ಶಾಸಕರ ದುರಾಡಳಿತದಿಂದ ಕೈ ಬಲವರ್ಧನೆ

KannadaprabhaNewsNetwork |  
Published : Sep 04, 2024, 01:57 AM IST
ತೇರದಾಳ ಕ್ಷೇತ್ರದಲ್ಲಿ `ಕೈ’ ಮತ್ತಷ್ಟು ಬಲವರ್ಧನೆಯಾಗುತ್ತಿದೆ : ಸಿದ್ದು ಕೊಣ್ಣೂರ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ತೇರದಾಳ ವಿಧಾನಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪಕ್ಷವು ಮತ್ತಷ್ಟು ಬಲವರ್ಧನೆಯಾಗುತ್ತಿದ್ದು, ಕ್ಷೇತ್ರದಲ್ಲಿ ಹಾಲಿ ಶಾಸಕರ ದುರಾಡಳಿತ ಹೆಚ್ಚಾಗಿದೆ. ಇದರಿಂದ ಬೇಸತ್ತು ಇದೀಗ ಬಿಜೆಪಿ ಹಾಲಿ ಸದಸ್ಯರು ಹಾಗೂ ಮುಖಂಡರು ಕಾಂಗ್ರೆಸ್‌ ಪಕ್ಷದತ್ತ ವಾಲುತ್ತಿದ್ದಾರೆ. ಅವರ ದುರಾಡಳಿತಕ್ಕೆ ಇದೇ ತಾಜಾ ಉದಾಹರಣೆ ಎಂದು ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತೇರದಾಳ ವಿಧಾನಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪಕ್ಷವು ಮತ್ತಷ್ಟು ಬಲವರ್ಧನೆಯಾಗುತ್ತಿದ್ದು, ಕ್ಷೇತ್ರದಲ್ಲಿ ಹಾಲಿ ಶಾಸಕರ ದುರಾಡಳಿತ ಹೆಚ್ಚಾಗಿದೆ. ಇದರಿಂದ ಬೇಸತ್ತು ಇದೀಗ ಬಿಜೆಪಿ ಹಾಲಿ ಸದಸ್ಯರು ಹಾಗೂ ಮುಖಂಡರು ಕಾಂಗ್ರೆಸ್‌ ಪಕ್ಷದತ್ತ ವಾಲುತ್ತಿದ್ದಾರೆ. ಅವರ ದುರಾಡಳಿತಕ್ಕೆ ಇದೇ ತಾಜಾ ಉದಾಹರಣೆ ಎಂದು ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ತಿಳಿಸಿದರು.ಬನಹಟ್ಟಿಯ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇತ್ತೀಚೆಗೆ ಮಹಾಲಿಂಗಪೂರ ಹಾಗೂ ತೇರದಾಳ ಪುರಸಭೆಗಳು ಕಾಂಗ್ರೆಸ್‌ನ `ಕೈನ ವಶವಾಗಿರುವುದು ವಿಶೇಷವಾಗಿದೆ. ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ನ ಶಕ್ತಿ ಹಾಗು ರಾಜ್ಯದ ಸಿಎಂ ಆಗಿರುವ ಸಿದ್ರಾಮಯ್ಯನವರ ಕಾರ್ಯಕ್ಷಮತೆ ಸ್ಥಳೀಯ ಸಂಸ್ಥೆಗಳ ಆಡಳಿತದ ಮೇಲೆ ಪ್ರಭಾವ ಬೀರುವಲ್ಲಿ ಕಾರಣವಾಗಿದೆ. ಅಲ್ಲದೆ ಬಿಜೆಪಿ ಸದಸ್ಯರೇ ಸ್ವಯಂಪ್ರೇರಿತವಾಗಿ ಈಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಆಡಳಿತ ನಿರ್ವಹಣೆಗೆ ಅವಕಾಶ ಕೊಟ್ಟಿರುವದಕ್ಕೆ ಕೊಣ್ಣೂರ ಅಭಿನಂದಿಸಿದರು.

ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರು ಮಾತನಾಡಿ, ಜಿಲ್ಲೆಯಾದ್ಯಂತ ಪಕ್ಷ ಬಲವರ್ಧನೆ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಬೇರೆಯವರನ್ನು ಆಯ್ಕೆ ಮಾಡಿದ್ದಕ್ಕೆ ತಮಗೇನು ಅಸಮಾಧಾನವಿಲ್ಲ. ಅದೆಲ್ಲವನ್ನು ಮರೆತು ಇದೀಗ ಪಕ್ಷದ ಬಲಿಷ್ಠತೆಗೆ ಹಾಗು ಸಂಘಟನೆಗೆ ನಿರಂತರವಾದ ಸೇವೆ ನಮ್ಮದಾಗಿರಬೇಕು ಎಂದು ಹೇಳಿದರು.

ಟಿಕೆಟ್ ಯಾರಿಗೇ ನೀಡಲಿ ಪಕ್ಷದಲ್ಲಿ ಪ್ರಾಮಾಣಿಕವಾದ ದುಡಿಮೆಯನ್ನು ಪ್ರತಿಯೊಬ್ಬರು ಮಾಡಬೇಕು. ಮುಂದಿನ ಚುನಾವಣೆಗಳನ್ನು ದಿಕ್ಸೂಚಿಯನ್ನಾಗಿಸಿಕೊಂಡು ಗಮನಹರಿಸಿ ಪಕ್ಷಕ್ಕಾಗಿ ದುಡಿಯಬೇಕು. ಅಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಸರ್ಕಾರ ನೀಡಿದ ಪಂಚ ಗ್ಯಾರಂಟಿಗಳ ಆಶೀರ್ವಾದವನ್ನು ಪ್ರತಿಯೊಬ್ಬ ಮತದಾರರು ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಮುನ್ನಡೆಯಬೇಕೆಂದು ವೀಣಾ ತಿಳಿಸಿದರು.ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸೌದಾಗರ, ನಗರ ಘಟಕದ ಕಾಂಗ್ರೆಸ್‌ ಅಧ್ಯಕ್ಷ ರಾಜೇಂದ್ರ ಭದ್ರನ್ನವರ, ಭೀಮಶಿ ಮಗದುಮ್, ನಶೀಮ ಮೊಕಾಶಿ, ಹಾರುನ ಬೇವೂರ, ಇರ್ಷಾದ ಮೋಮಿನ್, ಬುಡೇನಸಾಬ ಜಮಾದಾರ, ಯೂನಸ್ ನಿಪ್ಪಾಣಿ, ರಫೀಕ್ ಬೇಪಾರಿ, ಶಾನೂರ ಮಾಲದಾರ, ಸೈಫಲಿ ಭಾಗವಾನ ಸೇರಿದಂತೆ ಇನ್ನು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ಉಪರಾಷ್ಟ್ರಪತಿ ಹುದ್ದೆ ರೇಸಲ್ಲಿ ರಾಜ್ಯ ಗೌರ್ನರ್‌ ಗೆಹಲೋತ್‌?
ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ತುಂಬಿ