ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಕುಡಿಯುವ ನೀರು, ಶೌಚಾಲಯ, ಚರಂಡಿ, ವಿದ್ಯುತ್, ಮೈದಾನ ದುರಸ್ತಿ, ಇಂಗುಗುಂಡಿ, ಕೈ ತೊಳೆಯುವ ವ್ಯವಸ್ಥೆಗಳನ್ನು ಒದಗಿಸುವಂತೆ ಮತ್ತು ರಾತ್ರಿ ಶಾಲೆಯಲ್ಲಿ ಪುಂಡರು ಮದ್ಯಪಾನ ಕೂಟ ನಡೆಸುವುದನ್ನು ತಡೆಯುವಂತಹ ಬೇಡಿಕೆಗಳನ್ನು ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಸಲ್ಲಿಸಿದರು.ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವಿದ್ಯಾರ್ಥಿನಿ ಅಮೃತಾ ಅಧ್ಯಕ್ಷೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿನಿ ರುಕ್ಮಣಿ, ತೇಜಸ್ವಿನಿ, ದೀಪಿಕಾ, ರೆಷ್ಮ, ದಿಕ್ಷಾ, ಕಲ್ಪಿತಾ, ಮಂಜುಳಾ ಇನ್ನಿತರ ವಿದ್ಯಾರ್ಥಿಗಳು ಸಮಸ್ಯೆ ಮತ್ತು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.ಮಕ್ಕಳಿಗೆ, ವಕೀಲ ರಫೀಕ್ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಅನುಷಾ, ಮಕ್ಕಳ ಹಕ್ಕು ಮತ್ತು ಅಭಿವೃದ್ಧಿ ವಿಚಾರವನ್ನು ತಿಳಿಸಿದರು.
ಪೊಲೀಸ್ ಠಾಣೆ ಸಹಾಯಕ ಠಾಣಾಧಿಕಾರಿ ಅರುಣ, ಮೊಬೈಲ್ ಹೆಚ್ಚು ಬಳಸದಂತೆ ಸಲಹೆ ನೀಡಿದರು.ಮಕ್ಕಳ ಸಹಾಯ ವಾಣಿಯ ಸಹಾಯಕಿ ಮಧು, ಮಕ್ಕಳ ಸಹಾಯ ವಾಣಿ ನಿರ್ವಹಿಸುವ ವಿಚಾರವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೇಂಕಟೇಶ್, ಸದಸ್ಯರಾದ ರಾಮಕೃಷ್ಣ, ವಿಜಯ್, ಅಣೀರಾ ಹರೀಶ್, ಮೂಕಳೇರ ಮಧು, ಅರತಿರಮೇಶ್, ವಿಮಲಾ, ಭಾರತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಪೊನ್ನಂಪೇಟೆ ಕ್ಲಸ್ಟರ್ ಸಮನ್ವಯ ಸಂಪನ್ಮೂಲ ಅಧಿಕಾರಿ ತಿರುನೆಲ್ಲಿಮಾಡ ಜೀವನ್, ಎಸ್.ಡಿ.ಎಂ.ಸಿ. ಉಪಾದ್ಯಕ್ಷೆ ನಾಗವೇಣಿ, ಮುಖ್ಯಶಿಕ್ಷಕ ವಿಜಯ, ವಾಸುವರ್ಮ, ಪಿ.ಎಸ್. ಪ್ರೌಢ ಶಾಲಾ ಶಿಕ್ಷಕ ಚಿದಾನಂದ, ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿ ರೀತಾ ಬಿ.ಎಸ್., ಶಾಲಾ ಶಿಕ್ಷಕರಾದ ಝಾನ್ಸಿ, ಎಂ.ಎ. ರೇಖಾ, ಪಿ.ಎ. ಗೀತಾ, ರಮ್ಯ ಸಿ.ಟಿ., ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್, ಟಿ.ಎಸ್., ಅಜಿತ ಕೆ.ಕೆ. ವಿದ್ಯಾರ್ಥಿಗಳು ಇದ್ದರು.ವಿದ್ಯಾರ್ಥಿಗಳೀಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್ ಹಾಗೂ ಪಿ.ಡಿ.ಓ. ಪುಟ್ಟರಾಜು ಅವರು ಮಕ್ಕಳಿಗೆ ಪಂಚಾಯಿತಿ ವತಿಯಿಂದ ಟಿಫನ್ ಬಾಕ್ಸ್, ನೀರಿನ ಫ್ಲಾಸ್ಕ್‌ಗಳನ್ನು ವಿತರಿಸಿದರು.