ಸ್ವರ್ಥ ಸೇವಾ ಮನೋಭಾವದಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ: ಡಾ. ದೇವದಾಸ್ ರೈ

KannadaprabhaNewsNetwork |  
Published : Jul 12, 2024, 01:36 AM IST
ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ | Kannada Prabha

ಸಾರಾಂಶ

ರೋಟರಿ ಜಿಲ್ಲಾ ಸಹಾಯಕ ಗವರ್ನರ್‌ ಡಾ.ರಂಜನ್‌ರವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿ ತಮ್ಮ ಪೂರ್ಣ ಸಹಕಾರವನ್ನು ನೀಡುವ ಅಶ್ವಾಸನೆ ನೀಡಿ ಸಂಸ್ಥೆಯ ವಾರ್ತಾ ಗೃಹಪತ್ರಿಕೆ ‘ಸಮುದ್ರ ವಾಹಿನಿ’ಯನ್ನು ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರೋಟರಿ ಸಂಸ್ಥೆಯು ವಿಶ್ವದ ಪ್ರಥಮ ಅಂತಾರಾಷ್ಟ್ರೀಯ ಸ್ವಯಂ ಪ್ರೇರಿತ ಸೇವಾ ಸಂಸ್ಥೆಯಾಗಿದ್ದು, ಸಂಸ್ಥೆಯ ಪದಾಧಿಕಾರಿಗಳು ಕ್ರೀಯಾಶೀಲರಾಗಿ, ಸಂಸ್ಥೆಗೆ ನೂತನ ಸದಸ್ಯರನ್ನು ಸೇರ್ಪಡಿಸಿ ಬಲಪಡಿಸಬೇಕು. ನಿಸ್ವಾರ್ಥ ಸೇವಾ ಮನೋಭವಾದಿಂದ ದುರ್ಬಲರ ಆರ್ಥಿಕ ಏಳಿಗೆಗೆ ಶ್ರಮಿಸಬೇಕು. ಅಸ್ವಸ್ಥರ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿ ಜೀವನ ಶೈಲಿಯನ್ನು ಬದಲಿಸಬೇಕು. ಸಮಾಜದ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು ಶೌಚಾಲಯ ಶಿಕ್ಷಣ ಸಮಸ್ಯೆಗಳಿಗೆ ಸ್ಪಂದಿಸಿ ಸಂಸ್ಥೆಗೆ ಗೌರವ ಸಂಪಾದಿಸಬೇಕು ಎಂದು ರೋಟರಿ ಮಾಜಿ ಜಿಲ್ಲಾ ಗರ್ವನರ್‌ ಡಾ. ದೇವದಾಸ್‌ ರೈ ಸಲಹೆ ನೀಡಿದ್ದಾರೆ.

ಅವರು ಪದಗ್ರಹಣ ಅಧಿಕಾರಿಯಾಗಿ ರೋಟರಿ ಕ್ಲಬ್ ಮಂಗಳೂರು ಸಿ ಸೈಡ್ ಸಂಸ್ಥೆ ನಗರದ ಮಾಯಾ ಇಂಟರ್‌ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಜರಗಿದ ನೂತನ ಪದಾಧಿಕಾರಿಗಳ ಪದಗ್ರಹಣ ವಿಧಿವಿಧಾನವನ್ನು ನೆರವೇರಿಸಿ ಮಾತನಾಡಿದರು.

ರೋಟರಿ ಜಿಲ್ಲಾ ಸಹಾಯಕ ಗವರ್ನರ್‌ ಡಾ.ರಂಜನ್‌ರವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿ ತಮ್ಮ ಪೂರ್ಣ ಸಹಕಾರವನ್ನು ನೀಡುವ ಅಶ್ವಾಸನೆ ನೀಡಿ ಸಂಸ್ಥೆಯ ವಾರ್ತಾ ಗೃಹಪತ್ರಿಕೆ ‘ಸಮುದ್ರ ವಾಹಿನಿ’ಯನ್ನು ಅನಾವರಣಗೊಳಿಸಿದರು.

ವಲಯ ಅಧಿಕಾರಿ ಡಾ. ಯತೀಶ್ ಕುಮಾರ್ ಮತ್ತು ಸಂಸ್ಥೆಯ ಸಲಹೆಗಾರ ಮಾದವ್ ಸುವರ್ಣ ರವರು ಸಂಸ್ಥೆಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಸಂಸ್ಥೆಯು ಜಿಲ್ಲಾ ಮಟ್ಟದಲ್ಲಿ ಪ್ಲಾಟಿನಮ್ ಪ್ರಶ್ತಸಿ ಪಡೆದಿರುದನ್ನು ಅಭಿನಂದಿಸಿ ನೂತನ ತಂಡಕ್ಕೆ ಯಶಸ್ಸು ಕೋರಿದರು.

ನಿರ್ಗಮನ ಅಧ್ಯಕ್ಷ ಶಿವರಾಮ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಆಚನ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.

ಮನೋಹರ್ ಕದ್ರಿ ನಿರೂಪಿಸಿದರು. ಕಾರ್ಯದರ್ಶಿ ಆಶೋಕ್ ವಂದಿಸಿದರು.ಪದಾಧಿಕಾರಿಗಳ ವಿವರ: ಕೋಶಾಧಿಕಾರಿ ಅಚ್‌ನ್ ಶೆಟ್ಟಿ, ದಂಡಾಧಿಕಾರಿ ಜಗಜೀವನ್ ದಾಸ್, ನಿರ್ದೇಶಕರು ನೆಲ್ಸನ್ ಗೋವಿಯಸ್ (ಸಂಸ್ಥೆ ಸೇವೆ), ಕಿರಣ್ ಕುಮಾರ್ (ವೃತ್ತಿಪರ ಸೇವೆ) ಚಂದ್ರಶೇಖರ್ (ಸಮುದಾಯ ಸೇವೆ) ಸುರೇಶ್ (ಅಂತಾರಾಷ್ಟ್ರೀಯ ಸೇವೆ), ಸುನಂದ (ಯುವಜನ ಸೇವೆ).

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...