ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾರ್ಯಕ್ರಮದ ಸಭಾ ಅಧ್ಯಕ್ಸತೆಯನ್ನು ಕುಂದಚೇರಿ ಪಂಚಾಯ್ತಿ ಸದಸ್ಯರು ಹಾಗು ಬಲವಿಕಾಸ ಸಮಿತಿ ಅಧ್ಯಕ್ಷರಾದ ಹ್ಯಾರೀಸ್ ವಹಿಸಿ ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಉದ್ಘಾಟನೆಯನ್ನು ಪೋಷಕರು ಬಾಲವಿಕಾಸ ಸಮಿತಿ ಸದಸ್ಯರು ಹಾಗೂ ಗಣ್ಯರು ದೀಪ ಬೆಳಗಿಸಿ ನೆರವೇರಿಸಿದರು. ಅತಿಥಿಗಳಾಗಿ ಭಾಗವಹಿಸಿದ ಪಂಚಾಯಿತಿ ಸದಸ್ಯರು, ದಾನಿಗಳು ಆದಂತಹ ವಿಸು ಪ್ರವೀಣ್ ಕುಮಾರ್ ಪಂಚಾಯಿತಿ ವತಿಯಿಂದ ಕುರ್ಚಿ ಹಾಗು ಇನ್ನಿತರ ಸೌಲಭ್ಯ ನೀಡಿದರ ಬಗ್ಗೆ ವಿವರಿಸಿದರು. ಸ್ವಂತ ಹಣದಿಂದ ಸದಸ್ಯರಾದ ಹ್ಯಾರೀಸ್ ಮಕ್ಕಳಿಗೆ ಅಂಗನವಾಡಿ ಸಮವಸ್ತ್ರ ನೀಡಿರುವುದನ್ನು ತಿಳಿಸಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಗಣ್ಯರು ಬಹುಮಾನ ಹಾಗೂ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು.ಕಾರ್ಯಕ್ರಮವನ್ನು ಪ್ರವಾಲಮನಿ ಅಂಗನವಾಡಿ ಕಾರ್ಯಕರ್ತೆ ಈಶ್ವರಿ ಪ್ರಾರ್ಥನೆ ಮೂಲಕ ಸಭೆ ಆರಂಭಿಸಿದರು. ಕಾಪಿಕಾಡು ಅಂಗನವಾಡಿ ಕಾರ್ಯಕರ್ತೆ ವಿಜಯವಾಹಿನಿ ನಿರೂಪಿಸಿ ಕೋಡಿಮೊಟ್ಟೆ ಅಂಗನವಾಡಿ ಕಾರ್ಯಕರ್ತೆ ಮಾಲತಿ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಸಹಕಾರ್ಯಕರ್ತೆ, ಸ್ತ್ರೀಶಕ್ತಿ ಪದಾಧಿಕಾರಿಗಳು, ಪೋಷಕ ತಂಡದವರು, ಪುಟಾಣಿ ಮಕ್ಕಳು ಹಾಜರಿದ್ದರು.