ಬಾವಿಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

KannadaprabhaNewsNetwork |  
Published : Jul 30, 2026, 01:45 AM IST
29ಕೆಎಂಎನ್ ಡಿ31 | Kannada Prabha

ಸಾರಾಂಶ

ತಾಲೂಕಿನ ದೇವಲಾಪುರ ಹ್ಯಾಂಡ್‌ಪೋಸ್ಟ್‌ನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೊಮೋ ವ್ಯಾಸಂಗ ಮಾಡುತ್ತಿದ್ದ ಗೌತಮ್ ಹಾಗೂ ನಾಲ್ಕೈದು ಮಂದಿ ಸ್ನೇಹಿತರು ಜೊತೆಗೂಡಿ ಜು.28ರಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಕಾಲೇಜು ಮುಗಿಸಿಕೊಂಡು ತೊಳಲಿ ಗಾಮದ ಕೆರೆ ಪಕ್ಕದಲ್ಲಿರುವ ಬಾವಿಯಲ್ಲಿ ಈಜಲು ತೆರಳಿದ್ದರು. ಈಜು ಬಾರದ ಗೌತಮ್ ತನ್ನ ಬ್ಯಾಗ್ ಮತ್ತು ಬಟ್ಟೆಯನ್ನು ದಡದಲ್ಲಿಟ್ಟು ಬಾವಿಗೆ ಧುಮ್ಮುಕುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದಾನೆ.

ನಾಗಮಂಗಲ: ಸ್ನೇಹಿತರ ಜೊತೆಗೂಡಿ ಬಾವಿಯಲ್ಲಿ ಈಜಲು ಹೋಗಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ತೊಳಲಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ್ದು, ಬುಧವಾರ ನಸುಕಿನ ವೇಳೆ ಮೃತದೇಹ ಪತ್ತೆಯಾಗಿದೆ.

ತಾಲೂಕಿನ ಕಾಚೇನಹಳ್ಳಿಯ ನಾಗರಾಜು ಪುತ್ರ ಗೌತಮ್(17) ಮೃತ ವಿದ್ಯಾರ್ಥಿ. ತಾಲೂಕಿನ ದೇವಲಾಪುರ ಹ್ಯಾಂಡ್‌ಪೋಸ್ಟ್‌ನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಪ್ಲೊಮೋ ವ್ಯಾಸಂಗ ಮಾಡುತ್ತಿದ್ದ ಗೌತಮ್ ಹಾಗೂ ನಾಲ್ಕೈದು ಮಂದಿ ಸ್ನೇಹಿತರು ಜೊತೆಗೂಡಿ ಜು.28ರಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಕಾಲೇಜು ಮುಗಿಸಿಕೊಂಡು ತೊಳಲಿ ಗಾಮದ ಕೆರೆ ಪಕ್ಕದಲ್ಲಿರುವ ಬಾವಿಯಲ್ಲಿ ಈಜಲು ತೆರಳಿದ್ದರು.

ಈಜು ಬಾರದ ಗೌತಮ್ ತನ್ನ ಬ್ಯಾಗ್ ಮತ್ತು ಬಟ್ಟೆಯನ್ನು ದಡದಲ್ಲಿಟ್ಟು ಬಾವಿಗೆ ಧುಮ್ಮುಕುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಕಂಡ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಬಾವಿಯ ದಡದಲ್ಲಿ ಬಟ್ಟೆ ಮತ್ತು ಕಾಲೇಜು ಬ್ಯಾಗ್ ಇರುವುದನ್ನು ಕಂಡ ಸ್ಥಳೀಯರು ಬ್ಯಾಗ್ ಪರಿಶೀಲಿಸಿದ ವೇಳೆ ವಿದ್ಯಾರ್ಥಿಯ ಹೆಸರು ಮತ್ತು ವಿಳಾಸ ತಿಳಿಯುತ್ತಿದ್ದಂತೆ ಸಮೀಪದ ಕಾಚೇನಹಳ್ಳಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು.

ತಕ್ಷಣ ಸ್ಥಳಕ್ಕಾಗಮಿಸಿದ ಗೌತಮ್ ಪೋಷಕರು ಮತ್ತು ಗ್ರಾಮಸ್ಥರು ಗಾಬರಿಗೊಂಡು ನಾಗಮಂಗಲ ಪಟ್ಟಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕದಳ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿಯುತ್ತಿದ್ದಂತೆ ಇನ್ಸ್‌ಪೆಕ್ಟರ್ ಶಿವಕುಮಾರ್ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿ ರಾತ್ರಿವರೆಗೂ ಬಾವಿಯಲ್ಲಿ ಶೋಧಕಾರ್ಯ ನಡೆಸಿದರಾದರೂ ಗೌತಮ್ ಮೃತದೇಹ ಪತ್ತೆಯಾಗಿರಲಿಲ್ಲ. ಬುಧವಾರ ನಸುಕಿನ 3 ಗಂಟೆ ಸಮಯದಲ್ಲಿ ಮೃತದೇಹ ಪತ್ತೆಯಾಗಿದೆ.

ಬಾವಿಯಿಂದ ಹೊರತೆಗೆದ ಗೌತಮ್ ಮೃತದೇಹವನ್ನು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಾಗಮಂಗಲ ಪಟ್ಟಣ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮ ವಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡತನ ಮೀರಿ ನೀಟ್‌ ಪರೀಕ್ಷೆಯಲ್ಲಿ ಸಾಧನೆಗೈದ ಕುಮಾರಸ್ವಾಮಿ
ಸಿಡಬ್ಲ್ಯೂಆರ್‌ಸಿ ಆದೇಶ ಖಂಡಿಸಿ ಚನ್ನಪಟ್ಟಣದಲ್ಲಿ ಪ್ರತಿಭಟನೆ