ನಾಪೋಕ್ಲು ವಾಹನ ದಟ್ಟಣೆ ತಡೆಗೆ ಕಠಿಣ ಕ್ರಮ: ಠಾಣಾಧಿಕಾರಿ ಮಂಜುನಾಥ್‌

KannadaprabhaNewsNetwork |  
Published : Jan 10, 2025, 12:47 AM IST
32 | Kannada Prabha

ಸಾರಾಂಶ

ನಾಪೋಕ್ಲು ಪಟ್ಟಣದಲ್ಲಿ ವಾಹನದಟ್ಟಣೆ ನಿಯಂತ್ರಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ. ಪಟ್ಟಣದಲ್ಲಿ ಬುಧವಾರ ವಾಹನ ಚಾಲಕರ ಮತ್ತು ಅಂಗಡಿ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪಟ್ಟಣದಲ್ಲಿ ವಾಹನದಟ್ಟಣೆ ನಿಯಂತ್ರಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ವಾಹನ ಚಾಲಕರ ಮತ್ತು ಅಂಗಡಿ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

ವಾಹನ ಚಾಲಕರು ಪಕ್ಕಾ ದಾಖಲೆಗಳನ್ನು ಹೊಂದಿ ಇಲ್ಲದಿದ್ದಲ್ಲಿ ಕಾನೂನು ಕ್ರಮಕ್ಕೆ ಬದ್ಧರಾಗಿ ಎಂದು ಅವರು ಎಚ್ಚರಿಕೆ ನೀಡಿದರು. ಆಟೋ ಚಾಲಕರು ಸಮವಸ್ತ್ರ ಧರಿಸಿದ್ದು, ಚಾಲನ ಪರವಾನಗಿ, ವಿಮೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಹೊಂದಿರಬೇಕು. ಪಟ್ಟಣದಲ್ಲಿ ರಸ್ತೆ ಕಿರಿದಾಗಿದ್ದು ಆಟೋ ನಿಲ್ದಾಣಕ್ಕೆ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಶೀಘ್ರದಲ್ಲಿ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದರು.

ಪೊಲೀಸ್ ಇಲಾಖೆ ವತಿಯಿಂದ ನೂತನವಾಗಿ ಎನ್‌ಪಿಕೆ ನಂಬರ್ ಅಳವಡಿಸಲಾಗುವುದು ಎಂದ ಅವರು, ಎಲ್ಲೆಂದರಲ್ಲಿ ಆಟೋ ನಿಲುಗಡೆ , ಮದ್ಯಪಾನ ಮಾಡಿ ಆಟೋ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು .

ಸಂತೆ ದಿನ ಸೋಮವಾರ ವಾಹನ ದಟ್ಟಣೆ ಇರುವುದರಿಂದಾಗಿ ವ್ಯಾಪಾರಸ್ಥರು ಮುಖ್ಯ ರಸ್ತೆ ಬದಿ ವಸ್ತುಗಳನ್ನು ಮಾರಾಟ ಮಾಡುವುದರಿಂದ ವಾಹನ ಸಂಚಾರಕ್ಕೆ ತೊಡಕಾಗುತ್ತಿರುವುದರಿಂದಾಗಿ ರಸ್ತೆ ಬದಿಯ ವ್ಯಾಪಾರ ನಿರ್ಬಂಧಿಸಲಾಗುವುದು ಎಂದರು.

ಬಸ್‌ಗಳು ಬಸ್‌ ನಿಲ್ದಾಣದಲ್ಲಿ ಕೇವಲ ಐದು ನಿಮಿಷದಲ್ಲಿ ಮಾತ್ರ ನಿಲುಗಡೆಗೊಳಿಸಬೇಕು. ಅಂಗಡಿ ಮಾಲೀಕರು ತಮ್ಮ ವಾಹನವನ್ನು ಅಂಗಡಿಯದುರು ನಿಲ್ಲಿಸದೆ ಪೊಲೀಸ್ ಮೈದಾನದಲ್ಲಿ ನಿಲ್ಲಿಸಬೇಕು, ಸಂಜೆ 7ರಿಂದ ಬೆಳಗ್ಗೆ 8 ಗಂಟೆಯೊಳಗೆ ಲಾರಿಗಳಿಂದ ಸರಕುಗಳನ್ನು ಅಂಗಡಿ ಮಾಲೀಕರು ಇಳಿಸಬೇಕು, ಕಾರ್ಮಿಕರಿಂದ ಹಾಗೂ ಇತರರಿಂದ ಕದ್ದು ತಂದ ಕಾಫಿ, ಕರಿಮೆಣಸು ಇತರ ವಸ್ತುಗಳನ್ನು ಅಂಗಡಿ ಮಾಲೀಕರು ಖರೀದಿಸಬಾರದು ಇಂತದ್ದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುನಾಥ್ ಸ್ಪಷ್ಟಪಡಿಸಿದರು.

ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಮುಂಡಂಡ ಸಿ ನಾಣಯ್ಯ, ಕಾರ್ಯದರ್ಶಿ ಕುಲ್ಲೆಟಿರ ಅಜಿತ್ ನಾಣಯ್ಯ ,ಗ್ರಾಮ ಪಂಚಾಯಿತಿ ಸದಸ್ಯ ಮಾಚೆಟ್ಟಿರ ಕುಸು ಕುಶಾಲಪ್ಪ, ವರ್ತಕ ಎಂ ಎ ಮನ್ಸೂರ್ ಅಲಿ, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸುಕುಮಾರ್ ,ಅಂಗಡಿ ಮಾಲೀಕರು ಹಾಗೂ ಚಾಲಕರು ಇದ್ದರು.

PREV

Recommended Stories

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು
ಚೈತಾಲಿ ಹತ್ಯೆ ಖಂಡಿಸಿ ಪ್ರತಿಭಟನೆ