ಕಾಗದರಹಿತ ನೋಂದಣಿ ವ್ಯವಸ್ಥೆ ತಕ್ಷಣ ಸ್ಥಗಿತಗೊಳಿಸಿ

KannadaprabhaNewsNetwork |  
Published : May 04, 2026, 01:15 AM IST
೩ಶಿರಾ4: ಶಿರಾ ನಗರದ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪತ್ರ ಬರಹಗಾರರ ಸಂಘದ ವತಿಯಿಂದ  ಪತ್ರಿಕಾಗೋಷ್ಠಿ ನಡೆಯಿತು. | Kannada Prabha

ಸಾರಾಂಶ

ಕಾವೇರಿ ತಂತ್ರಾಂಶದ ಮೂಲಕ ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯಲ್ಲಿ ಸಾರ್ವಜನಿಕರ ಆಸ್ತಿ, ದಾಖಲಾತಿಗೆ ಭದ್ರತೆ ಇಲ್ಲ, ತಕ್ಷಣ ಈ ವ್ಯವಸ್ಥೆ ಸ್ಥಗಿತಗೊಳಿಸಿ. ಅದರಲ್ಲಿರುವ ಲೋಪದೋಷ ಸರಿಪಡಿಸಬೇಕೆಂದು ಜಿಲ್ಲಾ ಪತ್ರ ಬರಹಗಾರರ ಸಂಘದ ಶಿರಾ ಘಟಕದ ಅಧ್ಯಕ್ಷ ನಾಗೇಂದ್ರ ತಿಳಿಸಿದರು

ಕನ್ನಡಪ್ರಭ ವಾರ್ತೆ ಶಿರಾ ಕಾವೇರಿ ತಂತ್ರಾಂಶದ ಮೂಲಕ ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯಲ್ಲಿ ಸಾರ್ವಜನಿಕರ ಆಸ್ತಿ, ದಾಖಲಾತಿಗೆ ಭದ್ರತೆ ಇಲ್ಲ, ತಕ್ಷಣ ಈ ವ್ಯವಸ್ಥೆ ಸ್ಥಗಿತಗೊಳಿಸಿ. ಅದರಲ್ಲಿರುವ ಲೋಪದೋಷ ಸರಿಪಡಿಸಬೇಕೆಂದು ಜಿಲ್ಲಾ ಪತ್ರ ಬರಹಗಾರರ ಸಂಘದ ಶಿರಾ ಘಟಕದ ಅಧ್ಯಕ್ಷ ನಾಗೇಂದ್ರ ತಿಳಿಸಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಗದ ರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆ ಪ್ರಸ್ತುತ ಚಾಮರಾಜನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದು, ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ. ಇದರಲ್ಲಿ ಆಸ್ತಿ ನೋಂದಣಿ ಆಗಿರುವ ಬಗ್ಗೆ ಭೌತಿಕ ಪತ್ರಗಳನ್ನು ಖರೀದಿದಾರರಿಗೆ ನೀಡುತ್ತಿಲ್ಲ. ಆಸ್ತಿ ಖರೀದಿದಾರರಿಗೆ ನಿಖರ ದಾಖಲೆ ಸಿಗುವುದಿಲ್ಲ. ಆಸ್ತಿ ನೋಂದಣಿ ಸಮಯದಲ್ಲಿ ಖರೀದಿದಾರರು, ಮಾರಾಟಗಾರರು ಭೌತಿಕ ಸಹಿ ಮಾಡದೆ ಇ-ಸಹಿ ಮಾಡುವುದರಿಂದ ಅನಕ್ಷರಸ್ಥ ರನ್ನು ವಂಚಿಸಿ ಆಸ್ತಿ ನೋಂದಣಿ ಮಾಡಿಸಿಕೊಳ್ಳುವ ಅಪಾಯವಿದೆ. ಸಾರ್ವಜನಿಕರ ಹಿತಾಸಕ್ತಿಯಿಂದ ಈ ತಂತ್ರಾಂಶವನ್ನು ಜಾರಿಗೆ ತರುವುದನ್ನು ನಾವು ವಿರೋಧಿಸುತ್ತೇವೆ ಹಾಗೂ ಕಾನೂನು ಸಮರಕ್ಕೂ ನಾವು ಸಿದ್ದರಾಗಿದ್ದೇವೆ. ಮುಂದಿನ ದಿನಗಳಲ್ಲಿ ಸರಕಾರ ಇದನ್ನು ಸರಿಪಡಿಸದಿದ್ದರೆ ಉಗ್ರ ಪ್ರತಿಭಟನೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ ನೂತನವಾಗಿ ಜಾರಿಗೆ ತಂದಿರುವ ತಂತ್ರಾಂಶ ಪೇಪರ್ ಲೆಸ್ ಅಷ್ಟೇ ಅಲ್ಲ ಪೆನ್ ಲೆಸ್ ಕೂಡ ಆಗಿದೆ. ಇದರಿಂದ ಸಾರ್ವಜನಿಕರಿಗೆ ಮೋಸ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಸೈಬರ್ ಕ್ರೈಂ ಹೆಚ್ಚಾಗುವ ಸಾಧ್ಯತೆ ಇದೆ. ಬೇರೆ ರಾಜ್ಯಗಳಲ್ಲಿ ನೀಡಿರುವಂತೆ ನಮ್ಮ ಪತ್ರ ಬರಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪತ್ರ ಬರಹಗಾರರ ಸಂಘದ ಶಿರಾ ತಾಲೂಕ ಅಧ್ಯಕ್ಷ ನಾಗೇಂದ್ರ, ಪ್ರಧಾನಕಾರ್ಯದರ್ಶಿ ಚಂದ್ರಕಲಾ ದಶರಥ, ಖಜಾಂಚಿ ನರಸಪ್ಪ, ಉಪಾಧ್ಯಕ್ಷ ಶ್ರೀರಂಗ, ಪತ್ರ ಬರಹಗಾರರಾದ ಲಕ್ಷ್ಮಿಕಾಂತ್ ,ರಾಜಣ್ಣ ಪುಟ್ಟಣ್ಣ ಸೇರಿದಂತೆ ಇತರೆ ಪತ್ರ ಬರಹಗಾರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸಿ: ಶಿವಸಿದ್ದೇಶ್ವರ ಶ್ರೀ
ಆಲಿಕಲ್ಲು ಸಹಿತ ಮಳೆಗೆ ತೆಂಗು ಅಡಿಕೆ ನಾಶ