ಶಿಸ್ತುಬದ್ಧ ಜೀವನಶೈಲಿಯಿಂದ ಪಾರ್ಶ್ವವಾಯು ನಿಯಂತ್ರಣ ಸಾಧ್ಯ: ಡಾ. ತೇಜಸ್

KannadaprabhaNewsNetwork |  
Published : Oct 30, 2025, 01:45 AM IST
ಚಿಕ್ಕಮಗಳೂರು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಲಯನ್ಸ್ ಸೇವಾ ಭವನದಲ್ಲಿ ಹಮ್ಮಿಕೊಂಡಿದ್ದ ಪಾರ್ಶ್ವವಾಯು ನಿಯಂತ್ರಣ ಶಿಬಿರವನ್ನು ಖ್ಯಾತ ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಉದ್ಘಾಟಿಸಿದರು | Kannada Prabha

ಸಾರಾಂಶ

ಚಿಕ್ಕಮಗಳೂರುಶಿಸ್ತುಬದ್ಧ ಜೀವನ ಶೈಲಿ, ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆಯಿಂದ ಪಾರ್ಶ್ವವಾಯು ನಿಯಂತ್ರಿಸಬಹುದಾಗಿದೆ ಎಂದು ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆ ನರರೋಗ ತಜ್ಞ ಡಾ. ತೇಜಸ್ ಅಭಿಪ್ರಾಯಿಸಿದ್ದಾರೆ.

ಪಾರ್ಶ್ವವಾಯು ನಿಯಂತ್ರಣ ಶಿಬಿರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶಿಸ್ತುಬದ್ಧ ಜೀವನ ಶೈಲಿ, ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆಯಿಂದ ಪಾರ್ಶ್ವವಾಯು ನಿಯಂತ್ರಿಸಬಹುದಾಗಿದೆ ಎಂದು ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆ ನರರೋಗ ತಜ್ಞ ಡಾ. ತೇಜಸ್ ಅಭಿಪ್ರಾಯಿಸಿದ್ದಾರೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆ ಬ್ರೈನ್ ಹೆಲ್ತ್ ಕ್ಲಿನಿಕ್, ಆಶ್ರಯ ಫೌಂಡೇಷನ್ ಮತ್ತು ಚಿಕ್ಕಮಗಳೂರು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಲಯನ್ಸ್ ಸೇವಾ ಭವನದಲ್ಲಿ ಹಮ್ಮಿಕೊಂಡಿದ್ದ ಪಾರ್ಶ್ವವಾಯು ನಿಯಂತ್ರಣ ಶಿಬಿರದಲ್ಲಿ ಮಾತನಾಡುತ್ತಿದ್ದರು. ರಕ್ತನಾಳಗಳಿಗೆ ರಕ್ತಸಂಚಾರ ಕಡಿಮೆಯಾದಾಗ ಪಾರ್ಶ್ವವಾಯು ಸಂಭವಿಸುತ್ತದೆ. ಮೆದುಳಿನ ಅಸ್ವಸ್ಥತೆಯನ್ನು ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಮುಂದೆ ಆಗಬಹುದಾದ ಹೆಚ್ಚಿನ ತೊಂದರೆ ತಡೆಯಬಹುದಾಗಿದೆ. ಮೆದುಳಿನ ಜೀವಕೋಶಗಳಿಗೆ ಆಮ್ಲಜನಕ ಮತ್ತು ಇತರ ಪೋಷಕಾಂಶ ಗಳು ತಲುಪುವುದನ್ನು ತಡೆಯುತ್ತದೆ. ಇದರಿಂದ ಮೆದುಳಿನ ಜೀವಕೋಶಗಳು ಸಾಯುತ್ತವೆ. ಅಧಿಕ ರಕ್ತ ದೊತ್ತಡ ಮತ್ತು ಸಕ್ಕರೆ ಕಾಯಿಲೆ ಇರುವವರಲ್ಲಿ ಹೆಚ್ಚು ಪಾರ್ಶ್ವವಾಯು ಸಂಭವಿಸಲಿದ್ದು, ಸಕ್ಕರೆ ಕಾಯಿಲೆ ಯನ್ನು ಗಂಭೀರವಾಗಿ ಪರಿಗಣಿಸಿ, ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ಅಂಧತ್ವ, ಲಕ್ವ, ಹೃದಯಾಘಾತ, ನಗರಗಳಿಗೆ ಹಾನಿ ಅಲ್ಲದೇ ಮೂತ್ರಪಿಂಡ ಹಾನಿ ಸೇರಿದಂತೆ ಅನೇಕ ಸಂಕೀರ್ಣ ತೊಂದರೆಗಳಿಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದರು.ಖ್ಯಾತ ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮೆದುಳಿಗೆ ನರಗಳ ಮೂಲಕ ಸರಿಯಾದ ರೀತಿಯಲ್ಲಿ ರಕ್ತ ಪೂರೈಕೆ ಆಗದಿದ್ದಲ್ಲಿ ಪಾರ್ಶ್ವವಾಯು ನಂತಹ ಸಮಸ್ಯೆಗಳು ಸಂಭವಿಸುತ್ತವೆ. ಯಾವುದೇ ವಯಸ್ಸಿನ ಅಂತರವಿಲ್ಲದೇ ಸಂಭವಿಸಬಹುದಾದ ಪಾರ್ಶ್ವವಾಯು ಮನುಷ್ಯನ ಮೆದುಳಿಗೆ ನಿಗಧಿತ ಪ್ರಮಾಣದಲ್ಲಿ ರಕ್ತಸಂಬಂಧ ಕಡಿತಗೊಂಡಾಗ ಪಾರ್ಶ್ವವಾಯು ಸಂಭವಿಸುತ್ತದೆ. ಇದನ್ನು ತಡೆಯಲು ಮನುಷ್ಯ ನಿಯಮಿತ ಆಹಾರ ಸೇವನೆ, ವ್ಯಾಯಾಮದಿಂದ ತಡೆಯಬಹುದು ಎಂದು ತಿಳಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎನ್. ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಧುಮೇಹ, ಅಧಿಕ ರಕ್ತ ದೊತ್ತಡ, ಹೃದಯ ಸಂಬಂಧಿತ ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ರೋಗ ತಡೆಗಟ್ಟುವಿಕೆ ನಿಯಂತ್ರಣ ಕುರಿತ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ ಸ್ಟ್ರೋಕ್ ಹೆಲ್ತ್ ಕ್ಲಿನಿಕ್‌ನ ವೈದ್ಯ ಡಾ. ಶ್ರೇಯಾ, ಡಾ. ಚಂದನ್, ವಿನೋದ್, ಜೀವಿತ, ಭರತ್, ಲಯನ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸಿ.ಪಿ. ಸುರೇಶ್, ಲಯನ್ ಕ್ಲಬ್ ಹಿರಿಯ ಸದಸ್ಯರಾದ ಎಂ.ಆರ್. ಕೇಶವಮೂರ್ತಿ, ಲಯನ್ಸ್ ಗಣೇಶ್, ಲಯನ್ಸ್ ಕ್ಲಬ್‌ನ ರತ್ನಾಕರ್, ಬಾಲಕೃಷ್ಣ, ಲಯನ್ ನಜ್ಮಾ ಆಲಿ, ಲಯನ್ ನಜ್ಮಾ ನಿಖತ್, ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಲಯನ್ ಕಾರ್ಯದರ್ಶಿ ಗೋಪಿಕೃಷ್ಣ ಸ್ವಾಗತಿಸಿ ಆಶ್ರಯ ಫೌಂಡೇಷನ್ ಅಧ್ಯಕ್ಷೆ ಡಾ. ವರ್ಷ ವಂದಿಸಿದರು. ಲಯನ್ ಕ್ಲಬ್ ಮಾಜಿ ಅಧ್ಯಕ್ಷ ಜಿ. ರಮೇಶ್ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು