ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ನಿಡಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ ಮದ್ದೂರು ಕದಂಬ ಅಲಯನ್ಸ್ ಕ್ಲಬ್ ಸಂಸ್ಥೆಯಿಂದ ನಡೆದ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಸೇರಿದಂತೆ ಪಠ್ಯ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಒಂದು ತಿಂಗಳಿನಲ್ಲಿ ಇದುವರೆಗೆ ಸುಮಾರು 30 ಸರ್ಕಾರಿ ಶಾಲೆಗಳಿಗೆ ನೋಟ್ ಪುಸ್ತಕಗಳು ಹಾಗೂ ಪಠ್ಯ ಪರಿಕರಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಿಡಘಟ್ಟ ಶಾಲೆಗೆ ಡೆಸ್ಕ್ ಗಳನ್ನು ನಮ್ಮ ಅಲಯನ್ಸ್ ಸಂಸ್ಥೆಯಿಂದ ನೀಡಲಾಗುವುದು ಎಂದರು.ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಕಡೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಇದರಿಂದ ಬಡವರ್ಗದ ಮಕ್ಕಳು ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಅಲಯನ್ಸ್ ಸಂಸ್ಥೆಯಿಂದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಉಳಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾಂಜಲಿ ಡೇವಿಡ್, ಶಾಲೆ ಮುಖ್ಯ ಶಿಕ್ಷಕಿ ಸುಧಾ, ಅಲಯನ್ಸ್ ಸಂಸ್ಥೆ ಚಂದ್ರಶೇಖರ್, ಟಿ.ನಾಗರಾಜು, ವಕೀಲರ ಸಂಘದ ಅಧ್ಯಕ್ಷ ಶಿವಣ್ಣ, ವಕೀಲರಾದ ವಿ.ಎಸ್.ನಾಗರಾಜು, ಅಲೈ ಕೃಷ್ಣಪ್ಪ, ರಘು, ಧನಂಜಯ, ಶ್ರೀನಿವಾಸ್ ಸೇರಿದಂತೆ ಶಾಲೆ ಶಿಕ್ಷಕರು ಹಾಜರಿದ್ದರು.