ಕನ್ನಡಪ್ರಭ ವಾರ್ತೆ ರಾಮದುರ್ಗ
ತಾಲೂಕಿನ ಸುರೇಬಾನ ಪೊಲೀಸ್ ಠಾಣೆಯಲ್ಲಿ ರಾಮದುರ್ಗ ವಿಭಾಗಮಟ್ಟದ ಅನುಸೂಚಿತ ಜಾತಿ; ಜನಾಂಗದವರ ಸಭೆಯಲ್ಲಿ ಮಾತನಾಡಿದ ಅವರು, ಮೊದಲಿಗೆ ಮನಪರಿವರ್ತನೆಯಿಂದ ಅಸ್ಪೃಶ್ಯತೆ ನಿವಾರಿಸಲು ಯತ್ನಿಸಿ ಕೊನೆಗೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಪರಿಶಿಷ್ಟರ ಉದ್ಧಾರಕ್ಕಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಸರ್ಕಾರಿ ಸೌಲಭ್ಯಗಳನ್ನು ಪರಿಶಿಷ್ಟ ಜಾತಿಯಲ್ಲಿಯೇ ಸುಶಿಕ್ಷಿತರು ಗ್ರಾಮದಲ್ಲಿ ಇರುವ ಜನರಿಗೆ ಸರಿಯಾಗಿ ತಲುಪಿಸಲು ಯತ್ನಿಸಬೇಕು. ಅಂದಾಗ ಮಾತ್ರ ಯೋಜನೆಯ ಅನುಷ್ಠಾನ ಸಮರ್ಪಕವಾಗಿ ಜರುಗಲಿದೆ ಎಂದು ಹೇಳಿದರು.ಪ್ರತಿ ತಿಂಗಳಿಗೊಮ್ಮೆ ಪೊಲೀಸ್‌ಠಾಣೆ ಮಟ್ಟದಲ್ಲಿ ಪರಿಶಿಷ್ಟರ ಕುಂದುಕೊರತೆ ಸಭೆ ಜರುಗುತ್ತದೆ. ಮೂರು ತಿಂಗಳಿಗೊಮ್ಮೆ ಜಿಲ್ಲಾಮಟ್ಟದಲ್ಲಿ ಸಭೆ ಜರುಗುತ್ತದೆ. ಅಲ್ಲದೇ ಗ್ರಾಮಗಳ ಬೀಟ್‌ಪೊಲೀಸರು ಗ್ರಾಮಗಳಿಗೆ ತೆರಳಿ ಅಲ್ಲಿನವರ ತೊಂದರೆಗಳನ್ನು ಆಲಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಇಷ್ಟಾಗಿಯೂ ದೌರ್ಜನ್ಯ ಪ್ರಕರಣಗಳು ಜರುಗಿದರೆ ನೇರವಾಗಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಬೇಕು ಎಂದು ತಿಳಿಸಿದರು.
ಸಿಪಿಐ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಕಾನೂನು ಬಳಕೆ ಮಾಡಿ ಹೆಲ್ಮೆಟ್ ಧರಿಸಲು ಸಾರ್ವಜನಿಕರಿಗೆ ಹೊರೆ ಮಾಡುವುದಕ್ಕಿಂತ ಸವಾರರ ಮನ ಪರಿವರ್ತನೆ ಮಾಡುವ ಮೂಲಕ ಹೆಲ್ಮೆಟ್ ಖರೀದಿಗೆ ಪ್ರೇರಣೆ ನೀಡುವುದು ಇಲಾಖೆಯ ಮುಖ್ಯ ಉದ್ದೆಶವಾಗಿದೆ ಎಂದು ಹೇಳಿದರು.