ಜಿಲ್ಲೆಯಲ್ಲಿ ಅಪರಾಧ ತಡೆಗೆ ಕಟ್ಟುನಿಟ್ಟಿನ ಕ್ರಮ

KannadaprabhaNewsNetwork |  
Published : Dec 31, 2025, 01:15 AM IST
ಸಿಕೆಬಿ-4 ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳ ಕಚೇರಿ  ಮೈದಾನದಲ್ಲಿ    ಪ್ರಕರಣ ವೊಂದರಲ್ಲಿ ವಶಪಡಿಸಿಕೊಂಡಿದ್ದ ಹಣವನ್ನು  ವಾರಸುದಾರರಿಗೆ ಹಣವನ್ನು ಎಸ್ ಪಿ ಕುಶಲ್ ಚೌಕ್ಸೆ ಹಸ್ತಾಂತರಿಸಿದರು | Kannada Prabha

ಸಾರಾಂಶ

ನಗರದ ಪ್ರದೇಶದಲ್ಲಿ ಜನರು ಅಲರ್ಟ್ ಆಗಿರುತ್ತಾರೆ ಎಂದು ತಿಳಿದಿರುವ ಸರಗಳ್ಳರು, ಗ್ರಾಮೀಣ ಮತ್ತು ನಗರದ ಹೊರವಲಯಗಳಲ್ಲಿ ಇರುವ ಜಮೀನುಗಳಲ್ಲಿ ಕೆಲಸ ಮಾಡುವ, ದನ - ಕುರಿಗಳನ್ನು ಕಾಯುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದಾರೆ. ಜಮೀನುಗಳಲ್ಲಿ, ಹೊರವಲಯದ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಇರುವುದಿಲ್ಲ. ಆದ್ದರಿಂದ ಕಳ್ಳರು ಈ ದಾರಿ ಹುಡುಕಿಕೊಂಡಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಒಂದೇ ವರ್ಷದಲ್ಲಿ ದಾಖಲಾದ 42 ಗಾಂಜಾ ಪ್ರಕರಣಗಳಲ್ಲಿ 69 ಜನರ ಬಂಧಿಸಿ, 159 ಕೆಜಿ ಗಾಂಜಾವಶ ಪಡಿಸಿಕೊಳ್ಳಳಾಗಿದೆ. ಜಿಲ್ಲೆಯಲ್ಲಿ ಬೇರೆ ಬೇಕೆ ಪ್ರಕರಣಗಳಲ್ಲಿ 2.5 ಕೋಟಿ ರು.ಗಳ ಮೌಲ್ಯದ ನಗದು, ಒಡವೆ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಜಿಲ್ಲೆಯಲ್ಲಿ ಅಪರಾಧ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ತಿಳಿಸಿದರು.

ನಗರ ಹೊರವಲಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮೈದಾನದಲ್ಲಿ ಮಂಗಳವಾರ ನಡೆದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ವಸ್ತುಗಳ ಪ್ರದರ್ಶನ ಮತ್ತು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

₹2.5 ಕೋಟಿ ಮೌಲ್ಯದ ವಸ್ತುಗಳ ವಶ

ಜಿಲ್ಲೆಯಲ್ಲಿ 2025ರ ಅವಧಿಯಲ್ಲಿ 31 ಕೊಲೆ, ಒಂದು ದರೋಡೆ, ನಾಲ್ಕು ಸುಲಿಗೆ, 9 ಸರಗಳ್ಳತನ, 146ಕಳ್ಳತನ ಪ್ರಕರಣಗಳು, 7 ಜಾನುವಾರು ಕಳುವು ಪ್ರಕರಣ, ವಾಹನ ಕಳ್ಳತನ, 76 ವಂಚನೆ ಪ್ರಕರಣಗಳಲ್ಲಿ 2.5 ಕೋಟಿ ರು.ಗಳ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ, ನಗರದ ಹೊರವಲಯ ಮತ್ತು ಗ್ರಾಮೀಣ ಪ್ರದೇಶದಲ್ಲಿಯೂ ಸರಗಳ್ಳತನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ನಗರದ ಪ್ರದೇಶದಲ್ಲಿ ಜನರು ಅಲರ್ಟ್ ಆಗಿರುತ್ತಾರೆ ಎಂದು ತಿಳಿದಿರುವ ಸರಗಳ್ಳರು, ಗ್ರಾಮೀಣ ಮತ್ತು ನಗರದ ಹೊರವಲಯಗಳಲ್ಲಿ ಇರುವ ಜಮೀನುಗಳಲ್ಲಿ ಕೆಲಸ ಮಾಡುವ, ದನ - ಕುರಿಗಳನ್ನು ಕಾಯುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದಾರೆ. ಜಮೀನುಗಳಲ್ಲಿ, ಹೊರವಲಯದ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಇರುವುದಿಲ್ಲ. ಆದ್ದರಿಂದ ಕಳ್ಳರು ಈ ದಾರಿ ಹುಡುಕಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ನಮ್ಮ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.ಮಾದಕ ವಸ್ತುಗಳ ತಡೆಗೆ ಕ್ರಮ

ಗಾಂಜಾ ನಿಯಂತ್ರಣಕ್ಕೂ ಕ್ರಮ ಜರುಗಿಸಿದ್ದು, ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. 343 ಮಾರಣಾಂತಿಕ ಅಪಘಾತಗಳು ನಡೆದು, 378 ಜನ ಮೃತರಾಗಿ 183 ಗಾಯಗೊಂಡೊದ್ದರೆ 601 ಸಾಮಾನ್ಯ ಅಪಘಾತಗಳಾಗಿ 848ಗಾಯ ಗೊಂಡಿದ್ದಾರೆ. ಹೆಲ್ಮೆಟ್ ಧರಿಸದ ಸುಮಾರು ಆರು ಸಾವಿರ ಪ್ರಕರಣಗಳಲ್ಲಿ 30 ಲಕ್ಷ ರೂಪಾಯಿಗಳ ದಂಡವನ್ನು ವಸೂಲು ಮಾಡಲಾಗಿದೆ. ಜಿಲ್ಲೆಯಲ್ಲಿ 738 ರೌಡಿ ಶೀಟರ್ ಗಳಿದ್ದು ಅವರಲ್ಲಿ 691 ಜನರವಿರುದ್ದ ಭದ್ರತಾ ಪ್ರಕರಣ ದಾಖಲಾಗಿವೆ. 10 ರೌಡಿ ಶೀಟರ್ ಗಳನ್ನು ಗಡಿಪಾರು ಮಾಡಲಾಗಿದೆ ಎಂದರು.

ಮಾದಕ ವಸ್ತುಗಳ ತಡೆಗೆ ಕ್ರಮ

179 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು ಈ ಕುರಿತು ಶಾಲಾ ಕಾಲೇಜು ಮತ್ತು ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 11 ಅತ್ಯಾಚಾರ ಪ್ರಕರಣಗಳು ನಡೆದಿವೆ. 595 ಅಬಕಾರಿ ಪ್ರಕರಣಗಳಲ್ಲಿ 638 ಜನರನ್ನು ಬಂಧಿಸಿ, 984.880 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ವೇಳೆ ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ಜಗನ್ನಾಥರೈ, ಡಿವೈಎಸ್ ಪಿಗಳಾದ ಎಸ್.ಶಿವಕುಮಾರ್, ಮುರಳೀಧರ್, ಸಿಪಿಐಗಳಾದ ಆನಂದ್ ಕುಮಾರ್, ಮುನಿಕೃಷ್ಣ, ಪ್ರಶಾಮತ್ ವರ್ಣಿ, ವಿಜಯ್ ಕುಮಾರ್, ನಂಜನ್ ಕುಮಾರ್,ಶಿವರಾಜ್, ಪಿಎಸ್ಐಗಳಾದ ವೇಣುಗೋಪಾಲ್, ಗುಣವತಿ, ರತ್ನಾಭಾಯಿ, ಶ್ಯಾಮಲ, ಗಣೇಶ್, ಪ್ರಕಾಶ್,ಪುನೀತ್ ನಂಜರಾಯ್, ಲಲಿತಮ್ಮ, ಶಿವಕುಮಾರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ಯಾಕುಮಾರಿಗೆ ಸುರೇಶ್‌ ಕುಮಾರ! ಸೈ‘ಕ್ಲಿಂಗ್‌’!
ಹೊಸ ವರ್ಷಾಚರಣೆಗೆ ಸಿಲಿಕಾನ್‌ ಸಿಟಿ ಸಜ್ಜು