ನಾಯಕತ್ವ ಗುಣ ಬೆಳೆಸಲು ವಿದ್ಯಾರ್ಥಿ ಘಟಕ ಮೊದಲ ಹೆಜ್ಜೆ : ಅಂಶುಮಂತ್

KannadaprabhaNewsNetwork |  
Published : Sep 01, 2025, 01:03 AM IST
ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ಎಂಇಎಸ್‌, ಎಸ್‌ಎಸ್ಎಂ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘವನ್ನು ಡಾ. ಅಂಶುಮಂತ್‌ ಅವರು ಉದ್ಘಾಟಿಸಿದರು. ಡಾ. ಡಿ.ಎಲ್‌. ವಿಜಯಕುಮಾರ್‌, ಕೇಶವಮೂರ್ತಿ, ಮಂಜುನಾಥ್‌ ಭಟ್‌ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಮೈಗೂಡಿಸಲು ಹಾಗೂ ಸಮಾಜದಲ್ಲಿ ಎದುರಾಗುವ ಸಮಸ್ಯೆ ಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಲು ವಿದ್ಯಾರ್ಥಿ ಸಂಘದ ಘಟಕ ಮೊದಲ ಹೆಜ್ಜೆ ಎಂದು ಭದ್ರ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಹೇಳಿದರು.

ಎಂಇಎಸ್ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಮೈಗೂಡಿಸಲು ಹಾಗೂ ಸಮಾಜದಲ್ಲಿ ಎದುರಾಗುವ ಸಮಸ್ಯೆ ಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಲು ವಿದ್ಯಾರ್ಥಿ ಸಂಘದ ಘಟಕ ಮೊದಲ ಹೆಜ್ಜೆ ಎಂದು ಭದ್ರ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಹೇಳಿದರು.ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ಎಂಇಎಸ್, ಎಸ್‌ಎಸ್‌ಎಂ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ನಾಯಕತ್ವ ಸುಮ್ಮನೆ ಬರುವುದಿಲ್ಲ, ಕಠಿಣ ಪರಿಶ್ರಮ ಹಾಗೂ ತಾಳ್ಮೆ ಇರುವವರಿಗೆ ಮಾತ್ರ ಸಾಧ್ಯವಾಗಲಿದೆ ಎಂದ ಅವರು, ನಾಯಕತ್ವ ಜವಾಬ್ದಾರಿ ಹೊತ್ತಿರುವವರು ತಂಡಗಳನ್ನು ರಚಿಸಿಕೊಂಡು ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆಗಳಿದ್ದು, ಪ್ರತಿಸ್ಪರ್ಧಿಗಳಿಂದಲೇ ಮುಂಚೂಣಿಗೆ ಬರಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲೂ ಅನೇಕ ಸವಾಲುಗಳಿವೆ. ಆದರೆ, ನಾಯಕತ್ವ ಗುಣ ಬೆಳೆಸಲು ಹಾಗೂ ಸಹಬಾಳ್ವೆ ಯಿಂದ ಸಾಗಲು ಒಗ್ಗಟ್ಟಿನಿಂದ ಕೂಡಿರಬೇಕು. ಆ ನಿಟ್ಟಿನಲ್ಲಿ ಎಂಇಎಸ್ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬೋಧಿಸಿ ರಾಜ್ಯದಲ್ಲೇ ಪ್ರತಿಷ್ಠಿತ ಶಾಲೆಯಾಗಿ ಹೊರಹೊಮ್ಮಿದೆ ಎಂದರು.

ಎಂಇಎಸ್ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ, ಆರಂಭದಲ್ಲಿ 12 ಮಕ್ಕಳಿಂದ ಆರಂಭಿಸಿದ ಪಿಯು ಕಾಲೇಜು, ಇದೀಗ 400ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಅಭ್ಯಾಸ ನಡೆಸಲು ಮೂಲ ಸಂಸ್ಥೆ ಹಿಂದಿನ ಹಿರಿಯರ ಕೊಡುಗೆಗಳೇ ಎಂದು ತಿಳಿಸಿದರು.

ಬಾಲ್ಯದಿಂದಲೇ ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆ, ವಿನಯತೆ ಹಾಗೂ ಆತ್ಮಸ್ಥೈರ್ಯ ಕೂಡಿದ್ದರೆ ಭವಿಷ್ಯದಲ್ಲಿ ನಾಯಕರಾಗಿ ಬೆಳವಣಿಗೆ ಹೊಂದಬಹುದು. ಯಶಸ್ಸು ಎಂಬುದು ಸುಲಭವಾಗಿ ದಕ್ಕುವುದಿಲ್ಲ, ಕಠಿಣ ಪರಿಶ್ರಮ ಅಗತ್ಯ. ಹೀಗಾಗಿ ಸಮಾಜಕ್ಕೆ ಹೊರೆಯಾಗದೇ, ಮಾದರಿಯಾಗಿ ಬದುಕಬೇಕು ಎಂದು ಕಿವಿಮಾತು ಹೇಳಿದರು.ಎಸ್.ಎಸ್.ಎಂ. ಪ.ಪೂ.ಕಾಲೇಜು ಪ್ರಾಚಾರ್ಯ ಎಂ.ಜೆ.ಗೋಪಾಲ್‌ರಾವ್ ಮಾತನಾಡಿ, 1984 ರಲ್ಲಿ ಪ್ರಾರಂಭಗೊಂಡ ದಿನದಿಂದಲೂ ಗುಣಮಟ್ಟದ ಶಿಕ್ಷಣ, ಪರಿಣಿತ ಬೋಧಕರು ಹಾಗೂ ಉತ್ತಮ ಆಡಳಿತ ಮಂಡಳಿ ಒಳಗೊಂಡಿದ್ದು ಇಂದಿನ ಪೈಪೋಟಿ ಯುಗದಲ್ಲೂ ಪ್ರತಿವರ್ಷ ಉತ್ತ ಮ ಫಲಿತಾಂಶ ನೀಡಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.ಇದೇ ವೇಳೆ ಪಿಯುಸಿಯಲ್ಲಿ ಅತಿ ಹೆಚ್ಚು ಗಳಿಸಿದ ಸುಮಾರು 26 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಂಇಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೇಶವಮೂರ್ತಿ, ಸಹ ಕಾರ್ಯ ದರ್ಶಿ ಎಸ್.ಶಂಕರನಾರಾಯಣ ಭಟ್, ಕಚೇರಿ ವ್ಯವಸ್ಥಾಪಕಿ ಶ್ರೀಲಕ್ಷ್ಮೀ, ಶೈಕ್ಷಣಿಕ ಸಲಹೆಗಾರ ಕೆ. ಎನ್.ಮಂಜುನಾಥ್‌ ಭಟ್ ಉಪಸ್ಥಿತರಿದ್ದರು. ಕಲಾ ವಿಭಾಗದ ಮುಖ್ಯಸ್ಥ ಎಚ್.ಕೆ.ಸುಭಾಷ್ ಸ್ವಾಗತಿಸಿದರು. ಜೀವನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಪಿ.ಎಂ.ಸುರೇಶ್ ನಿರೂಪಿಸಿದರು. ಶಹನಾಜ್ ಬಾನು ವಂದಿಸಿದರು. 31 ಕೆಸಿಕೆಎಂ 2ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ಎಂಇಎಸ್‌, ಎಸ್‌ಎಸ್ಎಂ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘವನ್ನು ಡಾ. ಅಂಶುಮಂತ್‌ ಉದ್ಘಾಟಿಸಿದರು. ಡಾ. ಡಿ.ಎಲ್‌. ವಿಜಯಕುಮಾರ್‌, ಕೇಶವಮೂರ್ತಿ, ಮಂಜುನಾಥ್‌ ಭಟ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ