ಶೃಂಗೇರಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹200 ಕೋಟಿ ಅನುದಾನ: ಶಾಸಕ ಟಿ.ಡಿ.ರಾಜೇಗೌಡ

KannadaprabhaNewsNetwork |  
Published : Nov 25, 2025, 01:30 AM IST
೨೪ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಪಂನ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ನೆರವೇರಿಸಿದರು. ಎಸ್.ಮಂಜು, ಉಮಾ, ವಿಜಯಕುಮಾರ್, ಸುಜಿತ್, ಮಂಜುನಾಥ್, ಮಧುರ, ನಾಗಮ್ಮ, ಕಾವೇರಿ ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಶೃಂಗೇರಿ ಕ್ಷೇತ್ರದಲ್ಲಿ ವಿವಿಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಲು ಮಂಜೂರಾಗಿರುವ 200 ಕೋಟಿಗೂ ಅಧಿಕ ಅನುದಾನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಬನ್ನೂರು ಗ್ರಾಪಂನಿಂದ ನೂತನವಾಗಿ ನಿರ್ಮಿಸಿರುವ ಘನ ತ್ಯಾಜ ವಿಲೇವಾರಿ ಘಟಕ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಶೃಂಗೇರಿ ಕ್ಷೇತ್ರದಲ್ಲಿ ವಿವಿಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಲು ಮಂಜೂರಾಗಿರುವ 200 ಕೋಟಿಗೂ ಅಧಿಕ ಅನುದಾನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಬನ್ನೂರು ಗ್ರಾಪಂನಿಂದ ನೂತನವಾಗಿ ನಿರ್ಮಿಸಿರುವ ಘನ ತ್ಯಾಜ ವಿಲೇವಾರಿ ಘಟಕ ಉದ್ಘಾಟನೆ ಹಾಗೂ ಗ್ರಾಪಂ ನೂತನ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದ್ದು, ಎಲ್ಲಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರಿಗೆ, ಮಾಧ್ಯಮದವರಿಗೆ ತಿಳಿಯುತ್ತದೆಯೋ ಕೂಡಲೇ ಆ ಬಗ್ಗೆ ನನ್ನ ಗಮನಕ್ಕೆ ತನ್ನಿ. ಕಳೆದ ಒಂದೆರಡು ದಿನ ಕೆಲವೆಡೆ ಮಳೆ ಬಂದಿದ್ದು, ಅದರಿಂದ ಕಾಮಗಾರಿ ಕೊಂಚ ನಿಧಾನ ವಾಗಿದೆ. ಮಳೆ ಕಡಿಮೆಯಾದ ತಕ್ಷಣ ಪುನಃ ಆರಂಭಿಸಲಿದ್ದಾರೆ. ಮುತ್ತಿನಕೊಪ್ಪ ಭಾಗದಿಂದ ನಡೆಯುತ್ತಿರುವ ಗುಂಡಿ ಮುಚ್ಚುವ ಕಾರ್ಯ ಬಹಳ ಗುಣಮಟ್ಟದಿಂದ ಕೂಡಿದೆ ಎಂದರು.

ಗುಣಮಟ್ಟದ ಕೆಲಸ ಮಾಡಿಕೊಡಲೇ ಬೇಕು. ಕಾಮಗಾರಿ ದೀರ್ಘಕಾಲ ಉಳಿಯಬೇಕು. ಕ್ಷೇತ್ರದಲ್ಲಿ ಮೊದಲು ಗುಂಡಿ ಮುಚ್ಚಿ, ನಂತರ ಅಗತ್ಯವಿರುವಲ್ಲಿ ಮರು ಡಾಂಬರೀಕರಣ ಮಾಡಲಾಗುವುದು. ಅಗತ್ಯವಿರುವ ಕಡೆ ಸರ್ವೆ ನಡೆಸಿ ಈ ಕೆಲಸ ಮಾಡ ಲಾಗುವುದು. ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ನೀಡುವ ಹಣ ಜನರ ತೆರಿಗೆಯ ಹಣವೇ ಹೊರತು, ಸರ್ಕಾರವೇನು ಸ್ವತಃ ಪ್ರಿಂಟ್ ಮಾಡಿ ಅಭಿವೃದ್ಧಿಗೆ ಹಣ ನೀಡುವುದಿಲ್ಲ ಎಂದರು.

ಭದ್ರಾನದಿ ಸೇತುವೆ ಕಾಮಗಾರಿ ವಿಳಂಭವಾದ ಕುರಿತು ಇಂದೂ ಸಹ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಮಾತನಾಡಿದ್ದು, ಗುತ್ತಿಗೆದಾರನಿಗೆ ಹಣದ ಕೊರತೆ ಸ್ವಲ್ಪವೂ ಆಗಿಲ್ಲ. ಶೇ.75 ಅನುದಾನ ಈಗಾಗಲೇ ನೀಡಲಾಗಿದೆ. ಗುತ್ತಿಗೆದಾರ ಕಾಮಗಾರಿ ವಿಳಂಭ ಮಾಡಿದರೆ ಬ್ಲಾಕ್ ಲೀಸ್ಟ್‌ ಗೆ ಸೇರಿಸಲು ಶಿಫಾರಸ್ಸು ಮಾಡಬಹುದು. ಆದರೆ ಇದು ಕೆಲವು ವರ್ಷಗಳವರೆಗೆ ಮುಂದೆ ಹೋಗಲಿದೆ. ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದರೆ ಗುತ್ತಿಗೆದಾರ ಯಾವುದಾದರೂ ಕಾರಣವಿಟ್ಟು ಕೋರ್ಟ ಹೋಗುವ ಸಾಧ್ಯತೆಯಿದೆ. ಇದರಿಂದ ಕಾಮಗಾರಿ ವಿಳಂಭವಾಗಲಿದೆ ಎಂದರು. ಅಡಕೆ ಹಾನಿ ಬಗ್ಗೆ ಪರಿಹಾರ ಕೊಡುವ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇಲಾಖೆಯವರು ಶೇ.75ವರೆಗೆ ಹಾನಿಯಾಗಿದ ಬೆಳೆಗಳಿಗೆ ಪರಿಹಾರವನ್ನು ಹಿಂದೆಯೂ ನೀಡಿದ್ದಾರೆ. ಮುಂದೆಯೂ ನೀಡಲಿ ದ್ದಾರೆ. ಮಾನದಂಡದ ಆಧಾರದ ಮೇಲೆ ಪರಿಹಾರ ನೀಡಲಿದ್ದು, ಈ ಬಗ್ಗೆ ಕೇಂದ್ರದ ಕೃಷಿ ಸಚಿವರು, ರಾಜ್ಯದ ಸಚಿವರ ಬಳಿಯೂ ಮನವಿ ಮಾಡಿ ನಮ್ಮ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದರು.ಒತ್ತುವರಿ ಸಮಸ್ಯೆ ಬಗ್ಗೆ ಎಸ್‌ಐಟಿ ರಚನೆಯಾಗಿದೆ. ಸುಪ್ರೀಂ ಕೋರ್ಟ್ ಒತ್ತುವರಿ ಬಗ್ಗೆ ಇಡೀ ದೇಶಕ್ಕೆ ಒಂದೇ ಮಾನ ದಂಡ ಮಾಡಿದ್ದು, ಯಾವುದಾದರೂ ಜಾಗ ಅರಣ್ಯಕ್ಕೆ ವರ್ಗಾವಣೆಯಾಗಿ ಸೆಕ್ಷನ್ 17 ಆಗಿದ್ದರೆ ಅಂತಹ ಜಾಗವನ್ನು ಸರ್ಕಾರ ಮಂಜೂರು ಮಾಡಿಕೊಟ್ಟಿದ್ದರೆ, ಜನ ಒತ್ತುವರಿ ಮಾಡಿದ್ದರೆ ತೆರವುಗೊಳಿಸಬೇಕು ಎಂದು ಆದೇಶ ಮಾಡಲಾಗಿದೆ.ಈಗಾಗಲೇ ಸೆಕ್ಷನ್ 4/1, ಡೀಮ್ಡ್ ನೋಟಿಫಿಕೇಶನ್ ಆಗಿರುವುದು ಮಾನದಂಡ ಸರಿಯಿಲ್ಲ ಎಂದು ನಾವು ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದೇವೆ. ಇವುಗಳನ್ನು ಕೇವಲ ಸ್ಕೆಚ್ ನೋಡಿ ನೋಟಿಫಿಕೇಶನ್ ಮಾಡಲಾಗಿದೆ. ಕಂದಾಯ ಭೂಮಿಯಲ್ಲಿ ಸ್ವಲ್ಪ ಜಾಗ ಅರಣ್ಯಕ್ಕೆ ವರ್ಗಾವಣೆ ಮಾಡುವಾಗ ಅದು ಬದಲಾಗಿ ಸಂಪೂರ್ಣ ಜಾಗ ಅರಣ್ಯ ಎಂದಾಗಿದೆ. ಕೆಲವು ಕಡೆಗಳಲ್ಲಿ ಒಂದೇ ಭೂಮಿಯನ್ನು ಓವರ್ ಲ್ಯಾಪಿಂಗ್ ಮಾಡಿ 2-3 ಬಾರಿ ವರ್ಗಾವಣೆ ಮಾಡಲಾಗಿದೆ.ಇವು ಸರಿಪಡಿಸಲು ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡಬೇಕು ಎಂಬುದು ನಮ್ಮ ಆಗ್ರಹ. ಈಗಾಗಲೇ ಜಿಲ್ಲಾ ಹಂತದಲ್ಲಿ ಅಧಿಕಾರಿಗಳ ಟಾಸ್ಕ್ ಪೋರ್ಸ್ ಸಮಿತಿ ರಚನೆಯಾಗಿದೆ. ಸರ್ಕಾರದ ಹಂತದಲ್ಲಿ ಮಲೆನಾಡು ಭಾಗದ ಯಾವುದಾದರು ಒಬ್ಬ ಶಾಸಕರನ್ನು ಸಮಿತಿಗೆ ಸದಸ್ಯರನ್ನಾಗಿ ಮಾಡಲು ಒತ್ತಾಯಿಸಲಾಗಿದೆ. ಜಿಲ್ಲಾ ಹಂತದಲ್ಲಿ ಶಾಸಕರನ್ನು ಸಮಿತಿಗೆ ತೆಗೆದು ಕೊಳ್ಳಲು ಒತ್ತಾಯಿಸಲಾಗಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ನಮಗೆ ಮನವರಿಕೆ ಮಾಡಿಕೊಟ್ಟಿದ್ದು, ನಿಪಕ್ಷಪಾತವಾಗಿ ಸಮಿತಿ ಯಲ್ಲಿ ತೀರ್ಮಾನಗಳು ಆಗಬೇಕು. ಯಾರಿಗೂ ಅನ್ಯಾಯವಾಗಬಾರದೆಂದು ಅಧಿಕಾರಿಗಳ ಟಾಸ್ಕ್ ಪೋರ್ಸ್ ಸಮಿತಿ ರಚನೆಯಾಗಿದೆ. ರಾಜ್ಯಸಮಿತಿಯಲ್ಲಿ ಅರಣ್ಯ, ಕಂದಾಯ ಸಚಿವರು, ಕಂದಾಯ ಕಾರ್ಯದರ್ಶಿ ಮುಂತಾದವರು ಇರಬಹುದು. ಈ ಸಮಿತಿ ಈಗಾಗಲೇ ರಚನೆಯಾಗುತ್ತಿದೆ. ಇದರಲ್ಲಿ ಪೂರಕ ಕೆಲಸವಾಗಿ, ಬಹಳ ಹಿಂದೆ ಒತ್ತುವರಿ ಮಾಡಿರುವವರಿಗೆ ಹಕ್ಕುಪತ್ರ ಕೊಡುವ ಕಾರ್ಯ ನಡೆಯಲಿದೆ ಎಂಬ ಭರವಸೆ ನಮಗಿದೆ ಎಂದರು.ಬನ್ನೂರು ಗ್ರಾಪಂ ಅಧ್ಯಕ್ಷ ಎಸ್.ಮಂಜು, ಉಪಾಧ್ಯಕ್ಷೆ ಡಿ.ಎಲ್.ಉಮಾ, ಸದಸ್ಯರಾದ ವಿಜಯಕುಮಾರ್, ಬಿ.ಎಸ್.ಸುಜಿತ್, ಬಿ.ಮಂಜುನಾಥ್, ಜಿ.ಎಲ್.ಮಧುರ, ನಾಗಮ್ಮ, ಕಾವೇರಿ, ಕೆ.ವಿ.ಗೋಪಾಲ, ಸಿ.ಸಿ.ದೀಪ್ತಿ, ಕೆ.ಸಿ.ಪವಿತ್ರ, ತಾಪಂ ಇಓ ಎಚ್.ಡಿ.ನವೀನ್‌ಕುಮಾರ್, ಎಇಇ ಸಾಗರ್, ಪಿಡಿಓ ಎಸ್.ರಾಘವೇಂದ್ರ, ಎಚ್.ಬಿ.ಉಮೇಶ್, ಪ್ರಮುಖರಾದ ಇಫ್ತೆಖಾರ್ ಆದಿಲ್, ಮಹಮ್ಮದ್ ಹನೀಫ್, ಹೇಮಲತಾ, ರವಿಚಂದ್ರ, ಎಂ.ಎಸ್.ಅರುಣೇಶ್, ಮಹೇಶ್ ಆಚಾರ್ಯ, ಶಶಿಕಲಾ ಮತ್ತಿತರರು ಹಾಜರಿದ್ದರು.೨೪ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಪಂನ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ನೆರವೇರಿಸಿದರು. ಎಸ್.ಮಂಜು, ಉಮಾ, ವಿಜಯಕುಮಾರ್, ಸುಜಿತ್, ಮಂಜುನಾಥ್, ಮಧುರ, ನಾಗಮ್ಮ, ಕಾವೇರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೆಹಲಿ ಭೇಟಿ ವೇಳೆ ಉಪಮುಖ್ಯಮಂತ್ರಿ ನಿಗೂಢ ಹೇಳಿಕೆ
ಹುಣಸೂರಿನಲ್ಲಿ ₹10 ಕೋಟಿ ಚಿನ್ನ ದೋಚಿದ್ದವರು ಬಿಹಾರದಲ್ಲಿ ಬಲೆಗೆ