ಕನ್ನಡಪ್ರಭ ವಾರ್ತೆ ಬೇಲೂರು
ರಸ್ತೆಯ ನಡುವೆ ನೀರಿನ ಪೈಪ್ ಹಾನಿಯಾದ ಪರಿಣಾಮ ಕುಡಿಯುವ ನೀರು ಮನೆಗಳಿಗೆ ಸಮರ್ಪಕವಾಗಿ ಪೂರೈಕೆಯಾಗದೆ ಚರಂಡಿ ಪಾಲಾಗುತ್ತಿದ್ದು ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ತಮ್ಮ ಅಳಲಾಗಿದೆ. ಕಳೆದ ಸುಮಾರು ಮೂರು ತಿಂಗಳ ಹಿಂದೆ ರಸ್ತೆ ಕಾಮಗಾರಿ ಮಾಡುವೆ ವೇಳೆ ನೀರಿನ ಸಂಪರ್ಕದ ಮುಖ್ಯ ಪೈಪ್ ಹಾನಿಯಾದ ಪರಿಣಾಮ ನಮ್ಮ ಮನೆಗಳಿಗೆ ಬರಬೇಕಾದ ನೀರು ಚರಂಡಿಗೆ ಪೋಲಾಗುತ್ತಿದೆ, ಈ ಬಗ್ಗೆ ಪಂಚಾಯಿತಿಯವರಿಗೆ ತಿಳಿಸಿದ ಬಳಿಕ ಹಲವು ಬಾರಿ ಬಂದು ಪ್ರಯತ್ನ ಪಟ್ಟರು. ಆದರೆ ಇನ್ನೂ ಸರಿಯಾಗಿ ದುರಸ್ತಿಯಾಗಿಲ್ಲ. ಅಲ್ಲದೆ ಅಕ್ಕ ಪಕ್ಕದವರ ನಲ್ಲಿಯಲ್ಲಿ ನೀರು ಹಿಡಿಯಲು ಹೋಗಿ ನಮ್ಮ ನಮ್ಮಲ್ಲಿ ಮನಸ್ತಾಪ ಉಂಟಾಗಿ ಅತಿರೇಕದ ಜಗಳವೂ ಸಂಭವಿಸಿದೆ. ನಮ್ಮ ಮನೆಗೆ ನಲ್ಲಿ ಸಂಪರ್ಕವಿದ್ದರೂ ಜಗಳವಾಡುತ್ತಾ ನೀರು ತರುವ ಸನ್ನಿವೇಶ ಎದುರಾಗುತ್ತಿದೆ, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ದುರಸ್ಥಿಮಾಡಿಕೊಡಬೇಕೆಂದು ಸ್ಥಳೀಯರಾದ ಲತಾ, ಶೋಭಾ, ನಗಿನಾ ಹಾಗೂ ಇನ್ನಿತರರು ಮನವಿ ಮಾಡಿಕೊಂಡರು.