ಕನ್ನಡಪ್ರಭ ವಾರ್ತೆ ಬೀದರ್
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಇಸ್ಲಾಮಿಕ್ ಉಗ್ರಗಾಮಿಗಳ ದಾಳಿಗಳು, ಹತ್ಯೆಗಳು, ಲೂಟಿಗಳು, ಬೆಂಕಿ ಹಚ್ಚುವುದು ಮತ್ತು ಮಹಿಳೆಯರ ಮೇಲಿನ ಅಮಾನವೀಯ ಕಿರುಕುಳ, ಇದು ವಿಶ್ವಶಾಂತಿಯ ಕಾರ್ಯಕ್ಕೆ ಆತಂಕಕಾರಿಯಾಗಿದೆ. ಇದನ್ನು ನಿಲ್ಲಿಸಬೇಕೆಂದು ಬೀದರ್ ನಗರದ ಚಿದಂಬರ ಆಶ್ರಮದ ಶಿವಕುಮಾರ ಮಹಾಸ್ವಾಮಿಗಳು ಆಗ್ರಹಿಸಿದರು.ನಗರದ ಗಣೇಶ ಮೈದಾನದಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಆಯೋಜಿಸಿದ ಬಾಂಗ್ಲಾದೇಶದ ಹಿಂದೂಗಳ ಮತ್ತು ಹಿಂದೂಯೇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, ಈ ಘಟನೆಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಪ್ರಸ್ತುತ ಬಾಂಗ್ಲಾದೇಶ ಸರ್ಕಾರ ಮತ್ತು ಇತರ ಸಂಬಂಧಿತ ಸಂಸ್ಥೆಗಳು ಮೂಕಪ್ರೇಕ್ಷಕರಾಗಿ ಉಳಿದಿವೆ. ಬಾಂಗ್ಲಾದೇಶಿ ಹಿಂದೂಗಳು ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತಿದಾಗ, ಅವರ ಧ್ವನಿಯನ್ನು ಹತ್ತಿ ಕ್ಕಲು ಅನ್ಯಾಯ ಮತ್ತು ದಬ್ಬಾಳಿಕೆಯಾಗುತ್ತಿದೆ ಇದು ಸರಿಯಲ್ಲ, ನಾಳೆ ನಮ್ಮಲ್ಲೂ ಅಂತಹ ಘಟನೆ ಜರುಗಬಹುದು, ಈಗಿನಿಂದಲೇ ಜಾಗೃತರಾಗಿರಬೇಕೆಂದರು.ತಡೋಳಾ - ಮೇಹಕರ ಮಠದ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಹಿಂದೂಗಳು ಸದಾಕಾಲ ಎಚ್ಚರಿಕೆಯಿಂದ ಹಾಗೂ ಒಗ್ಗಟ್ಟಿನಿಂದರಬೇಕು, ಜಾತಿ,ಮತ, ಪಂಥ ಗಳನ್ನು ಮಿರಿ ಧರ್ಮಕ್ಕೊಸ್ಕರ ಮುಂದಡಿಯಿಡಬೇಕು, ಆತ್ಮಬಲಕ್ಕಾಗಿ ಶಸ್ತ್ರಾಸ್ತ್ರಗಳ ಅಭ್ಯಾಸ ಮಾಡುಕೊಳ್ಳಬೇಕು. ಈ ನೆಲದ ಕಾನೂನು ಎಲ್ಲರಿಗೂ ಒಂದೇಯಾಗಿರಬೇಕು. ವಕ್ಫ್ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಸರಿಯಲ್ಲ ಪಕ್ಷಾತೀತವಾಗಿ ಇದನ್ನು ಖಂಡಿಸಬೇಕೆಂದರು.ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮಿ ಮಾತನಾಡಿ, ಪ್ರತಿಯೊಬ್ಬರಲ್ಲಿ ಜಾಗೃತಿ ಬರಬೇಕು, ಆಗ ಮಾತ್ರ ಹಿಂದೂಗಳ ರಕ್ಷಣೆ ಸಾಧ್ಯವೆಂದರು.ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಹಿಂದೂ ಸಮಾಜ ಜಾತಿ ಜಾತಿಯೆಂದು ಬಡಿದಾಡದೆನೆ ಏಕತೆಯಿಂದಿರಬೇಕು, ಧರ್ಮಕಾರ್ಯಕ್ಕೆ ಜಾತಿ ಅಡ್ಡಿಯಾಗಬಾರದು ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯ ಅಕ್ಷಮ್ಯ ಅಪರಾಧ ಭಾರತದಲ್ಲು ಸಂಭವಿಸಬಹುದು ಅದಕ್ಕಾಗಿ ಈಗಿನಿಂದಲೆ ಎಚ್ಚೆತ್ತುಕೊಂಡು ಜಾಗೃತ ರಾಗಿ ಏಕತೆಯಿಂದಿರಬೆಕೆಂದರು.ಸಕಲ ಸಮಾಜದ ಮುಖಂಡರುಗಳಾದ ಮಾಣಿಕರಾವ್ ಗೋಡಬಲೆ, ಬಿ.ಜಿ.ಶೆಟಕಾರ, ಸ್ವಾಮಿದಾಸ ಕೆಂಪನೋರ, ಎಮ್.ಎಸ್ ಕಟಗಿ, ಸ್ವರ್ಣಕ್ಕಾ, ಶಂಕರರಾವ ಬಿರಾದಾರ, ಸುರೇಶ ಚನ್ನಶೆಟ್ಟಿ, ರಮೇಶ ಕುಲಕರ್ಣಿ, ಕುಶಾಲರಾವ ಪಾಟೀಲ ಖಾಜಾಪುರ ಮಾತನಾಡಿ ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಕಟುವಾಗಿ ಖಂಡಿಸಿದರು.ಸಾಮಾಜಿಕ ಕಾರ್ಯಕರ್ತರಾದ ಭಗುಸಿಂಗ್ ಜಾಧವ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು, ಹಿಂದೂಗಳು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗಟ್ಟಲು ಭಾರತ ಸರ್ಕಾರವು ಅಂತರರಾಷ್ಟ್ರೀಯ ಬೆಂಬಲವನ್ನು ಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತನ್ನ ಪ್ರಯತ್ನಗಳನ್ನು ಮುಂದುವರೆಸಬೇಕೆಂದರು.ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಶಂಕರರಾವ್ ಪಾಟೀಲ, ಹಣಮಂತರಾವ್ ಪಾಟೀಲ, ನಾಗೇಶರೆಡ್ಡಿ, ಎಸ್.ಬಿ.ಸಜ್ಜನಶೆಟ್ಟಿ, ರಾಮಕೃಷ್ಣ ಸಾಳೆ, ಈಶ್ವರಸಿಂಗ್ ಠಾಕೂರ, ಗುರುನಾಥ ಜ್ಯಾಂತಿಕರ್, ಪೀರಪ್ಪಾ ಔರಾದೆ, ಶಶಿಧರ ಹೊಸಳ್ಳಿ, ಗುರುನಾಥ ರಾಜಗೀರಾ, ವಿರೇಶ ಸ್ವಾಮಿ, ಭೀಮಣ್ಣಾ ಸೋರಳ್ಳಿ, ಸುನಿಲ ದಳವೆ, ಹೇಮಂತ, ಡಾ.ಸಂತೋಷಕುಮಾರ ಉಪಸ್ಥಿತರಿದ್ದರು.ನಂತರ ಗಣೇಶ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಂಸದ ಭಗವಂತ ಖೂಬಾ, ಮಾಜಿ ಬುಡಾ ಅದ್ಯಕ್ಷ ಬಾಬು ವಾಲಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಾಬುರಾವ್ ಮದಕಟ್ಟಿ, ಎನ್.ಆರ್.ವರ್ಮಾ, ಮುಖಂಡರಾದ ಚನ್ನಬಸವಣ್ಣ ಬಳತೆ, ಕಿರಣ ಪಾಟೀಲ, ರಾಜೇಂದ್ರ ಪೂಜಾರಿ, ದೀಪಕ ಗಾದಗೆ, ರಾಜ ಕುಮಾರ ಅಳ್ಳೆ, ಹೇಮಾ ತುಕ್ಕಾರೆಡ್ಡಿ, ಹೇಮಲತಾ ಜೋಷಿ, ಗುರುನಾಥ ರಾಜಗೀರಾ ಬಗದಲ್ ಸೇರಿದಂತೆ ಇತರರಿದ್ದರು.