ಬೆಸ್ಕಾಂ ವಿಭಾಗೀಯ ಕಚೇರಿ ಸ್ಥಾಪನೆಗೆ ಕ್ರಮ

KannadaprabhaNewsNetwork |  
Published : Mar 10, 2025, 12:22 AM IST
ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ 8 ನೂತನ ವಸತಿ ಗೃಹ ನಿರ್ಮಾಣಕ್ಕೆ ಶಾಸಕ ಪುಟ್ಟಸ್ವಾಮಿಗೌಡ ಭೂಮಿ ಪೂಜೆ ನೆರವೇರಿಸಿದರು | Kannada Prabha

ಸಾರಾಂಶ

12ರಿಂದ 14 ತಿಂಗಳ ಅಂತರದಲ್ಲಿ ತಾಲೂಕಿನ ಕೆರೆಗಳಿಗೆ ಎತ್ತಿನಹೊಳೆ ನೀರನ್ನು ಹರಿಸುವ ಕೆಲಸವನ್ನು ಮಾಡಲಾಗುವುದು. ಈಗಾಗಲೇ ಎತ್ತಿನಹೊಳೆ ಯೋಜನೆ ಅಧಿಕಾರಿಗಳು ಎತ್ತಿನಹೊಳೆ ಗೌರಿಬಿದನೂರಿಗೆ ಬರುತ್ತದೆ ಎಂದು ಶಾಸಕರಿಗೆ ಭರವಸೆ ನೀಡಿದ್ದಾರೆ. ತಾಲೂಕಿನಲ್ಲಿ ಒಳಚರಂಡಿ ವ್ಯವಸ್ಥೆಮಾಡಲು ಮುಖ್ಯಮಂತ್ರಿಗಳು ಬಳಿ 100 ಕೋಟಿ ಅನುದಾನಕ್ಕೆ ಶಾಸಕರು ಒತ್ತಾಯಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಬೆಸ್ಕಾಂ ಕಚೇರಿಯಲ್ಲಿ ಹಗಲಿರಳು ಕೆಲಸ ಮಾಡುವಂತಹ ಲೈನ್‌ಮ್ಯಾನ್ ಗಳಿಗೆ ಅನುಕೂಲ ಕಲ್ಪಿಸಲು 2ಕೊಠಡಿ ಒಳಗೊಂಡ 8 ವಸತಿ ಗೃಹ ನಿರ್ಮಾಣ ಮಾಡಲಾಗುವುದು. ಸುಮಾರು 3.80ಕೋಟಿ ವೆಚ್ಚದಲ್ಲಿ ಪ್ರಥಮ ಹಂತದಲ್ಲಿ 8ಮನೆಗಳ ನಿರ್ಮಾಣವಾಗಲಿವೆ ಎಂದು ಶಾಸಕ ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ ಹೇಳಿದರು.ನಗರದ ಮಧುಗಿರಿ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ ಆವರಣದಲ್ಲಿ ನೂತನ ವಸತಿಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಎರಡನೆಯ ಹಂತದಲ್ಲಿ ಕಾಂಪೌಂಡ್, ರಸ್ತೆ, ಕ್ರೀಡಾ ಮೈದಾನ, ಹೆಚ್ಚುವರಿ ಮನೆ ನಿರ್ಮಾಣ ಮಾಡಲು 15 ಕೋಟಿ ರೂಪಾಯಿಗಳು ಅಂದಾಜು ಮೊತ್ತ ಬೇಕೆಂದು ಅಧಿಕಾರಿಗಳು ಕ್ರಿಯಾಯೋಜನೆ ಸಲ್ಲಿಸಿದ್ದಾರೆ ಎಂದರು.

ಡಿವಿಜನ್ ಕಚೇರಿ ಸ್ಥಾಪನೆ

ನಗರದಲ್ಲಿ ಈ ಒಂದು ಜಾಗ ಮಾದರಿ ಜಾಗವನ್ನಾಗಿ ಅಭಿವೃದ್ಧಿ ಮಾಡಿ ಕೊಡುತ್ತೇನೆ. ಈ ಮನೆಗಳ ನಿರ್ಮಾಣ ಕಾರ್ಯ ಆಗುವ ಅಷ್ಟರಲ್ಲಿ ಮತ್ತೆ ಬಜೆಟ್ ತರಸಿ ಅಭಿವೃದ್ಧಿ ಮಾಡುತ್ತೇನೆ. ನಗರ ದಿನೇ ದಿನೇ ಬೆಳೆಯುತ್ತಿದ್ದಂತೆ ಬೆಸ್ಕಾಂ ಕಚೇರಿಗಳು ಸಹ ಸುಸರ್ಜಿತವಾಗಿ ಇರಬೇಕು. ಮತ್ತು ನನ್ನ ಅವಧಿಯಲ್ಲಿ ಇಲ್ಲಿಗೆ ಒಂದು ಡಿವಿಜನ್ ಕಚೇರಿ ಮಂಜೂರು ಮಾಡಿಸುತ್ತೇನೆ ಎಂದು ತಿಳಿಸಿದರು.

ತಾಲೂಕಿಗೆ ಎತ್ತಿನಹೊಳೆ ನೀರು

12ರಿಂದ 14 ತಿಂಗಳ ಅಂತರದಲ್ಲಿ ತಾಲೂಕಿನ ಕೆರೆಗಳಿಗೆ ಎತ್ತಿನಹೊಳೆ ನೀರನ್ನು ಹರಿಸುವ ಕೆಲಸವನ್ನು ಮಾಡಲಾಗುವುದು. ಈಗಾಗಲೇ ಎತ್ತಿನಹೊಳೆ ಯೋಜನೆ ಅಧಿಕಾರಿಗಳು ಮತ್ತು ಸಚಿವರ ಜೊತೆ ಚರ್ಚಿಸಿದ್ದೇನೆ, ಎತ್ತಿನಹೊಳೆ ಗೌರಿಬಿದನೂರಿಗೆ ಬರುತ್ತದೆ ಎಂಬ ಭರವಸೆ ನೀಡಿದ್ದಾರೆ. ತಾಲೂಕಿಗೆ ನನ್ನ ಅವಧಿಯಲ್ಲಿ ಒಳಚರಂಡಿ ವ್ಯವಸ್ಥೆಮಾಡಲು ಮುಖ್ಯಮಂತ್ರಿಗಳು ಬಳಿ 100 ಕೋಟಿ ಅನುದಾನ ಮಂಜೂರು ಮಾಡಿಸಲು ಒತ್ತಾಯಿಸುತ್ತೇನೆ. ನಗರದಲ್ಲಿ ನಿವೇಶನ ರಹಿತರಿಗೆ ಎರಡರಿಂದ ಮೂರು ತಿಂಗಳ ಒಳಗೆ 500 ನಿವೇಶನ ಹಂಚುವ ಕಾರ್ಯ ಮಾಡಲಾಗುವುದು ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಬೆಸ್ಕಾಂ ಇಇ ಸಿವಿಲ್ ಇಂಜಿನಿಯರ್‌ಆದ ಸುನಿತಾ, ಎಇಇ ರಾಜಕುಮಾ‌ರ್, ನಗರಸಭೆ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ, ನಗರಸಭೆ ಮಾಜಿಅಧ್ಯಕ್ಷಿಣಿ ರೂಪಾಅನಂತರಾಜು, ಎಇಇ ಪರಮೇಶ್, ಬೆಸ್ಕಾಂ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ನಗರಸಭೆ ಸದಸ್ಯರು ಕೆ.ಹೆಚ್.ಪಿ ಬಳಗ ಮುಖಂಡರು ಮುಂತಾದವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಮಟ್ಟದ ಸ್ಕ್ವಾಶ್ ಚಾಂಪಿಯನ್‌ಶಿಪ್: ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ
ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ