ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಹಿಂದು ಪರ ಸಂಘಟನೆಗಳ ಮುಖಂಡ ಬೆಳಗೊಳ ಸುನೀಲ್ ನೇತೃತ್ವದಲ್ಲಿ ಕಾರ್ಯಕರ್ತರು ಸೇರಿ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರು ಪ್ರಯಾಣಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಈ ರೀತಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ. ಪ್ರತಿ ದಿನ ಇಂತಹ ಘಟನೆಗಳು ಸಮಾಜದಲ್ಲಿ ನಡೆಯುವುದರಿಂದ ಭಯ ಮತ್ತು ಅಶಾಂತಿ ಉಂಟುಮಾಡುತ್ತವೆ. ಹಾಗಾಗಿ ಘಟನೆಗೆ ಸಂಬಂಧಿಸಿದವರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಭದ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ವೇಳೆ ಹಿಂದುಪರ ಸಂಘಟನೆಯ ಶಿವಾನಂದ, ಶಂಕರ್, ವಿನಾಯಕ, ಶಿವು ಸೇರಿದಂತೆ ಇತರರಿದ್ದರು.ಕರೀಘಟ್ಟ ಬೆಟ್ಟದಲ್ಲಿ ಶ್ರಮದಾನ ಶಿಬಿರ
ತಾಲೂಕಿನ ಕರಿಘಟ್ಟ ಬೆಟ್ಟದಲ್ಲಿ ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕೆ.ಎಸ್. ಪುಟ್ಟಣ್ಣಯ್ಯ ಸ್ವರ್ಣಾರ್ಥ ಪರಿಸರ ಪ್ರೇಮಿ ರಮೇಶ್ ಮಾರ್ಗದರ್ಶನದಲ್ಲಿ ಶ್ರಮದಾನ ಶಿಬಿರ ಕಾರ್ಯಕ್ರಮ ನಡೆಸಿದರು.
ನಂತರ ಟ್ಯಾಂಕರ್ ಮೂಲಕ ನೀರು ತಂದು ಬಾಡುತ್ತಿದ್ದ ಎಲ್ಲಾ ಗಿಡಗಳಿಗೆ ನೀರುಣಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ಡಾ,ಹರ್ಷ, ಎನ್ ಎಸ್ ಎಸ್ ಶಿಬಿರಧಿಕಾರಿ ಸಿದ್ದರಾಜು, ಹರೀಶ್ ಹಾಗೂ ಅರಣ್ಯ ಅಧಿಕಾರಿಗಳಾದ ಬಸವರಾಜು ಕೃಷ್ಣ ಇತರರು ಉಪಸ್ಥಿತರಿದ್ದರು.