ಶಿರಹಟ್ಟಿ: ಪರಿಸರವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ. ನನ್ನ ಭೂಮಿ ನನ್ನ ಹೆಜ್ಜೆ ಎಂಬ ಧ್ಯೇಯ ವಾಕ್ಯವನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಂಡು ಪರಿಸರದ ಋಣವನ್ನು ತೀರಿಸಬೇಕು. ಕಡ್ಡಾಯವಾಗಿ ಪ್ರತಿಯೊಬ್ಬರೂ ಮನೆಗಳ ಮುಂದೆ ಸಸಿಗಳನ್ನು ನೆಡುವ ಮೂಲಕ ಪಟ್ಟಣವನ್ನು ಹಸಿರಾಗಿಸೋಣ ಎಂದು ಎಫ್.ಎಂ. ಡಬಾಲಿ ಸಂಯುಕ್ತ ಪದವಿಪೂರ್ವ ಕಾಲೇಜು ಆಡಳಿತಾಧಿಕಾರಿ ಐ.ಬಿ. ಬೆನಕೊಪ್ಪ ಕರೆ ನೀಡಿದರು.
ಸಾಮಾಜಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ರಂಗಪ್ಪ ಕಂಬಳಿ ಮಾತನಾಡಿ, ಇದೇ ಕಾಲೇಜಿಗೆ ಕಳೆದ ನಾಲ್ಕೈದು ವರ್ಷಗಳಿಂದ ನೂರಾರು ಸಸಿಗಳನ್ನು ನೀಡಲಾಗಿದ್ದು, ಇದೀಗ ಅವುಗಳು ಬೆಳೆದು ನಿಂತಿವೆ. ಈ ಬಾರಿಯೂ ಮತ್ತೆ ೧೦೦ ಸಸಿಗಳನ್ನು ನೆಡಲಾಗುತ್ತಿದೆ. ಅರಣ್ಯ ಇಲಾಖೆಗಳು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, ಜೀವ ವೈವಿಧ್ಯದ ನಿರ್ವಹಣೆ ಮತ್ತು ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ತಿಳಿಸಿದರು.
ಶಿವನಗೌಡ ಪಾಟೀಲ, ಉಪ ಅರಣ್ಯ ಅಧಿಕಾರಿ ಹಜರತಬಿ, ಉಪನ್ಯಾಸಕಿ ಸುಧಾ ಹುಚ್ಚಣ್ಣವರ, ರೇಣುಕಾ ಜಗಂಡಬಾವಿ, ಎನ್. ಹನುಮರಡ್ಡಿ, ಪರಶುರಾಮ ಕುಲಕರ್ಣಿ, ಎಂ.ಎಂ. ನಧಾಪ್, ಎಫ್.ಎ. ಬಾಬುಖಾನ್ನವರ, ಮುಖ್ಯೋಪಾಧ್ಯಾಯ ಎಫ್.ಎಂ. ಹಳ್ಳೆಮ್ಮನವರ, ಆರ್.ಎಫ್. ಬಟಗುರ್ಕಿ, ನೌಶಾದ್ ಶಿಗ್ಲಿ, ಎನ್.ಆರ್. ಉಡಚಗೊಂಡ, ಗಂಗಮ್ಮ ಕರಕಣ್ಣವರ, ಡಿ.ಐ. ಖಮಗಲ್, ಎಲ್.ಪಿ. ನಾಯಕಿ, ಸುನೀಲ ಲಮಾಣಿ, ಕೃಷ್ಣ ವಿ. ಗೌಡರ್, ಪಿ.ವಿ. ಹೊಸೂರ, ಗಣೇಶ ಬಡಿಗಣ್ಣವರ, ನಂದೀಶ ಕಾಳಗಿ, ಸುಮಾ ಡಾವಣಗೇರೆ ಗೀತಾ ಶೇಳಕೆ ಇತರರು ಇದ್ದರು.ಪರಿಸರ ರಕ್ಷಿಸಿ ಆರೋಗ್ಯ ಕಾಪಾಡಿಕೊಳ್ಳೋಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರುತಿ ಆರೇರ ಮಾತನಾಡಿ, ಪ್ರತಿಯೊಬ್ಬರೂ ಗಿಡ ಮರಗಳನ್ನು ಪ್ರಿತಿಸಿ, ನಮ್ಮ ಬದುಕನ್ನು ಹಸನಾಗಿಸಿಕೊಳ್ಳೋಣ ಎಂದರು.ವೀರಣ್ಣ ಕವಲೂರ, ಶರಣಪ್ಪ ಹಳ್ಳಿಗುಡಿ, ಶಾಂತಾ ಇಮ್ರಾಪುರ, ಎಚ್.ಎನ್. ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಎಸ್.ಸಿ. ಹರ್ತಿ ಸ್ವಾಗತಿಸಿದರು. ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ ಎಸ್.ಎಚ್. ನಿರೂಪಿಸಿದರು. ರವಿ ದೇವರಡ್ಡಿ ವಂದಿಸಿದರು.