ಸ್ವಾತಂತ್ರ್ಯದ ಬಳಿಕ ಏಕೀಕೃತ ಗಣರಾಜ್ಯವಾಗಿ ಸಂಘಟಿತಗೊಂಡು ವೈವಿಧ್ಯತೆಯಲ್ಲಿ ಏಕತೆ, ಶಾಂತಿ ಮತ್ತು ಸಮೃದ್ಧಿಯನ್ನು ಭಾರತ ಕಂಡಿದೆ.
ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಉಪವಿಭಾಗಾಧಿಕಾರಿ
ಕನ್ನಡಪ್ರಭ ವಾರ್ತೆ ಕುಮಟಾಸ್ವಾತಂತ್ರ್ಯದ ಬಳಿಕ ಏಕೀಕೃತ ಗಣರಾಜ್ಯವಾಗಿ ಸಂಘಟಿತಗೊಂಡು ವೈವಿಧ್ಯತೆಯಲ್ಲಿ ಏಕತೆ, ಶಾಂತಿ ಮತ್ತು ಸಮೃದ್ಧಿಯನ್ನು ಭಾರತ ಕಂಡಿದೆ. ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು ಅವರು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕಾದ್ದು ಅತ್ಯಗತ್ಯ ಎಂದು ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ ಹೇಳಿದರು. ಪಟ್ಟಣದ ಮಣಕಿ ಮಹಾತ್ಮಾಗಾಂಧಿ ಮೈದಾನದಲ್ಲಿ ಸೋಮವಾರ ತಾಲೂಕಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಪಥಸಂಚಲನದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.ಪರಸ್ಪರ ಸಹಕಾರ ಹಾಗೂ ಅಭಿವೃದ್ಧಿಯಿಂದ ಕುಮಟಾ ಉಪವಿಭಾಗವು ಮಾದರಿಯಾಗಿದೆ. ಇದೇ ರೀತಿ ಶಾಂತಿ ಸಮನ್ವಯತೆಯಿಂದ ನಾವೆಲ್ಲರೂ ಮುಂದೆ ಹೋಗೋಣ, ದೇಶಭಕ್ತಿಯ ಪ್ರತಿಜ್ಞೆ ಮಾಡೋಣ ಎಂದರು.ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧಕ ವಿದ್ಯಾರ್ಥಿಗಳಾದ ಕೆ.ಬಿ. ಅನೀಶ(ಯೋಗ), ದಿವಾನಾಯ್ಕ(ಪೋಲ್‌ವಾಲ್ಟ), ಧ್ರುವ ಕೆ.ವಾಳ್ಕೆ(ವೈಟ್‌ಲಿಫ್ಟಿಂಗ್), ಭೂಮಿಕಾ ಎನ್. ಹೆಗಡೆ(ಚೆಸ್), ದಿಶಾ ಎಸ್. ಶಾನಭಾಗ(ಕರಾಟೆ), ಸುದರ್ಶನ ಅಂಬಿಗ(ಲಗೋರಿ), ಪದ್ಮಾ ಎಚ್.ನಾಯಕ(ಚಿತ್ರಕಲೆ) ಅವರನ್ನು ಗೌರವಿಸಲಾಯಿತು. ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿದ್ದ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ನಿತೀಶ ಎಸ್. ಪಟಗಾರ, ಶಬಾನಾ, ನಾಗಶ್ರೀ ಹರಿಕಂತ್ರ ಅವರನ್ನು ಗೌರವಿಸಿ ಪುರಸ್ಕರಿಸಲಾಯಿತು. ಪಥಸಂಚಲನ ಹಾಗೂ ದೇಶಭಕ್ತಿಯ ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ನೆಲ್ಲಿಕೇರಿ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಸತೀಶ ನಾಯ್ಕ, ತಾಪಂ ಇಒ ರಾಜೇಂದ್ರ ಭಟ್, ಬಿಇಒ ಉದಯ ನಾಯ್ಕ, ಸಿಪಿಐ ಯೋಗೇಶ ಕೆ.ಎಂ., ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಗ್ರೇಡ್-೨ ತಹಸೀಲ್ದಾರ ಸತೀಶ ಗೌಡ, ಪಿಡಬ್ಲ್ಯುಡಿ ಎಇಇ ಪಿ.ಎಂ. ನಾಯ್ಕ, ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ನಿವೃತ್ತ ಲೆಕ್ಕಪರಿಶೋಧಕ ಡಿ.ಎಸ್. ನಾಯ್ಕ ಇತರರಿದ್ದರು. ಗಿಬ್ ಪ್ರೌಢಶಾಲೆ ಹಾಗೂ ಸಿವಿಎಸ್‌ಕೆ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ, ರೈತಗೀತೆ ಪ್ರಸ್ತುತಪಡಿಸಿದರು. ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರ್ವಹಿಸಿದರು. ಬಳಿಕ ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದವರಿಂದ ಪ್ರಕೃತಿ ವಿಕೋಪ, ಬೆಂಕಿ ಅವಘಡ ಮುಂತಾದ ತುರ್ತು ಪರಿಸ್ಥಿತಿಗಳಲ್ಲಿ ಸಂರಕ್ಷಣಾ ಕಾರ್ಯಾಚರಣೆಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.