ಧಾರವಾಡ:
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಅಬಕಾರಿ ಇಲಾಖೆಯ ಸಾಯಿ ಸಮಿತಿ ಸಭೆ ಜರುಗಿಸಿದ ಅವರು, ನಕಲಿ ಮದ್ಯ ಹಾಗೂ ಕಳ್ಳ ಬಟ್ಟೆ ತಯಾರಿಕೆ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು ಇವುಗಳ ನಿರ್ಮೂಲನೆಗೆ ವಿಶೇಷ ತಂಡ ರಚಿಸಬೇಕು. ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಆಗುತ್ತಿರುವ ದೂರುಗಳಿದ್ದು ಜಿಲ್ಲೆಯ ಗಡಿಭಾಗದಲ್ಲಿ ತಪಾಸಣೆ ಬಿಗಿಗೊಳಿಸಬೇಕು. ರಾತ್ರಿ ವಾಹನ ಪರಿಶೀಲನೆ ಹೆಚ್ಚಿಸಿ, ಸಂಶಯಾಸ್ಪದ ವಾಹನ ತಡೆದು ಪರಿಶೀಲಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಯುವಕರು ಮದ್ಯ ವ್ಯಸನಿಗಳಾಗುತ್ತಿದ್ದು ಇದನ್ನು ತಡೆಯಲು ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಬೇಕು ಎಂ ಜಿಲ್ಲಾಧಿಕಾರಿ, ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಬಳಕೆ ಹಾಗೂ ಅದರ ಪರಿಣಾಮ ನಿಯಂತ್ರಿಸಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಕ್ರಮ ನಡೆಸುತ್ತಿದೆ. ಈ ಮೂಲಕ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ಬಳಕೆ, ಸಾಗಾಟ ಮತ್ತು ವಿತರಣೆ ಮೇಲೆ ನಿಗಾ ವಹಿಸಿದ್ದು ಅವರೊಂದಿಗೆ ಇಲಾಖೆಗಳ ಸಮನ್ವಯ ಸಾಧಿಸಬೇಕೆಂದು ಹೇಳಿದರು.ಎಸ್ಪಿ ಗುಂಜನ್ ಆರ್ಯ ಮಾತನಾಡಿ, ಮಾದಕ ವಸ್ತುಗಳಿಗೆ ಒಳಗಾಗಿರುವ ಅಥವಾ ಅವುಗಳ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿ ಗುರುತಿಸಿ ನಿಗಾ ಇಡಲಾಗುತ್ತಿದೆ ಎಂದರು.