ಜಿಲ್ಲೆಯಲ್ಲಿ ಸಹಕಾರ ಸಂಘಗಳು ಮಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿವೆ: ವಿ.ಎನ್. ಭಟ್ಟ

| Published : Nov 17 2025, 01:30 AM IST

ಜಿಲ್ಲೆಯಲ್ಲಿ ಸಹಕಾರ ಸಂಘಗಳು ಮಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿವೆ: ವಿ.ಎನ್. ಭಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಅರ್ಬನ್ ಬ್ಯಾಂಕುಗಳು, ಮಾರ್ಕೆಟೆಂಗ್ ಸೊಸೈಟಿಗಳು ಸೇರಿದಂತೆ ಸೊಸೈಟಿ, ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಜನರ ವಿಶ್ವಾಸ ಗಳಿಸಿವೆ.

ಭಟ್ಕಳ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ 72ನೇ ಸಹಕಾರ ಸಪ್ತಾಹ ಆಚರಣೆಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿಯ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಸಹಕಾರ ಯೂನಿಯನ್ ಕುಮಟಾ ಇವರ ನೇತೃತ್ವದಲ್ಲಿ ಏರ್ಪಡಿಸಲಾದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮವನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಹಕಾರ ಸಂಘಗಳು ಮಂಜೂಣಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಹಕಾರ ಕ್ಷೇತ್ರ ಬಲಿಷ್ಠಗೊಳಿಸಲು ನ. 14ರಿಂದ 20ರ ವರೆಗೆ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ. ದೇಶದಲ್ಲಿ ಸಹಕಾರ ಕ್ಷೇತ್ರ ಪ್ರಬಲವಾಗಿ ಬೆಳೆದಿದ್ದು, ವಿಶ್ವ ಬ್ಯಾಂಕೂ ಸಹ ಈ ವರ್ಷ ಸಹಕಾರ ವರ್ಷ ಎಂದು ಘೋಷಿಸುವುದರ ಮೂಲಕ ಸಹಕಾರ ಚಳವಳಿಗೆ ಬಲ ತುಂಬಿದೆ. ಬಡವರು, ಮಧ್ಯಮ ವರ್ಗದವರ ಮೇಲೆ ಹಣಕಾಸಿನ ಶೋಷಣೆ ಆಗುತ್ತಿರುವುದನ್ನು ಮನಗಂಡು ಸಹಕಾರ ಚಳವಳಿ ಆರಂಭಿಸಲಾಗಿದ್ದು, ಸಹಕಾರ ರಂಗ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಜಿಲ್ಲೆಯಲ್ಲಿ ಅರ್ಬನ್ ಬ್ಯಾಂಕುಗಳು, ಮಾರ್ಕೆಟೆಂಗ್ ಸೊಸೈಟಿಗಳು ಸೇರಿದಂತೆ ಸೊಸೈಟಿ, ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಜನರ ವಿಶ್ವಾಸ ಗಳಿಸಿವೆ. ಸಹಕಾರ ರಂಗದಲ್ಲಿ ಪಾರದರ್ಶಕ ವ್ಯವಹಾರ ನಡೆಸಿ ಜನರ ಪ್ರೀತಿ, ವಿಶ್ವಾಸ ಗಳಿಸಬೇಕು. ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಹಕಾರ ಕ್ಷೇತ್ರ ಮತ್ತಷ್ಟು ಮಂಚೂಣಿಗೆ ತರಲು ಮತ್ತು ಬಲಗೊಳಿಸಲು ಸಾಧ್ಯ ಎಂದರು.

ಕುಮಟಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಿ.ಕೆ. ಭಟ್ಟ ಮಾತನಾಡಿ, ಸಹಕಾರ ರಂಗದಲ್ಲಿ ಬದಲಾವಣೆ ಮಾಡಿಕೊಂಡು ಕೆಲಸ ಮಾಡಬೇಕು. ಸಹಕಾರ ರಂಗದಡಿಯಲ್ಲಿ ಜನತೆಗೆ ಸೇವೆ ಸಲ್ಲಿಸಲು ಹಲವು ಅವಕಾಶ ಇದ್ದು, ಇದನ್ನು ಸಂಘಗಳು ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಅರ್ಬನ್ ಬ್ಯಾಂಕಿನ ಅಧ್ಯಕ್ಷೆ ಮೆಹಮೂಬಿ ಪಟೇಲ್, ಮುಖ್ಯ ಅತಿಥಿಯಾಗಿದ್ದ ಸಹಕಾರಿ ಯೂನಿಯನ್‌ನ ನಿರ್ದೇಶಕ ರಾಜು ನಾಯ್ಕ, ಸಹಕಾರ ರತ್ನ ಪ್ರಶಸ್ತಿ ಪಡೆದ ಪೀಟರ್ ಅಂತೋನಿ, ಸನ್ಮಾನಿತರಾದ ಶಿರಾಲಿ ಸೊಸೈಟಿ ಅಧ್ಯಕ್ಷ ವೆಂಕಟೇಶ ನಾಯ್ಕ, ಅಳ್ವೆಕೋಡಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ವಿಠ್ಠಲ್ ದೈಮನೆ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್‌ನಿಂದ ಹೊನ್ನಾವರ ಹಡೀನಬಾಳ ಸೊಸೈಟಿಯ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು, ಗುಣವಂತೆ ಹಾಲು ಸೊಸೈಟಿ, ಶಿರಾಲಿ ಸೊಸೈಟಿಯ ಅಧ್ಯಕ್ಷ ವೆಂಕಟೇಶ ನಾಯ್ಕ, ಅಳ್ವೆಕೋಡಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ವಿಠ್ಠಲ ದೈಮನೆ ಅವರನ್ನು ಉತ್ತಮ ಕಾರ್ಯನಿರ್ವಹಣೆಗೆ ಸನ್ಮಾಸಿ ಗೌರವಿಸಿದರೆ, ಉತ್ತಮ ಸಹಕಾರಿ ನೌಕರ ಪ್ರಶಸ್ತಿಯನ್ನು ಜಾಲಿ ಸೊಸೈಟಿಯ ನಿವೃತ್ತ ಪ್ರಧಾನ ವ್ಯವಸ್ಥಾಪಕ ಗೋಯ್ದಯ್ಯ ನಾಯ್ಕ ಇವರಿಗೆ ನೀಡಲಾಯಿತು. ಶಿಕ್ಷಕ ಶ್ರೀಧರ ಶೇಟ್ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಮಂಜಪ್ಪ ನಾಯ್ಕ, ಸತೀಶ ಭಟ್ಟ, ಸಹಕಾರ ಇಲಾಖೆಯ ಸುಮನಾ ನಾಯ್ಕ, ಸರಿತಾ ಬೇತಾಳಕರ್, ಭಟ್ಕಳ ಅರ್ಬನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಪ್ರಶಾಂತ ಮುರುಡೇಶ್ವರ ಉಪಸ್ಥಿತರಿದ್ದರು. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಕ ಗೋಪಾಲ ನಾಯಕ ಸ್ವಾಗತಿಸಿದರು. ಜಾಲಿ ಸೊಸೈಟಿಯ ನೌಕರ ಭಾಸ್ಕರ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹೊನ್ನಾವರ- ಭಟ್ಕಳ ತಾಲೂಕಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.