ಕನ್ನಡಪ್ರಭ ವಾರ್ತೆ ದಾಂಡೇಲಿ
ಪ್ರಕ್ರಿಯೆಯಲ್ಲಿ ಒಟ್ಟು ೨೪ ವಿದ್ಯಾರ್ಥಿಗಳು ವಿವಿಧ ತರಗತಿಗಳಿಂದ ವರ್ಗ ಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಗೌತಮ ಶಿರಹಟ್ಟಿ (ಬಿಎಸ್ಸಿ ಕಾಗದ ಮತ್ತು ತಿರುಳು ಅಂತಿಮ ವರ್ಷ), ಅಫಿಫಾಜರೀನ ಶೇಖ (ಬಿಕಾಂ ಅಂತಿಮ ವರ್ಷ) ಇವರು ವಿದ್ಯಾರ್ಥಿ ಒಕ್ಕೂಟದ ಸಂಯೋಜಕರಾಗಿ ಆಯ್ಕೆಗೊಂಡಿದ್ದಾರೆ. ಕ್ರೀಡಾ ಕಾರ್ಯದರ್ಶಿ ನಂದೀಶ ಹಿಕ್ಕನಗುತ್ತಿ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಹರಿ ಬಿ.ಜಿ., ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣಾ ಕೋಶ ಕಾರ್ಯದರ್ಶಿ ಗುರುಪ್ರಸಾದ ಸುಳ್ಳದ, ಲೈಂಗಿಕ ಕಿರುಕುಳ ವಿರೋಧಿ ಕೋಶ ಕಾರ್ಯದರ್ಶಿ ಮದಿಹಾ ನಾಯ್ಕ, ಶಿಸ್ತು ಮತ್ತು ರ‍್ಯಾಗಿಂಗ್ ವಿರೋಧಿ ಕೋಶ ಕಾರ್ಯದರ್ಶಿ ಪವಿತ್ರಾ ಬೈಲಾ, ಗ್ರಂಥಾಲಯ ಕಾರ್ಯದರ್ಶಿ ಮೊಹಮ್ಮದ್ ಹಸನರಾಜಾ ಶೇಖ ಆಯ್ಕೆಗೊಂಡಿರುತ್ತಾರೆ.
ತರಗತಿಗಳ ಪ್ರತಿನಿಧಿಗಳಾಗಿ ಲಕ್ಷ್ಮೀ ಕೋಲೇಕರ, ನಿರಂಜನ ಹಿರೇಮಠ ಬಿಎ ಮೊದಲನೇ ವರ್ಷ, ಬಿಬಿ ಆಯಿಷಾ, ಶಬನಮ ಬಿಎ 2ನೇ ವರ್ಷ, ಗುರುಪ್ರಸಾದ ಸುಳ್ಳದ, ಪವಿತ್ರಾ ಬೈಲಾ-ಬಿಎ ಅಂತಿಮ ವರ್ಷ, ದರ್ಶನ ನಾಯ್ಕ, ಸ್ಪಂದನಾ ವೆಲಪುಲಾ -ಬಿಎಸ್ಸಿ ಮೊದಲನೇ ವರ್ಷ, ಸಾನಿಕಾ ಕುಣಗಿನಕರ, ಪೂಜಾ ಸಾವಂತ ಬಿಎಸ್ಸಿ ಎರಡನೇ ವರ್ಷ, ಮದಿಹಾ ನಾಯ್ಕ, ಶ್ರೀಹರಿ ಬಿ.ಜಿ. ಬಿಎಸ್ಸಿ ಅಂತಿಮ ವರ್ಷ, ಪ್ರಣವ ಪಾಟೇಕರ, ಮೊನಿಕಾ ಚೌದರಿ ಬಿಕಾಂ ಮೊದಲನೇ ವರ್ಷ, ಉಷಾಕಿರಣ ಯೆಸುಮಾಲಾ, ಫೈಸನ್ ಶೇಖ ಬಿಕಾಂ ಎರಡನೇ ವರ್ಷ ಅಫಿಫಾಜರೀನ ಶೇಖ, ಮೊಹಮ್ಮದ್ ಹಸನರಾಜಾ, ಬಿಕಾಂ ಮೂರನೇ ವರ್ಷ, ಪವನ ಬೆಡಸುರ ಬಿಎಸ್ಸಿ ಕಾಗದ ಮತ್ತು ತಿರುಳು ಮೊದಲನೇ ವರ್ಷ, ವಿಶ್ವನಾಥ ಕೋಳೆ ಬಿಎಸ್ಸಿ ಕಾಗದ ಮತ್ತು ತಿರುಳು ಎರಡನೇ ವರ್ಷ, ವಿನಯ ಹಳ್ಳುರ, ಶಿಖರ ಸಿಂಗ್ ಬಿಸೆನ ಬಿಎಸ್ಸಿ ಕಾಗದ ಮತ್ತು ತಿರುಳು 3ನೇ ವರ್ಷ ಗೌತಮ ಶಿರಹಟ್ಟಿ ಮತ್ತು ನಂದೀಶ ಹಿಕ್ಕನಗುತ್ತಿ ಬಿಎಸ್ಸಿ ಕಾಗದ ಮತ್ತು ತಿರುಳು ಅಂತಿಮ ವರ್ಷ ಆಯ್ಕೆಗೊಂಡಿದ್ದಾರೆ.