ಕನ್ನಡಪ್ರಭ ವಾರ್ತೆ ಹಳೇಬೀಡು
೧ ಕೋಟಿ ವೆಚ್ಚದಲ್ಲಿ ಆಡಿಟೋರಿಯಂ: ಹಳೆಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿದ್ಯಾರ್ಥಿಗಳ ಕಲಿಕಾ ಹಿತದೃಷ್ಟಿಯಿಂದ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ಆ ನಿಟ್ಟಿನಲ್ಲಿ ಸದ್ಯದಲ್ಲಿಯೇ ಆಡಿಟೋರಿಯಂ ವ್ಯವಸ್ಥೆಯನ್ನು ಮಾಡಿಕೊಳ್ಳಲಿದ್ದು ಅದನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಹೊಯ್ಸಳ ನಾಡಿನಲ್ಲಿ ಕ್ರೀಡಾಂಗಣ ವ್ಯವಸ್ಥೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಬೇಲೂರಿನಲ್ಲಿ ಸುಮಾರು ನಾಲ್ಕು ಕೋಟಿಗಳು ವೆಚ್ಚದಲ್ಲಿ ಸುಸಜ್ಜಿತವಾದಂತಹ ಶಾಂತಲಾ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದ್ದು ಕಾಮಗಾರಿ ನಡೆಯುತ್ತಿದೆ. ಅದೇ ರೀತಿ ಹಳೇಬೀಡಿನಲ್ಲಿ ಹೊಯ್ಸಳ ಕ್ರೀಡಾಂಗಣವನ್ನು ಮುಂದಿನ ದಿನಗಳಲ್ಲಿ ಮಾಡಿಕೊಡಲು ಈಗಾಗಲೇ ಪ್ರದೇಶಗಳನ್ನು ನಿರ್ಮಿಸಿದ್ದು ಶೀಘ್ರದಲ್ಲಿ ಅದನ್ನ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜನ ಪ್ರಾಂಶುಪಾಲರಾದ ಡಾ. ಜಿ.ಡಿ ನಾರಾಯಣ್ ಮಾತನಾಡಿ, ಕಾಲೇಜು ಶಿಕ್ಷಣ ವ್ಯಕ್ತಿ ವಿಕಸನಕ್ಕೆ ಬೇಕಾದಂತಹ ಎಲ್ಲ ರೀತಿಯಾದಂತಹ ಪರಿಕರೆಗಳನ್ನ ಒದಗಿಸಿಕೊಡುತ್ತದೆ. ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉತ್ತಮ ಗ್ರಂಥಾಲಯ, ನೂತನ ವಿನ್ಯಾಸ ಕಟ್ಟಡ ಒಳಗೊಂಡಿದ್ದು, ವಿದ್ಯಾರ್ಥಿಗಳಿಗೆ ಬೇಕಾದಂತಹ ಎಲ್ಲಾ ಕಲಿಕಾ ಸೌಲಭ್ಯಗಳನ್ನು ಒಳಗೊಂಡಿದ್ದು ಉತ್ತಮ ಪ್ರಾಧ್ಯಾಪಕ ವರ್ಗದವರನ್ನು ಹೊಂದಿರುವುದರಿಂದ ಫಲಿತಾಂಶದಲ್ಲಿಯೂ ಕೂಡ ಶ್ರೇಷ್ಠತೆ ಹೊಂದಿರುವುದು ನಮ್ಮ ಹೆಗ್ಗಳಿಕೆಯಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸುಮಾರು ಏಳು ವರ್ಷಗಳ ಕಾಲ ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಅಧ್ಯಾಪರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ ವಸಂತ್ ಕುಮಾರ್ ವರ್ಗಾವಣೆಗೊಂಡಿದ್ದು ಅವರನ್ನು ಹಾಗೂ ವಿ.ಕೆ. ರೇಖಾರನ್ನು ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಕನ್ನಡ ಪ್ರಾಂಶುಪಾಲರಾದ ಡಾ. ಜಿ.ಡಿ ನಾರಾಯಣ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್‌ಗೌಡ, ಸಮಿತಿ ಕಾರ್ಯಅಧ್ಯಕ್ಷ ಚೇತನ್, ನಿವೇಶನ ದಾನಿಗಳಾದ ಪ್ರೇಮಣ್ಣ, ತೀರ್ಥ ಕುಮಾರ್, ಸಿಡಿಸಿ ಸದಸ್ಯರು, ಉಪನ್ಯಾಸಕರಾದ ಶ್ರೀನಿವಾಸ್, ಸಂತೋಷ್, ಸೃಜನ್, ಮಹೇಶ್, ಹರೀಶ್, ಜಫರ್ ಉಲ್ಲಾ ನೂರ್, ಆಯುಷಾ ಮಿಲನ, ದೀಪ್ತಿ, ಕಲಾವತಿ, ಎಂ.ಸಿ.ಕುಮಾರ್, ಡಿಂಪಲ್ ಕುಮಾರ್, ನಂದು ಕುಮಾರ್, ದಿವಾಕರ್, ಮುಂತಾದವರು ಹಾಜರಿದ್ದರು.