ಕನ್ನಡಪ್ರಭ ವಾರ್ತೆ ಕೋಲಾರ
ನಗರದ ಹೊರವಲಯದ ಸಮೈಖ್ಯ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ವಿದ್ಯೆ ಮತ್ತು ಉದ್ಯೋಗ ಎಂಬುದು ಬಹುಮುಖ್ಯ ಎಂದರು.
ಸಾಧನೆಗೆ ಗುರಿ ಇರಬೇಕುಶಿಕ್ಷಣ ಮತ್ತು ಉದ್ಯೋಗ ಪಡೆಯಲು ಸತತ ಪ್ರಯತ್ನ ಹಾಗೂ ಕಷ್ಟಪಟ್ಟಾಗ ಮಾತ್ರವೇ ಸಾಧ್ಯ. ಅದನ್ನು ಪಡೆಯಲು ಓದಿನ ಪ್ರಾರಂಭದಲ್ಲಿಯೇ ಗುರಿ ಇಟ್ಟುಕೊಂಡು ಸಾಧಿಸಲು ಮುಂದಾಗಬೇಕು ಅನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಲೋಚನೆಗಳು ಗುರಿ ಸಾಧನೆ ಕಡೆ ಇರಬೇಕು. ವಿದ್ಯಾರ್ಥಿಗಳಾದವರು ಓದಿನಲ್ಲಿ ಯಾವಾಗಲೂ ಮುಂದೆ ಇರಬೇಕು ನಮ್ಮಲ್ಲಿನ ಆತ್ಮಸ್ಥೆರ್ಯ ಹಾಗೂ ಛಲದಿಂದ ಪ್ರತಿಯೊಂದು ವಿಷಯದಲ್ಲಿ ಅಧ್ಯಯನ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಂದು ಹಂತದಲ್ಲೂ ಗುರಿ ಇಟ್ಟುಕೊಂಡು ಬಂದರೆ ಮಾತ್ರವೇ ಉತ್ತಮ ತೀರ್ಮಾನಗಳನ್ನು ತೆಗೆದುಕೊಂಡು ಉತ್ತಮ ಪ್ರಜೆಗಳಾಗಲು ಸಾಧ್ಯ ತಂದೆ ತಾಯಿಗಳು ನಿಮ್ಮಗಳ ಮಧ್ಯೆ ಕನಸು ಕಾಣುತ್ತಾ ಇದ್ದು ಕನಸು ನನಸು ಮಾಡಲು ನೀವುಗಳು ಶ್ರಮಿಸಬೇಕು. ವಿದ್ಯೆ, ಕ್ರೀಡೆ, ಸಾಹಿತ್ಯ, ಕಲೆ ಇದು ಒಬ್ಬರ ಸ್ವತ್ತು ಅಲ್ಲ ಎಲ್ಲರಿಗೂ ಸಿಗುತ್ತದೆ ಸದುಪಯೋಗ ಪಡಿಸಿಕೊಳ್ಳಬೇಕು ಸಮಯ ಸಿಕ್ಕಾಗ ಯಾವುದು ಮಾಡಬೇಕು ಎಂಬುದನ್ನು ತಿಳಿದು ಸಾಧನೆ ಮಾಡಿ ಸಾಧಕರಾಗಬೇಕು ಎಂದರು.
ವಿದ್ಯಾರ್ಥಿಗಳ ಜೀವನವೇ ದೇಶದ ಭವಿಷ್ಯವನ್ನು ಸೂಚಿಸುತ್ತದೆ ಎಚ್ಚರಿಕೆಯಿಂದ ದೇಶದ ಮತ್ತು ತಮ್ಮ ಭವಿಷ್ಯವನ್ನು ರೂಪಿಸಬೇಕಾಗಿದೆ ಪ್ರತಿಯೊಂದು ಕ್ಷೇತ್ರದಲ್ಲಿ ಅವಕಾಶಗಳು ಇವೆ ಸಮಾಜ ಕಟ್ಟುವ ಪ್ರಮುಖ ಪಾತ್ರವನ್ನು ವಹಿಸಬೇಕು ಜಿಲ್ಲೆಯ ರಾಜ್ಯದ ಕೀರ್ತಿ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಹಾರೈಸಿದರು.