannada Prabha

ಸಾರಾಂಶ

Steps taken for comprehensive development in the electricity sector

- 3.65 ಕೋಟಿ ರು. ವೆಚ್ಚದ ಬೆಸ್ಕಾಂ ಉಪ ವಿಭಾಗ, ಘಟಕ 1,2 ರ ಕಛೇರಿ ಕಟ್ಟಡದ ನಿರ್ಮಾಣ ಕಾಮಗಾರಿಗೆ : ಶಾಸಕ ಬಿ.ಜಿ ಗೋವಿಂದಪ್ಪ ಭೂಮಿ ಪೂಜೆ

---

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನಲ್ಲಿರುವ ಬೇಡಿಕೆಗೆ ಅನುಗುಣವಾಗಿ ಎಲ್ಲರಿಗೂ ಗುಣಮಟ್ಟದ ವಿದ್ಯುತ್‌ ನೀಡುವ ಸಲುವಾಗಿ ವಿದ್ಯುತ್‌ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವುದಾಗಿ ಶಾಸಕ ಬಿ.ಜಿ ಗೋವಿಂದಪ್ಪ ಹೇಳಿದರು.

ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌ ಆವರಣದಲ್ಲಿ 3.65 ಕೋಟಿ ರು. ವೆಚ್ಚದ ಬೆಸ್ಕಾಂ ಉಪ ವಿಭಾಗ ಕಛೇರಿ ಹಾಗೂ ಘಟಕ 1,2 ರ ಕಛೇರಿ ಕಟ್ಟಡದ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು. ಕಳೆದ ಬಾರಿ ನಾನು ಶಾಸಕನಾಗಿದ್ದಾಗ ಅಂದಿನ ಇಂಧನ ಸಚಿವರಾಗಿದ್ದ ಡಿ.ಕೆ ಶಿವಕುಮಾರ್‌ ಅವರು ತಾಲೂಕಿಗೆ 220 ಕೆವಿಯ ವಿದ್ಯುತ್‌ ವಿತರಣಾ ಕೇಂದ್ರ ಸೇರಿದಂತೆ 2 ಉಪ ವಿಭಾಗಗಳನ್ನು ಮಾಡಿ 4 ಇದ್ದ ಶಾಖಾ ಕಛೇರಿಗಳನ್ನು 8 ಮಾಡಿಕೊಟ್ಟರು. ಅಲ್ಲದೆ ನಾನು ಮೊದಲ ಬಾರಿ ಶಾಸಕನಾಗಿದ್ದಾಗ, ತಾಲೂಕಿನಲ್ಲಿ ಕೇವಲ ಒಂದೇ ಒಂದು ವಿದ್ಯುತ್‌ ವಿತರಣ ಕೇಂದ್ರವಿತ್ತು. ಈಗ 8 ಆಗಿವೆ ಮತ್ತೆ 5 ಉಪ ವಿತರಣಾ ಕೇಂದ್ರಗಳಿಗೆ ಮಂಜೂರಾತಿ ದೊರೆತಿದೆ ಎಂದರು.

ರೈತರ ಬದುಕು ಕೆಇಬಿ ಇಲಾಕೆಯ ಮೇಲೆ , ಬೋರ್‌ವೆಲ್‌ ಮೇಲೆ ನಿಂತಿದೆ. ಹಾಗಾಗಿ, ಅವರಿಗೆ ಬೇಕಾದ ನೀರು ಸಿಗಲು ಸಾಕಷ್ಟು ಚಕ್‌ ಡ್ಯಾಂ ಗಳನ್ನು ನಿರ್ಮಿಸಿ ಬೋರ್‌ ವೆಲ್‌ಗಳ ಆಂತರ್ಜಲ ಮಟ್ಟ ಹೆಚ್ಚುವಂತೆ ಮಾಡಿದ್ದೇನೆ. ಅಲ್ಲದೆ 13 ವಿದ್ಯುತ್‌ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿ ಗುಣಮಟ್ಟದ ವಿದ್ಯುತ್‌ ಸಿಗುವಂತೆ ಮಾಡಿದ್ದೇನೆ ಎಂದ ಅವರು ಈಗಾಗಲೇ ಅಕ್ರಮ ಸಕ್ರಮ ಯೋಜನೆಯಡಿ ರೈತರಿಗೆ ಬೇಕಾದ ಟಿಸಿಗಳನ್ನು ಕೊಡುವ ಕೆಲಸವನ್ನು ಶೀಘ್ರದಲ್ಲಿಯೇ ಮಾಡುತ್ತೇನೆ ಎಂದರು.

ತಾಲೂಕಿನ ಪ್ರತಿ ಮನೆ ಮನೆಗೂ ವಿದ್ಯುತ್‌ ಸಂಪರ್ಕ ಕೊಡಿಸಲು ನಿರಂತರ ಜ್ಯೋತಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿಸಿದ್ದು, ಎಷ್ಠೆ ದೂರದಲ್ಲಿ ದ್ದರು ಪ್ರತಿ ಮನೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಭದ್ರಾ ಯೋಜನೆಗೆ ಬೇಕಾದ 126 ಪಂಪ್‌ ಹೌಸ್‌ ಗಳಿಗೂ ವಿದ್ಯುತ್‌ ಸಂಪರ್ಕಕಲ್ಪಿಸುವ ಕೆಲಸ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ಎಂ.ಪಿ.ಶಂಕರ್, ಅಲ್ತಾಪ್ ಪಾಷ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ತಾಲೂ ಕು ಕೆಡಿಪಿ ಸದಸ್ಯರಾದ ಪದ್ಮನಾಭ್, ಲೋಕೆಶಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಆಗ್ರೋ ಶಿವಣ್ಣ, ಜಿಲ್ಲಾ ಕೆಡಿಪಿ ಸದಸ್ಯ ದೀಪಿಕಾ ಸತೀಶ್, ಬೆಸ್ಕಾಂ ಕಮಿಟಿ ಸದಸ್ಯರಾದ ಬಸವರಾಜ್, ಅನೂಷ್ ಜೈನ್, ಮುಖಂಡರಾದ ನಾಯಿಗೆರೆ ಚಂದ್ರಶೇಖರ್, ಅರಳಿಹಳ್ಳಿ ಲೋಕೇಶ್, ಡಾಕ್ಟರ್ ಹನುಮಂತಪ್ಪ, ಕಾರೇಹಳ್ಳಿ ಜಯ್ಯಣ್ಣ, ವಜ್ರಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಪುರಸಭಾ ಸದಸ್ಯರಾದ ಜಾಫರ್ ಸಾಧಿಕ್, ಶಂಕರಣ್ಣ, ಬ್ರಹ್ಮಪಾಲ್, ಮಾಷ ಸಾಬ್, ರಮೇಶ್, ಉಪವಿಭಾಗಧಿಕಾರಿ ಕಿರಣ್ ರೆಡ್ಡಿ, ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಹಾಗೂ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

----

ಪೋಟೋ: ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌ ಆವರಣದಲ್ಲಿ 3.65 ಕೋಟಿ ರು. ವೆಚ್ಚದ ಬೆಸ್ಕಾಂ ಉಪ ವಿಭಾಗ ಕಛೇರಿ ಹಾಗೂ ಘಟಕ 1,2 ರ ಕಛೇರಿ ಕಟ್ಟಡದ ನಿರ್ಮಾಣ ಕಾಮಗಾರಿಗೆ ಶಾಸಕ ಬಿಜಿ ಗೋವಿಂದಪ್ಪ ಭೂಮಿಪೂಜೆಯನ್ನು ನೆರವೇರಿಸಿದರು.

-----

18ಎಚ್‌ಎಸ್‌ಡಿ1

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ