ಆನ್‌ಲೈನ್ ಮೂಲಕ ಔಷಧ ಮಾರಾಟಕ್ಕೆ ತೀವ್ರ ವಿರೋಧ

KannadaprabhaNewsNetwork |  
Published : May 21, 2026, 01:30 AM IST
ಫೋಟೋ 20ಪಿವಿಡಿ1ಪಾವಗಡ,ಅನ್‌ಲೈನ್‌ ಮಾರಾಟ ವಿರೋಧಿಸಿ ದೇಶಾಧ್ಯಂತ ಕರೆ ಕೊಟ್ಟಿದ್ದ ಹಿನ್ನಲೆಯಲ್ಲಿ ಪಟ್ಟಣದ ಖ್ಯಾತಿಯ ಶಾಂತಿ ಮೆಡಿಕಲ್ ಸೇರಿದಂತೆ ತಾಲೂಕಿನಧ್ಯಂತ ಖಾಸಗಿ ಔಷಧಿ ಅಂಗಡಿಗಳನ್ನು ಬಂದ್‌ ಮಾಡಿ ಬೆಂಬಲ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಆನ್‌ಲೈನ್ ಮೂಲಕ ಔಷಧ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿ ದೇಶಾದ್ಯಂತ ಬಂದ್‌ ಕರೆ ನೀಡಿದ್ದ ಹಿನ್ನಲೆಯಲ್ಲಿ ಬುಧವಾರ ಪಾವಗಡ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ಖಾಸಗಿ ಔಷಧ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಪರಿಣಾಮ ಸಾರ್ವ ಜನಿಕರಿಗೆ ಔಷಧ ಖರೀದಿಯಲ್ಲಿ ತೊಂದರೆ ತೀವ್ರ ತೊಂದರೆ ಅನುಭವಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಆನ್‌ಲೈನ್ ಮೂಲಕ ಔಷಧ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿ ದೇಶಾದ್ಯಂತ ಬಂದ್‌ ಕರೆ ನೀಡಿದ್ದ ಹಿನ್ನಲೆಯಲ್ಲಿ ಬುಧವಾರ ಪಾವಗಡ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ಖಾಸಗಿ ಔಷಧ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಪರಿಣಾಮ ಸಾರ್ವ ಜನಿಕರಿಗೆ ಔಷಧ ಖರೀದಿಯಲ್ಲಿ ತೊಂದರೆ ತೀವ್ರ ತೊಂದರೆ ಅನುಭವಿಸಿದರು.

ಇಲ್ಲಿನ ಔಷಧಿ ವ್ಯಾಪಾರ ಸಂಘದ ಅಧ್ಯಕ್ಷರಾದ ರಾಮು , ಸಂಘದ ಕಾರ್ಯದರ್ಶಿ, ಸಂಘದ ಜಿಲ್ಲಾ ಉಪಾಧ್ಯಕ್ಷ ದೇವರಾಜ್ ನೇತೃತ್ವದಲ್ಲಿ ಬಂದ್‌ ಕರೆಕೊಟ್ಟಿದ್ದ ಹಿನ್ನಲೆಯಲ್ಲಿ ಖಾಸಗಿ ಔಷಧ ಅಂಗಡಿಗಳಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಬೇಡಿಕೆಗೆ ಆಗ್ರಹಿಸಿದರು. ಆನ್‌ಲೈನ್ ಔಷಧ ಮಾರಾಟದಿಂದ ಸ್ಥಳೀಯ ಔಷಧ ಅಂಗಡಿಗಳ ವ್ಯಾಪಾರಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ. ವೈದ್ಯರ ಚೀಟಿ ಇಲ್ಲದೆ ಔಷಧ ವಿತರಣೆ ನಡೆಯುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆಯ ಬಗ್ಗೆ ಎಲ್ಲ ಖಾಸಗಿ ಔಷಧ ಅಂಗಡಿ ಮಾಲೀಕರು ತೀವ್ರ ಆತಂಕ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಜನೌಷಧ ಕೇಂದ್ರಗಳು ಹಾಗೂ ಕೆಲ ಅಗತ್ಯ ಸೇವೆಯ ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ಔಷಧ ಅಂಗಡಿಗಳನ್ನು ಬಂದ್ ಮಾಡಿದ್ದರು. ತುರ್ತು ಔಷಧಿಗಾಗಿ ಬಂದ ರೋಗಿಗಳು, ಸಾರ್ವ ಜನಿಕರು ಪರದಾಡುವ ಸ್ಥಿತಿ ನಿರ್ಮಾಣ ಸಾಮಾನ್ಯವಾಗಿತ್ತು. ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ವೇಳೆ ತಾಲೂಕು ಔಷಧಿ ಮಾರಾಟ ಕೇಂದ್ರ ಸಂಘಟನೆಯ ಉಪಾಧ್ಯಕ್ಷ ಸತ್ಯ ಮೆಡಿಕಲ್‌ ಶಿವಪ್ರಸಾದ್‌, ಖಚಾಂಚಿ ಶ್ರೀರಾಮ್‌ ಮೆಡಿಕಲ್‌ ಸೆಂಟರ್‌ನ ಅಂಜನರೆಡ್ಡಿ ಸೇರಿದಂತೆ ಪಟ್ಟಣದ ಎಲ್ಲ ಔಷಧ ಅಂಗಡಿ ಮಾಲೀಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರುದ್ರಭೂಮಿಗಾಗಿ ವೀರಶೈವ ಲಿಂಗಾಯತ ಸಮಾಜದಿಂದ ತಹಸೀಲ್ದಾರರಿಗೆ ಮನವಿ
ಪರೀಕ್ಷಾ ಪ್ರಾಧಿಕಾರಗಳು ಜವಾಬ್ದಾರಿಯಿಂದ ಕೆಲಸ ಮಾಡಲಿ