ಕನ್ನಡಪ್ರಭ ವಾರ್ತೆ ಕೆಜಿಎಫ್
ನಗರದ ಕಿಂಗ್ ಜಾರ್ಜ್ ಹಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತಾಲೂಕಿನ ಕದರಿಗಾನಕುಪ್ಪ ಬಳಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಎಪಿಎಂಸಿ ಯಾರ್ಡ್‌ಗೆ ನಿಗದಿಪಡಿಸಿರುವ ೨೫ ಎಕರೆ ಜಮೀನಿನಲ್ಲಿ ಹೇರಳವಾಗಿ ಅಪರೂಪದ ಕಪ್ಪು ಕಲ್ಲು ಕ್ವಾರಿ ಇದ್ದು, ಇದನ್ನು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳದೇ ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರ ಒಳಒಪ್ಪಂದರಾಜ್ಯದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುತ್ತಿದೆ. ಆದರೆ ಕೆಜಿಎಫ್ ನಗರದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಮೌನವಾಗಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ ಅವರು, ಬಿಜೆಪಿ ಪಕ್ಷದಲ್ಲಿದ್ದುಕೊಂಡು ವಿರೋಧ ಪಕ್ಷದವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವವರ ಬಣ್ಣ ಬಯಲುಗೊಳಿಸಲಾಗುವುದು ಮತ್ತು ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ನಂಬಿಕಸ್ಥರಿಂದ ಬೆನ್ನಿಗೆ ಚೂರಿ
ನಾನು ಕ್ಷೇತ್ರಕ್ಕೆ ಬಂದ ವೇಳೆ ಕೆಲವು ಮುಖಂಡರನ್ನು ನಂಬಿದ್ದೆ, ಆದರೆ ಅವರುಗಳು ನನ್ನ ಬಳಿ ಕೆಲಸ ಮಾಡಿಸಿಕೊಂಡು ನನ್ನ ಬೆನ್ನಿಗೆ ಚೂರಿ ಹಾಕಿದರು. ಇನ್ನು ಮುಂದೆ ಅವರನ್ನು ಪರಿಗಣಿಸುವುದಾಗಲೀ, ಅವರು ಸಭೆ ಸಮಾರಂಭಗಳಿಗೆ ಕರೆದರೆ ಹೋಗುವುದಾಗಲೀ ನಾನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಕೆಜಿಎಫ್ ಬಿಜೆಪಿ ಕನ್ವಿನರ್ ಜನಾರ್ದನ್ ನಾಯ್ಡು, ಕೋಲಾರ ಬಿಜೆಪಿ ಉಪಾಧ್ಯಕ್ಷ ವಿಜಯಕುಮಾರ್, ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ ವೆಂಕಟೇಶ್, ರಾಜಗೋಪಾಲ್, ಬಾಲಕೃಷ್ಣ, ರವಿಕುಮಾರ್, ಜಾಮ್ ಇದ್ದರು.