7ನೇ ವೇತನ ಆಯೋಗದ ಶಿಪಾರಸ್ಸು ಜಾರಿವರೆಗೂ ಮುಷ್ಕರ ನಿಲ್ಲದು: ರಘುಪತಿ

KannadaprabhaNewsNetwork | Published : Dec 15, 2023 1:30 AM

ಸಾರಾಂಶ

7ನೇ ವೇತನ ಆಯೋಗದ ಶಿಪಾರಸ್ಸು ಜಾರಿವರೆಗೂ ಮುಷ್ಕರ ನಿಲ್ಲದು: ರಘುಪತಿಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರ ಮುಂದುವರಿದ ಹೋರಾಟ

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರ ಮುಂದುವರಿದ ಹೋರಾಟ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಗ್ರಾಮೀಣ ಅಂಚೆ ನೌಕರರು ಕಳೆದ ಅನೇಕ ವರ್ಷಗಳಿಂದ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಈಗಲು ಮುಷ್ಕರ ನಿರತರಾಗಿದ್ದು, ಏಳನೆ ವೇತನ ಆಯೋಗದ ವರದಿ ಶಿಪಾರಸ್ಸುಗಳನ್ನು ಜಾರಿಗೊಳಿಸುವವರೆಗೂ ಅನಿರ್ಧಿಷ್ಠಾವಧಿ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಗ್ರಾಮೀಣ ಅಂಚೆ ನೌಕರರ ಒಕ್ಕೂಟದ ರಘುಪತಿ ಹೇಳ್ದರು. ಶೃಂಗೇರಿ ಅಂಚೆ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಠಾವಧಿ ಮುಷ್ಕರದಲ್ಲಿ ಮಾತನಾಡಿದರು. 7 ನೇ ವೇತನ ಆಯೋಗವನ್ನು ಕಂದ್ರ ಸರ್ಕಾರ ಜಾರಿಗೊಳಿಸಿದ್ದರೂ ಕೂಡ ವರದಿಯಲ್ಲಿನ ಶಿಪಾರಸ್ಸುಗಳನ್ನು ಜಾರಿಗೊಳಿಸಲು ಮೀನಾಮೇಷ ಎಣಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಸೇವೆಯಲ್ಲಿರುವ ಅಂಚೆ ನೌಕರರು ದಿನವಿಡೀ ಕೆಲಸ ಮಾಡುವಂತಹ ಸಂದರ್ಭ ಉಂಟಾಗಿದೆಇತ್ತ ದಿನಗೂಲಿ ನೌಕರರು, ಅತ್ತ ನೌಕರರು ಎಂಬ ಗೊಂದಲದಲ್ಲಿ ದಯನೀಯ ಸ್ಥಿತಿ ಉಂಟಾಗಿದೆ. ಸೇವಾ ಹಿರಿತನವಿದ್ದರೂ ಯಾವುದೇ ಸೇವಾ ಭದ್ರತೆಯಿಲ್ಲ. ಸೇವೆ ಸಲ್ಲಿಸುತ್ತಿರುವುದು ಹೊರತುಪಡಿಸಿ ಯಾವುದೇ ಸೌಲಭ್ಯಗಳು ಇಲ್ಲ. ಕಮಲೇಶ ಚಂದ್ರ ಸಮೀತಿ ಗ್ರಾಮೀಣ ಅಂಚೆ ನೌಕರರಿಗೆ ಪ್ರತ್ಯೇಕ ಶಿಪಾರಸ್ಸು ಮಾಡಿದೆ. ಸರ್ಕಾರ ಕೂಡಲೇ ಈ ವರದಿ ಜಾರಿಗೊಳಿಸಬೇಕು ಎಂದರು. ಬೆಳಿಗ್ಗೆಯಿಂದಲೂ ಕರ್ತವ್ಯಕ್ಕೆ ಹಾಜರಾಗದೇ ಕಚೇರಿ ಎದುರು ಧರಣಿ ಕುಳಿತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಗಣೇಶಮೂರ್ತಿ, ಪ್ರಕಾಶ್‌, ಬಾಲಕೃಷ್ಣ, ರಂಜಿತಾ, ಭೂಮಿಕಾ,ಮತ್ತಿತರರು ಇದ್ದರು.14 ಶ್ರೀ ಚಿತ್ರ 1-

ಶೃಂಗೇರಿಯಲ್ಲಿ ಗ್ರಾಮೀಣ ಅಂಚೆ ನೌಕರರು 7 ನೇ ವೇತನ ಆಯೋಗ ವರದಿ ಶಿಪಾರಸ್ಸು ಜಾರಿಗೊಳಿಸುವಂತೆ 3 ನೇ ದಿನದ ಅನಿರ್ಧಿಷ್ಠಾವಧಿ ಮುಷ್ಕರದಲ್ಲಿ ಕಚೇರಿ ಎದುರು ಕಳಿತು ಧರಣಿ ನಡೆಸಿದರು.

Share this article