ಕನ್ನಡಪ್ರಭ ವಾರ್ತೆ ಮಂಡ್ಯ
ಮೊಬೈಲ್ ನಲ್ಲಿ ಮುಳುಗಿ ಹೋಗಿರುವ ಯುವ ಜನಾಂಗವನ್ನು ಸಾಹಿತ್ಯದತ್ತ ಆಕರ್ಷಿಸಲು ಮತ್ತು ಅಕ್ಷರ ಆಸಕ್ತಿ ಬೆಳೆಸುವ ಉದ್ದೇಶದಿಂದ ಈ ಕಥಾ ಸ್ಪರ್ಧೆ ಆಯೋಜಿಸಲಾಗಿದೆ. ಕನ್ನಡ ಕಥಾ ಜಗತ್ತಿನ ಕಥೆಗಾರರನ್ನು ಪ್ರೋತ್ಸಾಹಿಸಲು, ಉತ್ತೇಜನ ನೀಡಲು ಹಾಗೂ ಆ ಮೂಲಕ ಕನ್ನಡ ಸಾಹಿತ್ಯ ಪರಂಪರೆಗೆ ಹೊಸ ಕಥೆಗಳನ್ನು ಕಾಣಿಕೆಯಾಗಿ ನೀಡಲು ಈ ಕಥಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂರು ಕಥೆಗಳಿಗೆ ತಲಾ ೧೦ ಸಾವಿರ ರು., ೭ ಸಾವಿರ ರು. ಹಾಗೂ ೫ ಸಾವಿರ ರು. ಬಹುಮಾನ ನೀಡಲಾಗುವುದು. ಮೆಚ್ಚುಗೆ ಪಡೆದ ಕಥೆಗಳಿಗೂ ಸೂಕ್ತ ಬಹುಮಾನ ನೀಡಲಾಗುವುದು. ಆಯ್ಕೆಯಾದ ಕಥೆಗಳನ್ನು ನಮ್ಮ ಪ್ರಕಾಶನದಿಂದ ಪ್ರಕಟಿಸಲಾಗುವುದು. ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಅದನ್ನು ಲೋಕಾರ್ಪಣೆಗೊಳಿಸುವುದಾಗಿ ತಿಳಿಸಿದರು.ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರುವ ಸಾಹಿತಿಗಳು ತೀರ್ಪುಗಾರ ರಾಗಿರುತ್ತಾರೆ. ಸ್ಪರ್ಧೆಗೆ ಕಳುಹಿಸುವ ಕಥೆಯು ಸ್ವತಂತ್ರ ರಚನೆಯಾಗಿರಬೇಕು. ಇದಕ್ಕೂ ಮೊದಲು ಯಾವುದೇ ಪತ್ರಿಕೆ, ನಿಯತಕಾಲಿಕೆ, ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಿಯೂ ಪ್ರಕಟ ಮತ್ತು ಪ್ರಸಾರವಾಗಿರಬಾರದು. ಕಥೆ ಎರಡು ಸಾವಿರ ಪದಗಳಿಗೆ ಮಾತ್ರ ಸೀಮಿತವಾಗಿರಬೇಕು. ಕಥೆಯನ್ನು ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಿ ಕಳುಹಿಸಿಕೊಡಬೇಕು. ಕೈಬರಹದ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಕಥೆಗಾರರು ತಮ್ಮ ಹೆಸರು, ಅಂಚೆ ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಇತ್ತೀಚಿನ ಎರಡು ಭಾವಚಿತ್ರದೊಂದಿಗೆ ೮೦ ಪದ ಮೀರದಂತೆ ಕಿರು ಪರಿಚಯವನ್ನು ಪ್ರತ್ಯೇಕ ಪುಟದಲ್ಲಿ ಕಥೆಯ ಜೊತೆ ಕಳುಹಿಸಿಕೊಡಬೇಕು. ಸ್ಪರ್ಧೆಗೆ ಕಳುಹಿಸುವ ಕಥೆಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ. ಆಯ್ಕೆಯಾಗುವ ಕಥೆಗಳನ್ನು ಎಂ ಆರ್ ಎಂ ಪ್ರಕಾಶನವು ಯಾವುದೇ ಸ್ವರೂಪದಲ್ಲಿ ಯಾವಾಗ ಬೇಕಾದರೂ ಬಳಸಿಕೊಳ್ಳುವ ಹಕ್ಕುಗಳನ್ನು ಕಾಯ್ದಿರಿಸಿಕೊಂಡಿರುತ್ತದೆ. ತೀರ್ಪುಗಾರರ ಮತ್ತು ಸಂಪಾದಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಞ್ಟಞಟ್ಠಚ್ಝಿಜ್ಚಿಠಿಜಿಟ್ಞ೨೫ಜಞಜ್ಝಿ.್ಚಟಞ ಇಲ್ಲಿಗೆ ಕಳುಹಿಸುವಂತೆ ತಿಳಿಸಿದರು.
ಗೋಷ್ಠಿಯಲ್ಲಿ ಮಂಜು ಮುತ್ತೇಗೆರೆ, ಕೊತ್ತತ್ತಿರಾಜು, ಉಮೇಶ್ ದಡಮಹಳ್ಳಿ ದೇವರಾಜ ಎಸ್. ಪಂಡಿತ್ ಇದ್ದರು.