ಬಲವರ್ಧನೆಗೊಂಡ ಸರ್ಕಾರಿ ಶಾಲೆಗಳು

KannadaprabhaNewsNetwork |  
Published : Jun 24, 2024, 01:33 AM IST
ವಡೇರಹಟ್ಟಿಯ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ಜರುಗಿದ ಸರ್ಕಾರಿ ಪ್ರಾಥಮಿಕ ಶಾಲೆಗಳ ಪಾಲಕರ ಸಭೆಯಲ್ಲಿ ತಾಪಂ ಇಒ ಎಫ್.ಜಿ.ಚಿನನ್ನವರ ಮಾತನಾಡಿದರು.   | Kannada Prabha

ಸಾರಾಂಶ

ಮಕ್ಕಳ ಸರ್ವತೋಮುಖ ವಿಕಾಸನದಲ್ಲಿ ಶಿಕ್ಷಕರಷ್ಟೆ ಪಾತ್ರ ಪಾಲಕರದ್ದು ಎಂಬುವುದನ್ನು ಮರೆಯಬಾರದು ಎಂದು ಮೂಡಲಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ.ಚಿನ್ನನ್ನವರ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಮಕ್ಕಳ ಸರ್ವತೋಮುಖ ವಿಕಾಸನದಲ್ಲಿ ಶಿಕ್ಷಕರಷ್ಟೆ ಪಾತ್ರ ಪಾಲಕರದ್ದು ಎಂಬುವುದನ್ನು ಮರೆಯಬಾರದು ಎಂದು ಮೂಡಲಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ.ಚಿನ್ನನ್ನವರ ಹೇಳಿದರು. ತಾಲೂಕಿನ ವಡೇರಹಟ್ಟಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯ ಪಾಲಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳಿಗೆ ಅನೇಕ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳು ಬಲವರ್ಧನೆಗೊಂಡಿದ್ದು ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡಬೇಕು ಎಂದು ಮನವಿ ಮಾಡಿದರು.

ವಡೇರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ ಅನುದಾನಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಟದ ಮೈದಾನ, ಸೌಚಾಲಯ, ಸ್ಮಾರ್ಟ್‌ ಕ್ಲಾಸ್, ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಿದು. ಬಾಕಿ ಉಳಿದರುವ ಸೌಲಭ್ಯಗಳನ್ನು ಒದಗಿಸಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಪ್ರತಿ ತಿಂಗಳು ಶಾಲೆಯಲ್ಲಿ ಜರುಗುವ ಪಾಲಕರ ಸಭೆಯಲ್ಲಿ ಪಾಲಕರು ಭಾಗವಹಿಸಿ ತಮ್ಮ ಮಕ್ಕಳ ಶಿಕ್ಷಣದ ಗುಣ್ಣಮಟ್ಟವನ್ನು ಆಲಿಸಬೇಕು ಎಂದರು.ವಡೇರಹಟ್ಟಿ ಸಿಆರ್‌ಪಿ ಆನಂದ ಹಮ್ಮನವರ ಮಾತನಾಡಿ, ವಡೇರಹಟ್ಟಿ ಸಮೂಹ ಸಂಪನ್ಮೂಲ ವ್ಯಾಪ್ತಿಯಲ್ಲಿ ಉತ್ತಮ ವಿದ್ಯಾರ್ಹತೆ ಮತ್ತು ತರಬೇತಿ ಹೊಂದಿದ ಕ್ರಿಯಾಶೀಲ ಶಿಕ್ಷಕರು ಇದ್ದು, ಗುಣ್ಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ವಡೇರಹಟ್ಟಿ ಗ್ರಾಪಂ ಅಧ್ಯಕ್ಷೆ ಅಕ್ಕವ್ವ ಮಳಿವಡೇರ, ಉಪಾಧ್ಯಕ್ಷೆ ಲಕ್ಕವ್ವ ಸಾರಾಪೂರ, ಪಿಡಿಒ ಶಿವಾನಂದ ಗುಡಸಿ ಅವರು ಶೈಕ್ಷಣಿಕ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ಸಭೆಯಲ್ಲಿ ಗ್ರಾಪಂ ಸದಸ್ಯರು, ಮುಖ್ಯೋಪಾಧ್ಯಾಯರಾದ ಲಕ್ಷ್ಮಣ ಕೊರಕೊಪ್ಪ, ಎಂ.ಕೆ.ಶಿರಗೂರ, ಗ್ರಾಪಂ ಕಾರ್ಯದರ್ಶಿ ಚೇತನ ಬಳಿಗಾರ, ಕೆಂಪಣ್ಣ ಪಡದಾಳಿ, ಅಶೋಕ ಅರಸಪ್ಪಗೋಳ, ಸಿದ್ದಯ್ಯ ಪೂಜೇರಿ, ಖಾನಪ್ಪ ಹೋಳ್ಕರ, ಪ್ರಕಾಶ ಗಿಡೋಜಿ ಹಾಗೂ ಗ್ರಾಮದ ಮುಖಂಡರು ಮತ್ತು ಪಾಲಕರು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ