ಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಗೆ ಭೇಟಿ ನೀಡಿ, ಮಕ್ಕಳ ಕಲಿಕೆ, ಉಪಹಾರ, ಶಿಕ್ಷಕರ ದಾಖಲಾತಿ ಪರಿಶೀಲನೆ ನಡೆಸಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣ ಪಡೆದು ದೇಶಕ್ಕೆ ಮಾದರಿ ಸಂವಿಧಾನ ರೂಪಿಸಿದ್ದಾರೆ. ಶಿಕ್ಷಣ ಇದ್ದರೆ ದೇಶ ಅಭಿವೃದ್ಧಿ ಹೊಂದುತ್ತದೆ. ಪ್ರತಿ ದಿನವು ಕೂಡಾ ಶಿಕ್ಷಣದಲ್ಲಿ ಹೊಸ ರೀತಿ ಕಲಿಕೆ ಇರಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ತದನಂತರ ತರಗತಿ ಕೋಣೆಗಳಿಗೆ ತೆರಳಿ ಎಸ್ಎಸ್ಎಲ್‌ಸಿ ಮಕ್ಕಳ ಕಲಿಕೆ ಬಗ್ಗೆ ಹಾಗೂ ಬೆಳಗ್ಗೆ, ಸಾಯಂಕಾಲ ಅವಧಿಯ ತರಗತಿಗಳು ನಡೆಯುತ್ತಿವೆಯೇ ಅಥವಾ ಇಲ್ಲವೇ ಎಂಬುವುದರ ಮಾಹಿತಿ ಪಡೆದುಕೊಂಡರು.ಶಿಕ್ಷಕರಿಗೆ 10ನೇ ತರಗತಿ ಫಲಿತಾಂಶ ಹೆಚ್ಚಳ ಕುರಿತು ಮಾಹಿತಿ ನೀಡಿದರು. ಎಲ್ಲಾ ವಿಷಯ ಶಿಕ್ಷಕರ ದಾಖಲೆ ಪರಿಶೀಲಿಸಿದರು. ಮಕ್ಕಳಿಗೆ ವೈದ್ಯಕೀಯ ತಪಾಸಣೆ ಮಾಡಿಸಿದ್ದು ಹಾಗೂ ಅವರ ಆರೋಗ್ಯದ ಕಡೆ ಗಮನಕೊಡಿ, ಕಾಳಜಿ ವಹಿಸಿ ಎಂದು ತಿಳಿಸಿದರು.