ಇರಾನ್-ಅಮೆರಿಕಾ ಯುದ್ಧ ನಿಲ್ಲಲಿ

KannadaprabhaNewsNetwork |  
Published : Mar 16, 2026, 04:15 AM IST
ತಾಳಿಕೋಟೆ 1 | Kannada Prabha

ಸಾರಾಂಶ

ಇರಾನ್ ಮತ್ತು ಅಮೆರಿಕಾ-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಬೇಕಾಗಿದೆ. ಈ ಯುದ್ಧದ ಪರಿಣಾಮ ಕೆಲವು ದೇಶಗಳ ಮೇಲೆ ವ್ಯವಹಾರಿಕ ಸರಕು, ಸಾಗಾಣಿಕೆ ಅಲ್ಲದೇ ಆರ್ಥಿಕವಾಗಿ ಪರಿಣಾಮ ಬೀರುತ್ತಿದೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್‌.ನಾಡಗೌಡ(ಅಪ್ಪಾಜಿ)ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಇರಾನ್ ಮತ್ತು ಅಮೆರಿಕಾ-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಬೇಕಾಗಿದೆ. ಈ ಯುದ್ಧದ ಪರಿಣಾಮ ಕೆಲವು ದೇಶಗಳ ಮೇಲೆ ವ್ಯವಹಾರಿಕ ಸರಕು, ಸಾಗಾಣಿಕೆ ಅಲ್ಲದೇ ಆರ್ಥಿಕವಾಗಿ ಪರಿಣಾಮ ಬೀರುತ್ತಿದೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್‌.ನಾಡಗೌಡ(ಅಪ್ಪಾಜಿ)ಹೇಳಿದರು.

ಪಟ್ಟಣದ ಹಳೆಯ ಕಾಯಪಲ್ಲೆ ಮಾರುಕಟ್ಟೆ ಆವರಣದಲ್ಲಿ ನಾಡಗೌಡ ಅಭಿಮಾನಿ ಬಳಗದ ವತಿಯಿಂದ ರಂಜಾನ್ ಹಬ್ಬದ ನಿಮಿತ್ತ ಏರ್ಪಡಿಸಲಾದ ಸೌಹಾರ್ದ ಇಫ್ತಾರ್‌ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುದ್ಧ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಇದು ಆದಷ್ಟು ಬೇಗ ನಿಂತು, ಶಾಂತಿ ನೆಲೆಸುವಂತಾಗಬೇಕಿದೆ ಎಂದರು.ಭೂಮಿಯ ಮೇಲೆ ಬದುಕಿರುವಷ್ಟು ದಿನ ಒಳ್ಳೆಯ ಕಾರ್ಯಗಳನ್ನು ಮಾಡಬೇಕಾಗಿದೆ. ಮರಣ ಯಾವಾಗ ಬರುತ್ತದೆಯೋ ಗೊತ್ತಿಲ್ಲ, ಮರಣದೊಂದಿಗೆ ನಮ್ಮ ಬದುಕಿನ ಪಯಣ ನಿಂತು ಹೋಗುತ್ತದೆ. ಇಲ್ಲಿ ನಾವು ಕೇವಲ ಪ್ರಯಾಣಿಕರು ಮಾತ್ರ, ಶಾಶ್ವತವಾಗಿ ಇರಲು ಬಂದವರಲ್ಲ. ಎಲ್ಲ ಧರ್ಮಗಳ ಮೂಲ ಮಂತ್ರ ಶಾಂತಿ ಮತ್ತು ಪ್ರೀತಿಯೇ ಆಗಿದೆ. ಅದನ್ನು ತಿಳಿದುಕೊಳ್ಳುವ ಪ್ರಯತ್ನ ನಾವೆಲ್ಲರೂ ಮಾಡಬೇಕಾಗಿದೆ ಎಂದು ತಿಳಿಸಿದರು.ಮುಖಂಡರಾದ ರೋಷನ್ ಡೋಣಿ, ಶಿವರಾಜ ಗುಂಡಕನಾಳ, ಕೆ.ಐ.ಸಗರ ಹಾಗೂ ಇಬ್ರಾಹೀಮ್‌ ಮನ್ಸೂರ, ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಮಾತನಾಡಿ ಶಾಸಕರ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಅಪ್ಪಾಜಿ ನಾಡಗೌಡರನ್ನು ಮುಸ್ಲಿಂ ಸಮಾಜದಿಂದ ಸನ್ಮಾನಿಸಿ, ಗೌರವಿಸಲಾಯಿತು. ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರಘೇಶ ವಿರಕ್ತಮಠ, ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ್‌ ಅಹ್ಮದ್ ಖಾಜಿ, ವಿವಿ ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಗನಿಸಾಬ್‌ ಲಾಹೋರಿ, ಅಬ್ದುಲ್ ರಹಮಾನ್‌ ಎಕೀನ, ಸಿಕಂದರ ವಠಾರ, ನಿರಂಜನಶಾ ಮಕಾಂದಾರ, ಶಮ್ಶುದ್ದೀನ ನಾಲಬಂದ, ಆರೀಫ ಹೊನುಟಗಿ, ಫಯಾಜ ಉತ್ನಾಳ, ಹಸನಸಾಬ ಮನಗೂಳಿ, ಕಾಶೀಮಪಟೇಲ ಮೂಕಿಹಾಳ, ಎ.ಎಸ್.ನಮಾಜಕಟ್ಟಿ, ಡಾ.ನಜೀರ ಕೋಳ್ಯಾಳ, ಡಾ.ಎ.ಎ.ನಾಲಬಂದ, ಎಂ.ಎ.ಮೇತ್ರಿ, ಸಿಕಂದರ ಡೋಣಿ, ಮಂಜೂರ ಬೇಪಾರಿ, ಮಹೆಬೂಬ್‌ ಕೆಂಭಾವಿ, ಮುನ್ನಾ ಅರ್ಜುಣಗಿ, ಅಕ್ಕಮಹಾದೇವಿ ಕಟ್ಟಿಮನಿ, ನೀಲಮ್ಮಗೌಡತಿ ಪಾಟೀಲ, ಸುರೇಶಧಣಿ ನಾಡಗೌಡ (ಬಿಂಜಲಭಾವಿ), ಸಿದ್ದನಗೌಡ ಪಾಟೀಲ (ನಾವದಗಿ), ಪ್ರಭುಗೌಡ ಮದರಕಲ್ಲ, ಬಿ.ಎನ್.ಹಿಪ್ಪರಗಿ, ಗುರು ಗೌಡ ಗುರಡ್ಡಿ, ವೀರೇಶ ಬಾಗೇವಾಡಿ, ಶರಣುಧಣಿ ದೇಶಮುಖ, ಸಂಗನಗೌಡ ಅಸ್ಕಿ, ಆಸೀಫ್‌ ಕೆಂಭಾವಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಸಕಲ ಸೌಲಭ್ಯ
ಎಲ್ಲ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದ ಮಹಿಳೆಯರು