ಕನಕಪುರ: ಕುಡಿಯುವ ನೀರಿನ ಸಮಸ್ಯೆ ತಲೆದೋರಿ ನೀರಿಗಾಗಿ ಪರದಾಡುತ್ತಿದ್ದರೂ ನಗರಸಭೆ ಅಧಿಕಾರಿಗಳು ನಮ್ಮ ಸಮಸ್ಯೆಗೆ ಕ್ಯಾರೆ ಎನ್ನದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದರಿಂದ ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ನಿವಾಸಿಗಳು ಪ್ರತಿನಿತ್ಯ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಇರುವ ಐದು ಕೊಳವೆ ಬಾವಿಗಳಲ್ಲಿ ಒಂದರಲ್ಲಿ ಅಂತರ್ಜಲ ಬತ್ತಿದೆ. ಒಂದರ ಮೋಟರ್ ಸುಟ್ಟುಹೋಗಿದೆ. ಮತ್ತೊಂದರಲ್ಲಿ ಕೇಸಿಂಗ್ ತೂತಾಗಿ ಅದರೊಳಗೆ ಯುಜಿಡಿ ನೀರು ಸೇರಿ ಕಲುಷಿತವಾಗಿದೆ. ಉಳಿದ ಎರಡು ಕೊಳವೆ ಬಾವಿಗಳಲ್ಲಿ ಮೂರು ದಿನಗಳ ಹಿಂದೆ ಒಂದರ ಕೇಬಲ್ ಸುಟ್ಟುಹೋಗಿದೆ. ಸದ್ಯಕ್ಕೆ ಒಂದು ಕೊಳವೆ ಬಾವಿಯಲ್ಲಿ ಬರುವಂತಹ ನೀರನ್ನು ಇಡೀ ಬಡಾವಣೆಯ 400 ಮನೆಗಳಿಗೆ ಪೂರೈಕೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ, ನಾವು ನಗರಸಭೆ ವ್ಯಾಪ್ತಿಯಲ್ಲಿ ಇದ್ದೆವೊ ಇಲ್ಲವೋ ಎನ್ನುವಂತಾಗಿದೆ. ಕನಿಷ್ಠ ಪಕ್ಷ ಕುಡಿಯುವ ನೀರನ್ನಾದರೂ ಪೂರೈಕೆ ಮಾಡದಿದ್ದರೆ ಮತ್ತೇನು ಮಾಡಲು ಇವರಿಂದ ಸಾಧ್ಯ, ಕೆಟ್ಟಿರುವ ಕೊಳವೆ ಬಾವಿಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೆ ಅವರು ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಅವರ ಮೇಲಿನ ಅಧಿಕಾರಿಗಳಿಗೆ ತಿಳಿಸೋಣವೆಂದರೆ ನಗರಸಭೆಗೆ ಮುಖ್ಯ ಅಧಿಕಾರಿಯೆ ಇಲ್ಲವಾಗಿದ್ದಾರೆ. ನಮ್ಮ ಸಮಸ್ಯೆಯನ್ನು ಸರಿಪಡಿಸದಿದ್ದರೆ ಮುಂದೆ ನಗರಸಭೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದೂ ಬಡಾವಣೆಯ ನಾಗರಿಕರೂ ಎಚ್ಚರಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕೋಟ್..............ಬಡಾವಣೆಯಲ್ಲಿ ಸುಮಾರು 400 ಕುಟುಂಬಗಳಿದ್ದು ಐದು ಕೊಳವೆ ಬಾವಿಗಳಿವೆ. ಅದರಲ್ಲಿ 4 ಕೊಳವೆ ಬಾವಿಗಳು ಕೆಟ್ಟಿದ್ದು, ಇನ್ನೂ ರಿಪೇರಿ ಆಗಿಲ್ಲ. ಒಂದರಲ್ಲಿ ಎಲ್ಲರಿಗೂ ನೀರು ಪೂರೈಸುವುದು ಅಸಾಧ್ಯ. ರಿಪೇರಿ ಮಾಡಿಸುವಂತೆ ನಗರಸಭೆಯ ಶ್ರೀದೇವಿ ಅವರಿಗೆ ಹೇಳಿದ್ದೇವೆ. ಇಲ್ಲಿಯವರೆಗೂ ರಿಪೇರಿ ಮಾಡಿಸಿಲ್ಲ, ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡುವುದಾಗಿ ಹೇಳುತ್ತಾರಷ್ಟೇ. ಆದರೆ, ಟ್ಯಾಂಕರ್ ಡ್ರೈವರ್‌ಗೆ ಫೋನ್ ಮಾಡಿದರೆ ಅವನು ಫೋನ್ ತೆಗೆಯುವುದಿಲ್ಲ. ನಮ್ಮನ್ನು ಜನರು ಬಂದು ಕೇಳುತ್ತಾರೆ ನಮ್ಮಿಂದ ಉತ್ತರಿಸಲು ಆಗುತ್ತಿಲ್ಲ.
ಕೋಟ್........
-ನಂದೀಶ್, ಜೂನಿಯರ್ ಇಂಜಿನಿಯರ್, ನಗರಸಭೆ
ಬಡಾವಣೆಯಲ್ಲಿ ನೀರಿನ ಸಮಸ್ಯೆ ಏತಕ್ಕಾಗಿ ಆಗಿದೆ ಎಂದು ನನ್ನ ಗಮನಕ್ಕೆ ಬಂದಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿರುವುದಾಗಿ ಮಾಹಿತಿ ಇದೆ. ಆದರೂ ಬಡಾವಣೆಗೆ ಟ್ಯಾಂಕರ್‌ನಲ್ಲಿ ನೀರು ಏಕೆ ಪೂರೈಕೆ ಆಗುತ್ತಿಲ್ಲ ಎಂದು ನೌಕರರನ್ನು ವಿಚಾರಿಸಿ ನೀರಿನ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು.
ಕೆ ಕೆ ಪಿ ಸುದ್ದಿ 01: