ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಯನಗರ ಠಾಣೆ ಆವರಣದಲ್ಲಿ ವಾರಸುದಾರರಿಗೆ ಮೊಬೈಲ್‌ಗಳನ್ನು ವಿತರಿಸಿ ಮಾತನಾಡಿದ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲೆಯಾದ್ಯಂತ ಇದುವರೆಗೂ ಸುಮಾರು 6445 ಕಳೆದು ಹೋದ ಮೊಬೈಲ್‌ಗಳು ವರದಿಯಾಗಿದ್ದು, ಇವುಗಳಲ್ಲಿ ದೇಶದ ವಿವಿಧ ರಾಜ್ಯಗಳಾದ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪತ್ತೆ ಮಾಡಿ ಸುಮಾರು 1194ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಾರಸುದಾರರಿಗೆ ನೀಡಿದ್ದು, ನಂತರ ಇದೇ ರೀತಿ ಕಳೆದ 02 ತಿಂಗಳಲ್ಲಿ 110 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲಾಗಿದೆ ಎಂದರು.
ಮೊಬೈಲ್ ಫೋನ್ ಎಂಬುದು ಈ ದಿನಗಳಲ್ಲಿ ಮನುಷ್ಯನ ಒಂದು ಭಾಗವೇ ಆಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಎಲ್ಲರೂ ಸಹ ಮೊಬೈಲ್ ಫೋನ್ ಅನ್ನು ಉಪಯೋಗಿಸುವುದು ಸರ್ವೇ ಸಾಮಾನ್ಯವಾಗಿದೆ. ಯಾರೇ ಆಗಲಿ ಬೆಳಗ್ಗೆ ಎದ್ದ ಕೂಡಲೇ ದೇವರ ಮುಖವನ್ನು ನೋಡುವ ಬದಲು ಸಾಮಾಜಿಕ ಜಾಲತಾಣವನ್ನು ವೀಕ್ಷಿಸುತ್ತಾರೆ ಎಂದರು.ನಿಮ್ಮ ಮೊಬೈಲ್ ಫೋನ್ ಕಳೆದು ಹೋದಾಗ ನೀವು ಜಾಗರೂಕರಾಗಿರದೇ ಹೋದಲ್ಲಿ, ಈ ರೀತಿ ಕಳೆದು ಹೋಗಿರುವ ಮೊಬೈಲ್‌ನ ಸಿಮ್ ಕಾರ್ಡ್‌ನ್ನು ಉಪಯೋಗಿಸಿಕೊಂಡು ಬೇರೆ ಬೇರೆ ರೀತಿಯ ಸೈಬರ್ ಅಪರಾಧವನ್ನು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ತಾವೆಲ್ಲರೂ ಕೂಡ ಜಾಗೂರಕರಾಗಿರಬೇಕು ಎಂದರು.
------
ಜಯನಗರ ಠಾಣೆ ಆವರಣದಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹಿಂದುರಿಗಿಸಿದರು.