ಆತ್ಮವಿಶ್ವಾಸದಿಂದ ಗುರಿಯೆಡೆಗೆ ಮುನ್ನುಗ್ಗಿ: ಡಾ.ಮಹಾಂತೇಶ ಬಿರಾದರ

KannadaprabhaNewsNetwork |  
Published : Dec 03, 2024, 12:32 AM IST
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿಸ್ಸಿ, ಬಿಕಾಂ ಹಾಗೂ ಬಿಎ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪರಿವರ್ತನಾ ಸಮಾರಂಭವನ್ನು ಸಚಿವ ಎಂ.ಬಿ.ಪಾಟೀಲರ ಜನ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದರ ಉದ್ಘಾಟಿಸಿದರು. | Kannada Prabha

ಸಾರಾಂಶ

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಹಾತ್ಮ ಗಾಂಧಿಜೀ ಸೇರಿ ಮಹಾತ್ಮರ ಮೂರ್ತಿಗಳ ಸ್ಥಾಪನೆ ಮಡುವ ವಿದ್ಯಾರ್ಥಿಗಳು ಜೀವನದಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಡೆಯುತ್ತಿದೆ

ಕನ್ನಡಪ್ರಭ ವಾರ್ತೆ ಬೀಳಗಿ

ಎಲ್ಲಿ ಕ್ರಿಯಾಶೀಲತೆ ಹಾಗೂ ಚಟುವಟಿಕೆ ಇರುತ್ತದೆಯೂ ಅಲ್ಲಿ ಜೀವಂತಿಕೆ ಇರುತ್ತದೆ. ಎಲ್ಲಿ ಜೀವಂತಿಕೆ ಇರುತ್ತದೆ ಅಲ್ಲಿ ಮನುಷ್ಯತ್ವ ಇರುತ್ತವೆ. ಎಲ್ಲಿ ಮನುಷ್ಯತ್ವ ಇರುತ್ತದೆ ಅಲ್ಲಿ ಮೌಲ್ಯಯತೆ ಇರುತ್ತದೆ. ಅಲ್ಲಿ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲರ ಜನ ಸಂಪರ್ಕಾಧಿಕಾರಿ ಡಾ.ಮಹಾಂತೇಶ.ಎಸ್.ಬಿರಾದರ ಹೇಳಿದರು.

ಸ್ಥಳೀಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಪ್ರಥಮದರ್ಜೆ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಮಹಾವಿದ್ಯಾಲಯ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ ಬಿಸ್ಸಿ ಹಾಗೂ ಬಿಕಾಂ, ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪರಿವರ್ತನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಹಾತ್ಮ ಗಾಂಧಿಜೀ ಸೇರಿ ಮಹಾತ್ಮರ ಮೂರ್ತಿಗಳ ಸ್ಥಾಪನೆ ಮಡುವ ವಿದ್ಯಾರ್ಥಿಗಳು ಜೀವನದಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳು ಎಂದು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಆತ್ಮ ವಿಶ್ವಾಸ ಕಳೆದುಕೊಂಡರೆ ನಮ್ಮ ಮುಂದಿನ ಗುರಿ ಮುಟ್ಟಲಿಕ್ಕೆ ಸಾಧ್ಯವಾಗಲ್ಲ ಎಂದರು.

ಎಂ.ಎನ್.ಪಾಟೀಲರ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ತಮ್ಮಆತ್ಮವಿಶ್ವಾಸ ಕಳೆದುಕೊಳ್ಳಬಾರದೆಂದು ಮನಗಂಡು ಶಿಕ್ಷಣ ಬೇಕಾಗುವ ಎಲ್ಲ ಮೂಲಭೂತ ಸೌಲಭ್ಯಗಳು ಮತ್ತು ಕೆಜಿಯಿಂದ ಹಿಡಿದು ಪಿಜಿಯವರೆಗೆ ಒಂದು ಸೂರಿನಲ್ಲಿ ಉತ್ತರ ಕರ್ನಾಟಕದಲ್ಲಿಯೇ ಮಾದರಿ ವಿಶ್ವ ವಿದ್ಯಾಲಯ ಮೀರಿಸುವ ಶಿಕ್ಷಣ ಸಂಸ್ಥೆ ತೆರಯುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವವಾಸ ಮೂಡಿಸುವ ಕೆಲಸ ಮಾಡಿದ್ದಾರೆ. ಎಂ.ಎನ್.ಪಾಟೀಲರ ಕನಸು ನನಸು ಮಾಡಿ ಈ ಭಾಗದ ಜನರಿಗೆ ಶಿಕ್ಷಣ ರಂಗದಲ್ಲಿ ಕ್ರಾಂತಿ ಬದಲಾವಣೆ ತರುವುದಲ್ಲದೇ ಸಹಕಾರಿ ಕ್ಷೇತ್ರದ ಬ್ಯಾಂಕ್, ರೈತರಿಗಾಗಿ ಅನ್ನದಾತ ಕೇಂದ್ರ, ಸುಪರ್ ಮಾರ್ಕೆಟ್‌ ಉದ್ಯೋಗ್ಯ, ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಸೇವೆ ಸರ್ಮಪಣೆ ಮಾಡುತ್ತಿದ್ದಾರೆ ಎಂದರು.

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಯು ವ್ಯಾಸಾಂಗ ನಂತರ ಡಿಗ್ರಿ ಶಿಕ್ಷಣ ಜೀವನದ ಮಹತ್ವ ಘಟವಾಗಿದೆ. ಇದನ್ನು ಅರಿತು ಮುಂದಿನ ಶಿಕ್ಷಣ ಪಡೆದು ವಿದ್ಯಾರ್ಜನೆ ನೀಡಿದ ಗುರುವಿನ ಹಾಗೂ ಶಿಕ್ಷಣ ಪಡೆದ ಸಂಸ್ಥೆ, ಹೆತ್ತ ತಂದೆ-ತಾಯಿಗಳಿಗೆ ಗೌರವದಿಂದ ನೊಡಿಕೊಳ್ಳಬೇಕು. ಮಹಾಂತೇಶ ಬಿರಾದಾರರವರು ಹೇಳಿದಾಗೆ ಕೆಲವು ಶಿಕ್ಷಣವಂತರ ತಮ್ಮಲ್ಲಿ ಜ್ಞಾನ ಶ್ರೀಮಂತಿಕೆ ಇದ್ದರೂ, ತಮ್ಮ ತಂದೆತಾಯಿಗಳಿಗೆ ಸರಿಯಾಗಿ ಪಾಲನೆ ಮಾಡದೇ ವೃದ್ಧಾಶ್ರಮಕ್ಕೆ ಸೇರಿಸುವುದು ವಿಷಾದನೀಯ ಈ ರೀತಿಯಾಗಿ ಯಾರು ಮಾಡಬಾರದು ಎಂದರು.

ಸಂಸ್ಥೆ ಆಡಳಿತಾಧಿಕಾರಿ ಡಿ.ಎಸ್.ಕುಂಠೆ, ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯ ಎಲ್.ಎಚ್.ಕತ್ತಿ, ಕಾಲೇಜು ಪ್ರಾಚಾರ್ಯ ಜಿ.ಆರ್.ಪಾಟೀಲ, ಮೋಜೊಂ ಮುಲ್ಲಾ, ಎಸ್.ಎಸ್.ಕುಲಕರ್ಣಿ, ಎಸ್.ಎಸ್.ಅಗೋಜಿ, ನೆತ್ರಾವತಿಎನ್.ಎಸ್‌ಇದ್ದರು. ಬಿಎಸ್ಸಿ, ಬಿಕಾಂ ಕಾಗೂ ಕಲಾ ಮಹಾವಿದ್ಯಾಲಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!