ಹೃದಯಾಘಾತ, ಹೃದಯ ಸ್ತಂಭನ ಕುರಿತು ವಿದ್ಯಾರ್ಥಿಗಳಿಗೆ ಅರಿವು

KannadaprabhaNewsNetwork |  
Published : Sep 30, 2025, 12:00 AM IST
29ಕೆಎಂಎನ್ ಡಿ17 | Kannada Prabha

ಸಾರಾಂಶ

ಹೃದಯಾಘಾತವು ಹೃದಯಕ್ಕೆ ರಕ್ತದ ಹರಿವು ನಿಬಂಧಿಸಿದಾಗ ಸಂಭವಿಸುವ ಒಂದು ರಕ್ತ ಪರಿಚಲನೆಯಾದರೆ ಹೃದಯ ಸ್ತಂಭನ ಸಮರ್ಪಕವಾಗಿ ಬಡಿಯುವುದನ್ನು ನಿಲ್ಲಿಸಿದಾಗ ಸಂಭವಿಸುತ್ತದೆ. ಹೃದಯಾಘಾತ ಮತ್ತು ಹೃದಯ ಸ್ತಂಭನ ಇವೆರಡೂ ಒಂದೇ ಪರಿಸ್ಥಿತಿಯಲ್ಲ, ಎರಡೂ ಗಂಭೀರ ವೈದ್ಯಕೀಯ ತುರ್ತು ಸ್ಥಿತಿಗಳಾಗಿವೆ. ತಕ್ಷಣದ ಚಿಕಿತ್ಸೆ ಮತ್ತು ಸಹಾಯದ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡೋಂಟ್ ಮಿಸ್ ಎ ಬೀಟ್ ಅಡಿಯಲ್ಲಿ ವಿಶ್ವ ಹೃದಯ ದಿನ ಆಚರಿಸಲಾಯಿತು.

ಯುವ ರೆಡ್‌ ಕ್ರಾಸ್ ಘಟಕ, ಎನ್‌ಎಸ್‌ಎಸ್ ಘಟಕ, ಐಐಸಿ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಘಟಕವು ಮೈಸೂರಿನ ಅಪೋಲೋ ಆಸ್ಪತ್ರೆ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿ, ಹೃದ್ರೋಗ ತಜ್ಞ ಡಾ.ಕಿರಣ್ ನಾಗೇಶ್ ಮುಗದೂರ್ ಗಿಡಕ್ಕೆ ನೀರೆರೆಯುವ ಚಾಲನೆ ನೀಡಿದರು.

ನಂತರ ಮಾತನಾಡಿ, ಹೃದಯಾಘಾತವು ಹೃದಯಕ್ಕೆ ರಕ್ತದ ಹರಿವು ನಿಬಂಧಿಸಿದಾಗ ಸಂಭವಿಸುವ ಒಂದು ರಕ್ತ ಪರಿಚಲನೆಯಾದರೆ ಹೃದಯ ಸ್ತಂಭನ ಸಮರ್ಪಕವಾಗಿ ಬಡಿಯುವುದನ್ನು ನಿಲ್ಲಿಸಿದಾಗ ಸಂಭವಿಸುತ್ತದೆ ಎಂದರು.ಹೃದಯಾಘಾತ ಮತ್ತು ಹೃದಯ ಸ್ತಂಭನ ಇವೆರಡೂ ಒಂದೇ ಪರಿಸ್ಥಿತಿಯಲ್ಲ, ಎರಡೂ ಗಂಭೀರ ವೈದ್ಯಕೀಯ ತುರ್ತು ಸ್ಥಿತಿಗಳಾಗಿವೆ. ತಕ್ಷಣದ ಚಿಕಿತ್ಸೆ ಮತ್ತು ಸಹಾಯದ ಅಗತ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಕಾರಣ, ಲಕ್ಷಣ ಹಾಗೂ ಅದರ ಪರಿಹಾರ ಮತ್ತು ಪ್ರಮುಖ ವ್ಯತ್ಯಾಸಗಳ ಬಗ್ಗೆ ಅರಿವು ಮೂಡಿಸಿದರು.

ಪ್ರಾಂಶುಪಾಲ ಡಾ.ನಿಶಾಂತ್ ಎ. ನಾಯ್ಡು ಮಾತನಾಡಿ, ನಮ್ಮ ಕಣ್ಣಮುಂದೆಯೇ ಅದೆಷ್ಟೋ ಪ್ರತಿಭಾವಂತರು ಹೃದಯಾಘಾತದಿಂದ ಮರಣ ಹೊಂದುತ್ತಿದ್ದಾರೆ. ಅವರ ಜೊತೆಯಲ್ಲಿದ್ದವರಿಗೆ ಸಿಪಿಆರ್‌ನ ಜ್ಞಾನವಿದ್ದಿದ್ದರೆ ಇಂತಹ ಹೃದಯಾಘಾತಗಳನ್ನು ತಡೆಗಟ್ಟಬಹುದಿತ್ತು ಎಂದರು.

ಇಂದಿನ ಯುವಸಮೂಹಕ್ಕೆ ಇದರ ಅರಿವಾಗಲಿ ಎಂದು ಪ್ರಾತ್ಯಕ್ಷಿಕೆ ಮತ್ತು ಅದರ ಅರಿವಿನ ಪಾಠ ಇದರ ಲಾಭವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಈ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್.ಪುಟ್ಟರಾಜು, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಿ.ಪಿ.ಶಿವರಾಜು ಸಹಕಾರಕ್ಕೆ ಕೃತಜ್ಞತೆ ಅರ್ಪಿಸಿದರು.

ವೇದಿಕೆಯಲ್ಲಿ ಸಿಪಿಆರ್‌ನ ಸಂಯೋಜಕ ಶಿವು, ನ್ಯಾಕ್ ಸಂಯೋಜಕ ಚರಣ್ ರಾಜ್ ಎಚ್, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರ್ ಬಿ.ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿಪಿಆರ್‌ನ ತರಬೇತುದಾರರಾದ ಸೋಮಶೇಖರ್ ಹಾಗೂ ಜಾರ್ಜ್ ವಿವೇಕ್ ಇವರಿಂದ ಹೃದಯ ಸ್ತಂಭನ ಕುರಿತು ಪ್ರಾತ್ಯಕ್ಷಿಕೆ ನೀಡಿ ವಿದ್ಯಾರ್ಥಿಗಳಿಂದಲೂ ಅದರ ಪ್ರಯೋಗವನ್ನು ಮಾಡಿಸಿದರು. ಸಹಾಯಕ ಪ್ರಾಧ್ಯಾಪಕರಾದ ಸುರಭಿ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ