ಶಿರಸಿ: ಅರುಣಾಚಲ ಪ್ರದೇಶದ ಮೂಲಕ ಭಾರತಕ್ಕೆ ಅಕ್ರಮವಾಗಿ ಅಡಕೆ ಆಮದಾಗುವ ಸಾಧ್ಯತೆಯಿಲ್ಲ. ಆದರೂ ಕಣ್ತಪ್ಪಿನಿಂದ ಅಕ್ರಮವಾಗಿ ಅಡಕೆ ಬರಬಾರದೆಂದು ಇನ್ನೂ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅರುಣಾಚಲ ಪ್ರದೇಶದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಪಶು ವೈದ್ಯಕೀಯ ಸಚಿವ ಗೇಬ್ರಿಯಲ್ ಡಿ. ವಾಂಗಚೂ ತಿಳಿಸಿದರು.ಶುಕ್ರವಾರ ನಗರದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯಲ್ಲಿ ಸಮಾಲೋಚನೆ ಸಭೆಯಲ್ಲಿ ಮಾತನಾಡಿ, ಹೊರ ರಾಷ್ಟ್ರದಿಂದ ಕಳ್ಳ ಸಾಗಣೆ ಆಗುವ ಅಡಕೆಯಿಂದ ಭಾರತದ ಅಡಕೆ ಬೆಳೆಗಾರರ ಮತ್ತು ದೇಶದ ಆರ್ಥಿಕತೆಗೆ ಸಮಸ್ಯೆ ಆಗುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಅಕ್ರಮ ಅಡಕೆ ಸಾಗಾಟ ಇಲ್ಲ. ಆದರೂ ಬಿಎಸ್‌ಎಫ್ ಮತ್ತು ಪೊಲೀಸರಿಂದ ಅಕ್ರಮ ಅಡಕೆಯ ಸಾಗಾಟವನ್ನು ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.ಕದಂಬ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ಉತ್ತರಕನ್ನಡದಲ್ಲಿ ಸುಂದರವಾಗಿ ಕೋ- ಆಪರೇಟಿವ್ ಮೂಲಕ ಕೃಷಿ ಖರೀದಿ ವ್ಯವಸ್ಥೆ ಮಾಡಿ ಹಳ್ಳಿಗಳಲ್ಲಿನ ಸಣ್ಣ ಸಣ್ಣ ಕೃಷಿಕರ ಬವಣೆ ದೂರ ಮಾಡಿದ್ದಾರೆ. ಇಲ್ಲಿಯ ಸಹಕಾರಿಗಳು ಸಾಕಷ್ಟು ತ್ಯಾಗ ಮಾಡಿದ್ದು, ಇದರಿಂದ ಹಳ್ಳಿಯ ಕೃಷಿಕರಿಗೆ ಅನುಕೂಲವಾಗಿದೆ ಎಂದರು. ಅರುಣಾಚಲ ಪ್ರದೇಶ ಸರ್ಕಾರದ ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ಕೋಜ್ ರೆನಿಯಾ ಮಾತನಾಡಿದರು. ಈ ಸಂದರ್ಭದಲ್ಲಿ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಅಧ್ಯಕ್ಷ ಶಂಭುಲಿಂಗ ಹೆಗಡೆ, ನಿರ್ದೇಶಕ ನಾರಾಯಣ ಹೆಗಡೆ ಗಡಿಕೈ, ಟಿಎಸ್‌ಎಸ್ ಉಪಾಧ್ಯಕ್ಷ ಎಂ.ಎನ್. ಭಟ್ಟ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್., ತೋಟಗಾರಿಕೆ ಜಂಟಿ ನಿರ್ದೇಶಕ ಶಿವಕುಮಾರ, ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಆಶೀಸರ, ಜಿ.ಆರ್. ಹೆಗಡೆ, ಶಿರಸಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಬಿ.ಪಿ. ಸತೀಶ, ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ್ ಎಚ್., ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ, ಸಂಶೋಧಕ ಜಿ.ವಿ. ಹೆಗಡೆ, ಗಡಿಕೈ ಇತರರು ಉಪಸ್ಥಿತರಿದ್ದರು.
ಹದಗೆಟ್ಟ ರಸ್ತೆ ದುರಸ್ತಿಗೆ ಸಾರ್ವಜನಿಕರ ಆಗ್ರಹಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದಿಂದ ಕುಂದರಗಿ ಮೂಲಕ ಉಳ್ಳಾಲ- ತೆಂಕಾಲ- ಉಮ್ಮಚಗಿ ತಲುಪುವ ೯ ಕಿಮೀ ದೂರದ ಡಾಂಬರು ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.೨೦೧೫ರಲ್ಲಿ ನಮ್ಮೂರು- ನಮ್ಮ ರಸ್ತೆ ಯೋಜನೆಯಡಿ ಈ ರಸ್ತೆ ಪೂರ್ಣ ಡಾಂಬರೀಕರಣಗೊಂಡಿತ್ತು. ನಂತರದ ೯ ವರ್ಷಗಳಲ್ಲಿ ಮಳೆ ಮತ್ತಿತರ ಕಾರಣಗಳಿಂದಾಗಿ ರಸ್ತೆ ಗುಂಡಿಗಳಾಗಿ, ಕೆಲವೆಡೆ ಕಾಲುವೆಯಂತಾಗಿದೆ.
ಶಿರಸಿ, ಮುಂಡಗೋಡ, ಯಲ್ಲಾಪುರ ತಾಲೂಕುಗಳ ನಡುವೆ ಸಂಪರ್ಕ ಬೆಸೆಯುವ ಈ ರಸ್ತೆಯ ದುರಸ್ತಿಗಾಗಿ ಸಂಸದರು, ಶಾಸಕರಿಗೆ ಮನವಿ ನೀಡಿದ್ದರೂ ಈವರೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲವೆಂಬುದು ಈ ಪ್ರದೇಶದ ಸುಮಾರು ೨೦೦ ಮನೆಗಳ ಸಾವಿರಾರು ಸಾರ್ವಜನಿಕರ ಅಳಲಾಗಿದೆ.ರಸ್ತೆಯನ್ನು ಸುವ್ಯವಸ್ಥಿತ ಸ್ವರೂಪದಲ್ಲಿ ನಿರ್ಮಿಸುವ ಕ್ರಮ ಕೈಗೊಳ್ಳದಿದ್ದರೆ ಕುಂದರಗಿ, ಬುಗಡೀಸರ, ಹರಾಹುರಿ, ಉಳ್ಳಾಳ, ತೆಂಕಾಲ, ಉಮ್ಮಚಗಿ ಪ್ರದೇಶದ ನಾಗರಿಕರು ಹೋರಾಟ ಹಮ್ಮಿಕೊಳ್ಳಬೇಕಾದೀತೆಂದು ಎಚ್ಚರಿಸಿದ್ದಾರೆ.
ಗ್ರಾಪಂ ಸದಸ್ಯ ರಾಮಕೃಷ್ಣ ಹೆಗಡೆ, ಗ್ರಾಮಸ್ಥರಾದ ಪದ್ಮನಾಭ ಭಟ್ಟ, ದಿನೇಶ ಗೌಡರ್, ಪರಮೇಶ್ವರ ಹೆಗಡೆ, ಚಂದ್ರಶೇಖರ ಹೆಗಡೆ, ಸುಬ್ರಹ್ಮಣ್ಯ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.