ಜೀವದ ಬೆಲೆ ತಿಳಿಯದೇ ವೀಲ್ಹೀಂಗ್ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲವೆಂದು ಸರ್ಕಲ್ ಇನ್ಸ್‌ಪೆಕ್ಟರ್ ಹನುಮಂತರಾಯಪ್ಪ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಇಂದಿನ ಯುವ ಜನಾಂಗ ಹುರುಪಿನಲ್ಲಿ ರಸ್ತೆಗಳ ಮೇಲೆ ಬೈಕ್‌ಗಳಲ್ಲಿ ವೀಲ್ಹೀಂಗ್ ಮಾಡುವ ಮೂಲಕ ಚಮತ್ಕಾರ ತೋರುವ ಯುವ ಪೀಳಿಗೆ ಸಮಯ ಸಂದರ್ಭಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಚಲ್ಲಾಟಕ್ಕೆ ಜೀವದ ಬೆಲೆ ತಿಳಿಯದೇ ವೀಲ್ಹೀಂಗ್ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲವೆಂದು ಸರ್ಕಲ್ ಇನ್ಸ್‌ಪೆಕ್ಟರ್ ಹನುಮಂತರಾಯಪ್ಪ ಎಚ್ಚರಿಕೆ ನೀಡಿದರು.
ಶನಿವಾರ ಸಂಜೆ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ರಂಜಾನ್ ಹಾಗೂ ಯುಗಾದಿ ಹಬ್ಬಗಳ ಪ್ರಯುಕ್ತ ಕರೆದಿದ್ದ ಸಾರ್ವಜನಿಕ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಹಬ್ಬಹರಿದಿನಗಳ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆ ವಿನಹಃ ಹುಡುಗಾಟಕ್ಕೆ ವೀಲ್ಹೀಂಗ್ ಮಾಡಿ ಚಲ್ಲಾಟದಿಂದ ಪ್ರಾಣಸಂಕಟ ತಂದುಕೊಳ್ಳಬಾರದು. ಪೊಲೀಸ್ ಇಲಾಖೆ ಗೊತ್ತುಪಡಿಸಿರುವ ರಸ್ತೆ ನಿಯಮಗಳನ್ನು ಪಾಲಿಸಿದರೆ ಎಲ್ಲರಿಗೂ ಕ್ಷೇಮ ಎಂದರು.
ಈಗಾಗಲೇ ವೀಲ್ಹೀಂಗ್ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇಂತಹ ಚಟುವಟಿಕೆಗಳಲ್ಲಿ ಯುವ ಜನಾಂಗ ತೊಡಗಿಸಿ ಕೊಳ್ಳದಂತೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ನಿರ್ಕ್ಷಿಸಿದರೆ ಮಕ್ಕಳ ಜೊತೆಗೆ ಪೋಷಕರಿಗೂ ತೊಂದರೆಯಾಗುವ ಸಾಧ್ಯತೆಯಿದೆ. ರಂಜಾನ್ ಮತ್ತು ಯುಗಾದಿ ಹಬ್ಬಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ಇಲಾಖೆ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಂಡಿದೆ ಎಂದರು.
ಪಿಎಸೈ ಚಂದ್ರಶೇಖರ್ ಮಾತನಾಡಿ, ಹಬ್ಬಗಳು ಶಾಂತಿ, ಸೌಹಾರ್ದತೆಯ ಸಂಕೇತ, ಮಧುಗಿರಿ ತಾಲೂಕಿನಲ್ಲಿ ಹಿಂದೂ, ಮುಸ್ಲಿಂರು ಹಿಂದಿನಿಂದಲೂ ಭಾವೈಕ್ಯತೆಯಿಂದ ಹಬ್ಬ ಆಚರಿಸಿ ಕೊಂಡು ಬರುತ್ತಿದ್ದು,ಮಧುಗಿರಿ ತಾಲೂಕು ಶಾಂತಿ,ಸುವ್ಯವಸ್ಥೆಗೆ ಹೆಸರಾಗಿದೆ ಎಂದರು.ಯುಗಾದಿ ಹಬ್ಬದ ಸಂದರ್ಭದಲ್ಲಿ ಪಾಳು ಬಿದ್ದ ಮನೆಗಳು ,ಲೇಔಟ್ ಪ್ರದೇಶಗಳು ಹಾಗೂ ಇನ್ನಿತರೆ ಸ್ಥಳಗಳ್ಲಲಿ ಯಾರಿಗೂ ಗೊತ್ತಾಗದಂತೆ ಜೂಜು ಆಡಲು ಅನುಮತಿ ನೀಡುವಂತೆ ಯಾರು ಸಹ ಪೊಲೀಸ್ ಠಾಣೆಗೆ ಬರ ಬಾರದು. ಇಸ್ಪಿಟ್ ಆಟ ಕಾನೂನು ಬಾಹಿರವಾಗಿದ್ದು,ಅಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸಭೆಯಲ್ಲಿ ಮುಖಂಡರಾದ ಬಾಬು ಪಕೃದ್ಧೀನ್,ಎಸ್ಬಿಟಿ ರಾಮು,ಹಿರಿಯ ಪತ್ರಕರ್ತ ಜಿ.ನಾರಾಯಣರಾಜು, ತಿಮ್ಮರಾಜು, ಕೇಶವಮೂರ್ತಿ, ಶರೀಫ ಸಿಕಂದರ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.