ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ನೊಣವಿನಕೆರೆಯ ಉಡಿಸಲ ಕೆಂಪಮ್ಮದೇವಿ ಸಮುದಾಯ ಭವನದಲ್ಲಿ ಗುರುವಾರ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರು ಹಾಗೂ ರೈತರು ಸಮಸ್ಯೆಗಳನ್ನು ಹೊತ್ತು ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಿ ಕೆಲಸ ಮಾಡಿಕೊಡಬೇಕು.
ತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧವನ್ನು ಕಟ್ಟಿಸಿರುವುದು ಒಂದೇ ಸೂರಿನಡಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜನರಿಗೆ ಸಿಗುವ ಮೂಲಕ ಕಡಿಮೆ ಅವಧಿಯಲ್ಲಿ ಕೆಲಸಗಳಾಗಬೇಕೆಂಬುದಾಗಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮಸನ್ವಯತೆಯಿಂದ ಕೆಲಸ ಮಾಡಿಕೊಡಬೇಕಾಗಿದೆ. ನಾನು ಸಹ ವಾರದ 4 ದಿನಗಳು ನಗರಸಭೆ ಮತ್ತು ಮಿನಿ ವಿಧಾನಸೌಧದಲ್ಲಿರುತ್ತೇನೆ.ನಿಮ್ಮ ಕೆಲಸ ಕಾರ್ಯಗಳನ್ನು ಆದಷ್ಟು ತುರ್ತಾಗಿ ಮಾಡಿಸಿಕೊಡುತ್ತೇನೆ. ನಮ್ಮಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳೂ ಇದ್ದಾರೆ. ಅದೇ ರೀತಿ ಸೋಮಾರಿ ಅಧಿಕಾರಿಗಳಿದ್ದರೆ ನಾನೆ ಅವರನ್ನು ಗುರುತಿಸಿ ಹೊರ ಕಳುಹಿಸುವ ಮುಂಚೆಯೇ ಅವರೇ ಹೋಗಬೇಕು. ರೈತರಿಗೆ, ಸಾರ್ವಜನಿಕರಿಗೆ ಸ್ಪಂದಿಸದಿದ್ದರೆ ಅಧಿಕಾರದಲ್ಲಿದ್ದರೂ ಪ್ರಯೋಜನವಿಲ್ಲ ಎಂದ ಶಾಸಕರು ಇಲ್ಲಿ ಬಂದಿರುವ ಅರ್ಜಿಗಳನ್ನು ಕಂಪ್ಯೂಟರೀಕರಣಗೊಳಿಸಿ ಆಯಾ ಇಲಾಖೆಯ ಅಧಿಕಾರಿಗಳು ಕೂಡಲೆ ಪರಿಶೀಲನೆ ಮಾಡಿ ಖುದ್ದು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸೂಚಿಸಿದರು.ನಾನೇ ಖುದ್ದು ಸಮಸ್ಯೆ ಬಗೆಹರಿಸುತ್ತೀನಿ: ಡೀಸಿ
ಕಳೆದ ಒಂದು ವಾರದಿಂದ ಜಿಲ್ಲಾದ್ಯಂತ ಪವತಿ ಆಂದೋಲನ ನಡೆಸಲಾಗುತ್ತಿದ್ದು ಜುಲೈ ಅಂತ್ಯದಲ್ಲಿ ಜಿಲ್ಲಾ ಮಟ್ಟದ ಪವತಿ ಆಂದೋಲನ ನಡೆಯಲಿದೆ. ಸ್ಥಳೀಯ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿದರೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆಯೇ ಇರುವುದಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕಾಳಜಿಯಿಂದ ಕೆಲಸ ಮಾಡದಿದ್ದರೆ ಕಠಿಣ ಕ್ರಮಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಕಾರ್ಯಕ್ರಮ ಯಶಸ್ವಿಯಾಗಲಿ ರೈತರಿಗೆ ಅನುಕೂಲವಾಗಲಿ. ಅವರು ನೆಮ್ಮದಿಯಿಂದ ಇದ್ದರೆ ಇಡೀ ದೇಶವೇ ನೆಮ್ಮದಿಯಿಂದ ಬದುಕಲಿದೆ ಎಂದರು.ಸಭೆಯಲ್ಲಿ ಎಸಿ ಸಪ್ತಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ಎಡಿಸಿ ಶಿವಾನಂದ್ ಕರಾಳೆ, ನಗರಸಭಾ ಆಯುಕ್ತ ವಿಶ್ವೇಶ್ವರ ಬದರಗಡೆ, ಗ್ರಾಪಂ ಪ್ರಭಾರ ಅಧ್ಯಕ್ಷೆ ಪವಿತ್ರಾ, ಡಿವೈಎಸ್‌ಪಿ ವಿನಾಯಕಶೆಟ್ಟಗೇರಿ, ಬಿಇಒ ಚಂದ್ರಯ್ಯ, ಕೃಷಿ ಅಧಿಕಾರಿ ಚನ್ನಕೇಶವಮೂರ್ತಿ, ತೋಟಗಾರಿಕೆ ಇಲಾಖೆಯ ಚಂದ್ರಶೇಖರ್, ಎಪಿಎಂಸಿ ಕಾರ್ಯದರ್ಶಿ ನ್ಯಾಮನಗೌಡ, ಪಶು ಇಲಾಖೆಯ ಡಾ. ನಂದೀಶ್, ಬೆಸ್ಕಾಂ ಇಲಾಖೆ ಮನೋಹರ್, ಸಮಾಜ ಕಲ್ಯಾಣ ಇಲಾಖೆಯ ಜಲಜಾಕ್ಷಮ್ಮ, ಸಿಡಿಪಿಓ ಅಶೋಕ್, ತಾಪಂ ಇಒ ಸುದರ್ಶನ್ ಸೇರಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿದ್ದರು.500ಕ್ಕೂ ಹೆಚ್ಚು ವಿವಿಧ ಸಮಸ್ಯೆಗಳ ಸರಮಾಲೆ
ವಸ್ತು ಪ್ರದರ್ಶನ: ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಸ್ಕಾಂ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪಶು ಇಲಾಖೆ, ಕೃಷಿ ಇಲಾಖೆಗಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಇಲಾಖೆಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತಿತ್ತು.