ಸಾರಾಂಶ
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಗೆ ವೀಕೆಂಡ್ ಹಿನ್ನೆಲೆಯಲ್ಲಿ 60 ಸಾವಿರಕ್ಕೂ ಅಧಿಕ ದೇಶ, ವಿದೇಶಿ ಪ್ರವಾಸಿಗರು ಹರಿದು ಬಂದಿದ್ದು, ಶನಿವಾರ 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಬಂದರೆ, ಭಾನುವಾರ 40 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿ ಹಂಪಿ ಸ್ಮಾರಕಗಳನ್ನು ವೀಕ್ಷಿಸಿದ್ದಾರೆ.
ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ರಥ ಬೀದಿ, ಎದುರು ಬಸವಣ್ಣ ಮಂಟಪ, ಕಡಲೆ ಕಾಳು ಗಣಪತಿ ಮಂಟಪ, ಸಾಸಿವೆ ಕಾಳು ಗಣಪತಿ ಮಂಟಪ, ಶ್ರೀಕೃಷ್ಣ ದೇವಾಲಯ, ಶ್ರೀಕೃಷ್ಣ ಬಜಾರ, ಬಡವಿ ಲಿಂಗ, ಉಗ್ರ ನರಸಿಂಹ, ಉದ್ದಾನ ವೀರಭದ್ರೇಶ್ವರ ದೇವಾಲಯ, ನೆಲಸ್ತರದ ಶಿವ ದೇವಾಲಯ, ಅಕ್ಕ-ತಂಗಿ ಗುಡ್ಡ, ರಾಣಿ ಸ್ನಾನ ಗೃಹ, ಮಹಾನವಮಿ ದಿಬ್ಬ, ರಾಜರ ರಹಸ್ಯ ಸಭಾ ಗೃಹ, ಅರಮನೆ ಪ್ರಾಂಗಣ, ಹಜಾರ ರಾಮ ದೇವಾಲಯ, ಕಮಲ ಮಹಲ್, ಗಜ ಶಾಲೆ, ಪಟ್ಟಾಭಿರಾಮ ದೇವಾಲಯ, ಅಚ್ಯುತರಾಮ ದೇವಾಲಯ, ವಿಜಯ ವಿಠಲ ದೇವಾಲಯ, ಕಲ್ಲಿನತೇರು, ಸಪ್ತಸ್ವರ ಮಂಟಪ, ರಾಜರ ತುಲಾಭಾರ, ಕೋದಂಡರಾಮ ದೇವಾಲಯ, ಅಚ್ಯುತರಾಯ ದೇವಾಲಯ, ಗೆಜ್ಜಲ ಮಂಟಪ, ಕುದುರೆಗೊಂಬೆ ಮಂಟಪ, ವರಾಹ ದೇವಾಲಯ, ಪುರಂದರದಾಸರ ಮಂಟಪ, ಸುಗ್ರೀವ ಗುಹೆ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಿಸಿದರು.ಹಂಪಿಗೆ ಭಾರೀ ಪ್ರಮಾಣದಲ್ಲಿ ದೇಶ, ವಿದೇಶಿ ಪ್ರವಾಸಿಗರು ಆಗಮಿಸಿರುವ ಹಿನ್ನೆಲೆಯಲ್ಲಿ ಪ್ರವಾಸಿ ಮಾರ್ಗದರ್ಶಿಗಳು, ಆಟೋ ಚಾಲಕರು, ಗೂಡಂಗಡಿಗಳು, ಹೋಟೆಲ್, ರೆಸಾರ್ಟ್ ಮತ್ತು ಪುಸ್ತಕ ಮಾರಾಟಗಾರರಿಗೂ ವ್ಯಾಪಾರ, ವಹಿವಾಟು ಆಗುತ್ತಿದೆ. ಹಂಪಿ ಪ್ರವಾಸೋದ್ಯಮದಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕೂಡ ಸೃಷ್ಟಿಯಾಗುತ್ತಿದೆ.
ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲೂ ವ್ಯಾಪಾರ ನಡೆಯುತ್ತಿದೆ. ಬಗೆ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರವಾಸಿಗರು ಕೂಡ ಉಣಬಡಿಸಲಾಗುತ್ತಿದೆ."ಹಂಪಿ ಸ್ಮಾರಕಗಳನ್ನು ವೀಕ್ಷಿಸಬೇಕೆಂಬ ಆಶಯದಿಂದ ನಾವು ಕುಟುಂಬ ಸಮೇತ ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿದ್ದೇವೆ. ಈ ಸ್ಮಾರಕಗಳು ನಿಜಕ್ಕೂ ನಮ್ಮ ಪರಂಪರೆಯನ್ನು ಕಟ್ಟಿಕೊಡುತ್ತಿವೆ. ನಾವು ಅದ್ಭುತ ಇತಿಹಾಸ ಹೊಂದಿದ್ದೇವೆ ಎಂಬುದನ್ನು ನಮಗೆ ಈ ಸ್ಮಾರಕಗಳು ಮನದಟ್ಟು ಮಾಡಿಕೊಟ್ಟಿದ್ದು, ಈ ಸ್ಮಾರಕಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ " ಎಂದು ಹೇಳುತ್ತಾರೆ ಪ್ರವಾಸಿಗರಾದ ರಾಣಿದೇವಿ.
ಹಂಪಿ ಸ್ಮಾರಕಗಳ ವೀಕ್ಷಣೆಗೆ ದೇಶದ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅದರಲ್ಲೂ ಬೆಂಗಳೂರು, ಮುಂಬಯಿ, ಪುಣೆಯಂಥ ನಗರಗಳಿಂದ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಂಪಿ ಸ್ಮಾರಕಗಳು ಪ್ರವಾಸಿಗರು ಕಣ್ಮನ ಸೆಳೆಯುತ್ತಿರುವುದರಿಂದ ವೀಕೆಂಡ್‌ಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಹಂಪಿಯತ್ತ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸ್ಥಳೀಯ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ದಿಲ್ಲಿ ಕಾರು ಸ್ಫೋಟದ ಬಳಿಕ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರವಾಸಿಗರ ವಾಹನ ಮತ್ತು ಕಾರುಗಳನ್ನು ಕೂಡ ತಪಾಸಣೆ ಮಾಡಲಾಗುತ್ತಿದೆ.;Resize=(128,128))
;Resize=(128,128))